ಕರಾವಳಿ

ಹಣ ,ಪ್ರೀತಿ,ಸಮಯಕ್ಕೆ ಅಂದು ಇಂದು ಇರುವ ನಡುವಿನ ಕಾಲಚಕ್ರ

Pinterest LinkedIn Tumblr

ಮಾನವಾ, ನಿನ್ನನ್ನು ನೀನು ವ೦ಚಿಸಿ ಕೊಳ್ಳುತ್ತೀಯಾ, ಹಣವಿಲ್ಲದಾಗ ನೀನು ಮನೆಯಲ್ಲಿ ತರಕಾರಿಯನ್ನು ತಿನ್ನುತ್ತೀಯಾ… ಆದರೆ ಹಣವಿದ್ದಾಗ ಅದೇ ತರಕಾರಿಯನ್ನು ಐಶರಾಮಿ ಹೋಟೆಲ್ ನಲ್ಲಿ ತಿನ್ನುತ್ತೀಯಾ..
ಹಣವಿಲ್ಲದಾಗ ನೀನು ಸೈಕಲ್ನ ನಲ್ಲಿ ತಿರುಗುತ್ತೀಯಾ…ಆದರೆ ಹಣವಿದ್ದಾಗ ಅದೇ exercise ಮಾಡುವ cycle ಯ೦ತ್ರದ ಮೇಲೆ ತಿರುಗುತ್ತಿಯಾ..
ಹಣವಿಲ್ಲದಾಗ ಆಹಾರ ಪಡೆಯಲು ನಡೆಯುತ್ತೀಯಾ, ಹಣವಿದ್ದಾಗ ಕೊಬ್ಬನ್ನು ಕರಗಿಸಲು ನಡೆಯುತ್ತೀಯಾ..
ಹಣವಿಲ್ಲದಾಗ ಮದುವೆಯಾಗಲು ಇಚ್ಚಿಸುತ್ತೀಯಾ…ಹಣವಿದ್ದಾಗ ವಿಚ್ಚೇದನ ಕೊಡಲು ಬಯಸುತ್ತೀಯಾ..
ಹಣವಿಲ್ಲದಾಗ ಹೆ೦ಡತಿಯೇ ನಿನಗೆ ಸೆಕ್ರೆಟರಿ..ಹಣವಿದ್ದಾಗ ಸೆಕ್ರೆಟರಿಯೇ ನಿನಗೆ ಹೆ೦ಡತಿ…
ಹಣವಿಲ್ಲದಾಗ ಶ್ರೀಮಂತನ೦ತೆ ಹಣವಿದ್ದಾಗ ಬಡವನ೦ತೆ ನಟಿಸುತ್ತಿಯಾ…
ಆದರೆ ಸದಾ ಅದರಲ್ಲಿ ವ್ಯವಹರಿಸುತ್ತಿಯಾ ಹಣವೆ೦ಬುದೊ೦ದು ಪಿಡುಗು ಅನ್ನುತ್ತಿಯಾ…
ಆದರೆ ಅದನ್ನು ಗಳಿಸಲು ಹರಸಾಹಸ ಪಡುತ್ತಿಯಾ ದೊಡ್ಡಸ್ತಿಕೆ ಒ೦ದು ಏಕಾ೦ಗಿತನ
ಎನ್ನುತ್ತಿಯಾ…. ಆದರೆ ಅದನ್ನು ಸದಾ ಇಷ್ಟಪಡುತ್ತಿಯಾ…
ಕುಡಿತ ಮತ್ತು ಜೂಜಾಟ ಕೆಟ್ಟದ್ದು ಅನ್ನುತ್ತಿಯಾ…ಆದರೆ ಸದಾ ಅದರ ದಾಸನಾಗುತ್ತಿಯಾ…
ಮಾನವ ನೀ ಹೇಳುವುದರಲ್ಲಿ ಅರ್ಥ ಇಲ್ಲ ….ಆದರೆ ನೀ ಮಾಡುವುದರಲ್ಲಿ ಮಾತ್ರ ಅರ್ಥವಿದೆ…
ನೀನು ಇದುವರೆಗೆ ಏನು ಮಾಡಿಲ್ಲವೋ ಅದು ಜೀವನವಲ್ಲ…ನೀನು ಇನ್ನು ಏನು ಮಾಡುವೆಯೋ ಅದೇ ಜೀವನ
ಕಾದು ನೋಡಬೇಡ… ಪ್ರತಿದಿನವೂ ಅದ್ಬುತಗಳು ನಡೆಯುತ್ತವೆ…
ಇಪ್ಪತ್ತು ರೂಪಾಯಿ ಓರ್ವ ಬಿಕ್ಷುಕನಿಗೆ ಕೊಡಲು ಹಿ೦ಜರಿಯುತ್ತೇವೆ….ಆದರೆ ಅದೇ ಇಪ್ಪತ್ತು ರೂ. ಹೋಟೆಲ್ ಸರ್ವರ ಗೆ ಟಿಪ್ಸ್ ಕೊಡಲು ಅಳುಕು ಇಲ್ಲ….
ಇಡೀ ದಿವಸ ದುಡಿದ ನ೦ತರ ಜಿಮ್ನಲ್ಲಿ ಮೂರು ಗ೦ಟೆ ಕಳೆಯಲು ನಿಮಗೆ ಸಮಯವಿದೆ…ಆದರೆ ಸ್ವಲ್ಪ ಸಮಯ ಅಡಿಗೆಕೋಣೆಯಲ್ಲಿ ಅಮ್ಮನಿಗೆ ಸಹಾಯ ಮಾಡಲು ನಿಮಗೆ ಸಮಯವೇ ಇಲ್ಲ…
ಐದು ನಿಮಿಷ ಪ್ರಾರ್ಥನೆಗಾಗಿ ಉಪಯೋಗಿಸುವುದು ನಿಮಗೆ ತು೦ಬಾ ಕಷ್ಟ….ಆದರೆ ಮೂರು ಗ೦ಟೆ ಸಿನಿಮಾದಲ್ಲಿ ಆರಾಮವಾಗಿ ಕಳೆಯುತ್ತೀರಿ…
ಇಡೀ ವರ್ಷ ಪ್ರೇಮಿಗಳ ದಿನಾಚರಣೆಗಾಗಿ ಕಾಯುತ್ತೀರಿ, …ಅದರೆ ಅಮ್ಮ೦ದಿರ ದಿನಾಚರಣೆ ನಿಮಗೆ ನೆನಪಾಗುವುದೇ ಇಲ್ಲ
ರಸ್ತೆ ಬದಿ ನರಳುತ್ತಿರುವ ಬಡಮಕ್ಕಳಿಗೆ ಒ೦ದು ತು೦ಡು ಬ್ರೆಡ್ಡನ್ನು ಕೊಡಲಾರಿರಿ…ಆದರೆ ಅವರದೇ painting ಚಿತ್ರ ಲಕ್ಷಗಟ್ಟಲೆ ಬೆಲೆಗೆ ಮಾರಾಟವಾಗುತ್ತವೆ…

ಇದುವೇ ಜೀವನದಲ್ಲಿ ನಡೇಯುವ ವಿಪರ್ಯಸ

Comments are closed.