ಕರಾವಳಿ

ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿಗೆ ಕುಬ್ಜೆಯಿಂದ ತೀರ್ಥ ಸ್ನಾನ! (Video)

Pinterest LinkedIn Tumblr

ಕುಂದಾಪುರ: ಜಿಲ್ಲಾದ್ಯಂತ ಬಿಡದೇ ಸುರಿಯುತ್ತಿರುವ ಮಳೆಯ ನಡುವೆ ಕುಂದಾಪುರ ತಾಲೂಕಿನ ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಂಗಳವಾರ ಬೆಳಿಗ್ಗೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು.

 

ಕರಾವಳಿಯಲ್ಲಿ ಸುರಿಯುತ್ತಿರುವ ಧಾರಾಕರ ಮಳೆ ಹಿನ್ನೆಲೆ ದೇವಸ್ಥಾನದ ಸನಿಹವಿರುವ ಕುಬ್ಜಾ ನದಿ ಉಕ್ಕಿ ದೇವಸ್ಥಾನದ ಪ್ರಾಂಗಣದಿಂದ ಗರ್ಭಗುಡಿಗೆ ನೀರು ನುಗ್ಗಿ ಶ್ರೀ ದೇವಿಗೆ ಪವಿತ್ರ ಸ್ನಾನ ಮಾಡಿಸಿದ್ದು ನೆರೆದ ಭಕ್ತರನ್ನು ಪುಳಕಗೊಳಿಸಿತ್ತು. ಇನ್ನು ಈ ಪವಿತ್ರ ದ್ರಶ್ಯ ಕಣ್ತುಂಬಿಕೊಳ್ಳಲು ಬೆಳಿಗ್ಗೆನಿಂದಲೂ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಪಾಲ್ಘೊಳ್ಳುತ್ತಿದ್ದಾರೆ.ಮೂರ್ನಾಲ್ಕು ಅಡಿ ನೀರು ನಿಂತಿದ್ದು ಅದರ ನಡುವೆಯೇ ಭಕ್ತರು ನಿಂತು ದೇವಿ ದರ್ಶನ ಮಾಡುತ್ತಿದ್ದು ಪೂಜಾಕೈಂಕರ್ಯಗಳು ನಡೆಯುತ್ತಿದೆ.

ಪ್ರತಿವರ್ಷ ಮಳೆಗಾಲದಲ್ಲಿ ಕಮಲಶಿಲೆ ದೇವಸ್ಥಾನಕ್ಕೆ ಕುಬ್ಜಾ ನದಿ ನೀರು ಹೊಕ್ಕು ದೇವಿಯನ್ನು ತೋಯ್ಯುವುದು ಇಲ್ಲಿನ ವಾಡಿಕೆ. ಆದರೆ ಕಳೆದ ವರ್ಷ ಪ್ರಾಂಗಣದವರೆಗೆ ನುಗ್ಗಿದ ನೀರು ಒಳಕ್ಕೆ ಹೋಗಿರಲಿಲ್ಲ. ಕಳೆದೊಂದು ತಿಂಗಳಹಿಂದೆ ಮಳೆಗೆ ಕುಬ್ಜೆ ತುಂಬಿ ದೇವಸ್ಥಾನ ಆವರಣದವರೆಗೂ ನೀರು ಹೋಗಿತ್ತು.

ಬ್ರಹ್ಮಲಿಂಗನ ಆಲಯದಲ್ಲೂ ಮಳೆನೀರು!
ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸನ್ನಿಧಿಗೂ ಮಳೆ ನೀರು ನುಗ್ಗಿದ್ದು ದೇವಸ್ಥಾನ ಛತ್ರ, ಹೊರ ಪ್ರಾಂಗಣದವರೆಗೂ ನೀರು ನಿಂತಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.