ಕರಾವಳಿ

ಕೆಲವು ಆಯ್ದ ಆಹಾರಗಳನ್ನು ಸೇವಿಸಿ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹಿಡಿತದಲ್ಲಿರಿಸಿ…

Pinterest LinkedIn Tumblr

ಕೆಲವು ಆರೋಗ್ಯ ಸಮಸ್ಯೆಗಳು ನಮ್ಮ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಬಯಸಿದ್ದನ್ನು ತಿನ್ನುವಂತಿರುವುದಿಲ್ಲ, ತಿಂದಂತಹ ಆಹಾರ ಹೆಚ್ಚಾದರೂ ಸಮಸ್ಯೆ ತಪ್ಪಿದ್ದಲ್ಲ ಎನ್ನು ವಂತೆ ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ನಿತ್ಯವೂ ನಮಗೊಂದು ಆರೋಗ್ಯ ಸಮಸ್ಯೆ ಇದೆ ಎನ್ನುವುದನ್ನು ಪದೇ ಪದೇ ನೆನಪಿಸುತ್ತ, ನಮ್ಮ ಮಾನಸಿಕ ಸ್ಥಿತಿಯನ್ನು ಅಲ್ಲಾಡಿಸುವಂತೆ ಮಾಡುವ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಅತಿಯಾದ ಮಾನಸಿಕ ಒತ್ತಡ, ಅನುಚಿತ ಜೀವನ ಶೈಲಿ, ಕಳಪೆ ಮಟ್ಟದ ಆಹಾರ ಸೇವನೆ ಹಾಗೂ ಆನುವಂಶಿಕವಾಗಿ ಹುಟ್ಟಿಕೊಳ್ಳುವ ಆರೋಗ್ಯ ಸಮಸ್ಯೆ ಮಧುಮೇಹ.

ನ್ಯಾಷನಲ್ ಹೆಲ್ತ್ ಕೇರ್ ಸೆಂಟರ್ ಮತ್ತು ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ ಮಧುಮೇಹವು ಒಂದು ಹೊಸ ಸಾಂಕ್ರಾಮಿಕ ರೋಗ ಎಂದು ಅಂದಾಜಿಸಿದೆ. ಈ ಆರೋಗ್ಯ ಸಮಸ್ಯೆಯು ಪ್ರಪಂಚ ದಾದ್ಯಂತ ಹರಡಿದೆ. ಈ ಆರೋಗ್ಯ ಸಮಸ್ಯೆ ಇಲ್ಲದ ದೇಶಗಳಿಲ್ಲ ಎಂದು ಸಹ ಹೇಳಲಾ ಗುತ್ತಿದೆ. ಒಮ್ಮೆ ಈ ಆರೋಗ್ಯ ಸಮಸ್ಯೆ ವ್ಯಕ್ತಿಗೆ ಅಂಟಿತು ಎಂದಾದರೆ ಅದು ನಿರಂತರವಾಗಿ ಕಾಡುತ್ತಲೇ ಇರುತ್ತದೆ. ದೇಹದಲ್ಲಿ ಇರುವ ಶಕ್ತಿಯೂ ಸಹ ನಿಧಾನವಾಗಿ ಕರಗಲು ಪ್ರಾರಂಭಿ ಸುವುದು.

ಮಧುಮೇಹ ಎನ್ನುವುದು ಒಮ್ಮೆಲೇ ವ್ಯಕ್ತಿಯ ಆರೋಗ್ಯವನ್ನು ಗಂಭೀರ ಸ್ಥಿತಿಗೆ ತಳ್ಳುವುದಿಲ್ಲವಾದರೂ ಇದರ ಬಗ್ಗೆ ಬಹಳ ಕಾಳಜಿ ಹಾಗೂ ತಪಾಸಣೆಯನ್ನು ನಡೆಸುತ್ತಲೇ ಇರಬೇಕು. ಇದನ್ನು ನಿಯಂತ್ರಿಸಲು ಇರುವ ಪ್ರಮುಖ ವಿಧಾನ ಎಂದರೆ ಅದು ನಾವು ಸೇವಿಸುವ ಆಹಾರ. ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸದಂತಹ ಆಹಾರ ಪದಾರ್ಥವನ್ನು ಸೇವಿಸಬೇ ಕಾಗುವುದು. ಅಲ್ಲದೆ ಬಹಳ ಕಾಲ ಖಾಲಿ ಹೊಟ್ಟೆಯನ್ನು ಬಿಡದೆ ಆಗಾಗ ಆಹಾರವನ್ನು ಸ್ವೀಕರಿಸಬೇಕು. ಮಧು ಮೇಹ ಹೊಂದಿರುವವರು ಕೆಲವು ಆಯ್ದ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹಿಡಿತದಲ್ಲಿ ಇಡಬಹುದು. ಹಾಗಾದರೆ ಆ ಆಹಾರ ಪದಾರ್ಥಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ಬಯಸುವುದಾದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಕೊಬ್ಬಿನಿಂದ ಕೂಡಿದ ಮೀನು( ಫ್ಯಾಟಿ ಫಿಶ್):
ಆಂಚೋವಿ, ಸಲ್ಮೂನ್, ಹೆರಿಂಗ್, ಮ್ಯಾಕೆರೆಲ್ ಮತ್ತು ಸಾರ್ಡಿನೆಸ್ ಎನ್ನುವ ಆರೋಗ್ಯ ಕರವಾದ ಕೊಬ್ಬಿನಿಂದ ಕೂಡಿದ ಮೀನುಗಳು ಮಧುಮೇಹಿ ರೋಗಿಗಳಿಗೆ ಉತ್ತಮ ವಾದದ್ದು. ಇಪಿಎ ಮತ್ತು ಡಿಎಚ್‌ಎ ನಂತಹ ಒಮೆಗಾ-3 ಕೊಬ್ಬಿನಾ ಮ್ಲಗಳನ್ನು ಒಳಗೊಂಡಿರುವ ಕೊಬ್ಬಿನ ಮೀನುಗಳು ಹೃದಯದ ಸ್ಥಿರತೆಯನ್ನು ಕಾಪಾಡುತ್ತವೆ. ರಕ್ತನಾಳಗಳ ಆರೋಗ್ಯ ಕಾಪಾಡುವುದರ ಮೂಲಕ ಅಪಧಮನಿಗಳ ಕಾರ್ಯವನ್ನು ಸುಧಾರಿಸುತ್ತವೆ. ಉರಿಯೂತವನ್ನು ಕಡಿಮೆ ಮಾಡುತ್ತವೆ. ನಿತ್ಯವು ಮೀನುಗಳನ್ನು ಸೇವಿಸುವ ಜನರು ಹೃದಯಘಾತದಿಂದ ಸಾಯುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತದೆ. ಮೀನು ತಮ್ಮ ಮೆಟಾಲಿಕ್ ದರವನ್ನು ಹೆಚ್ಚಿ ಸುವ ಮತ್ತು ಪ್ರೋಟೀನ್‌ಗಳ ಸಮೃದ್ಧ ಮೂಲವಾಗಿದೆ.

ಸೊಪ್ಪುಗಳು :
ಹಸಿರು ಎಲೆಗಳಿಂದ ಕೂಡಿರುವ ತರಕಾರಿಗಳು ಆರೋಗ್ಯಕ್ಕೆ ಅತ್ಯುತ್ತಮವಾದದ್ದು ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಇವು ಕಡಿಮೆ ಕ್ಯಾಲೋರಿ ಪ್ರಮಾಣ ಹಾಗೂ ಅತ್ಯುತ್ತಮ ಪೌಷ್ಟಿಕಾಂಶವನ್ನು ಒಳಗೊಂಡಿ ರುತ್ತದೆ. ಅಧಿಕ ಪ್ರಮಾಣದ ಪೋಷಕಾಂಶಗಳು, ಖನಿಜಗಳು ಮತ್ತು ವಿಟಮಿನ್-ಸಿ ಒಳಗೊಂಡಿರುವ ಕೇಲ, ಪಾಲಕ್ ಸೇರಿದಂತೆ ಇನ್ನಿತರ ಸೊಪ್ಪುಗಳು ಅತ್ಯುತ್ತಮವಾದದ್ದು. ಇದು ಮಧುಮೇಹ-2 ರಂತಹ ರೋಗಿಗಳಲ್ಲಿ ರಕ್ಕದಲ್ಲಿರುವ ಸಕ್ಕರೆ ಮಟ್ಟವನ್ನು ಬಹುಬೇಗ ಕಡಿಮೆ ಮಾಡುವುದು. ಇವುಗಳಲ್ಲಿ ಝೀಕ್ಸಾಂಥಿನ್ ಮತ್ತು ಲುಟೀನ್ ನಂತಹ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವುದರಿಂದ ಉರಿಯೂತದಂತಹ ಸಮಸ್ಯೆಗಳನ್ನು ನಿವಾರಿಸುವುದು. ಆ್ಯಂಟಿ ಆಕ್ಸಿಡೆಂಟ್‌ಗಳು ಮಧುಮೇಹಗಳಿಗೆ ಅತ್ಯುತ್ತಮ ರಕ್ಷಣೆ ನೀಡುವವು.

ದಾಲ್ಚಿನ್ನಿ :
ಅಡುಗೆ ಪದಾರ್ಥಗಳ ತಯಾರಿಕೆಯಲ್ಲಿ ಬಳಸುವ ಹಾಗೂ ಸುಗಂಧದಿಂದ ಕೂಡಿದ ಪದಾರ್ಥ ವೆಂದರೆ ದಾಲ್ಚಿನ್ನಿ. ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟ ವನ್ನು ತಗ್ಗಿಸಲು ಮತ್ತು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುವಲ್ಲಿ ಅತ್ಯುತ್ತಮ ರೀತಿಯಲ್ಲಿ ಸಹಕರಿಸುವುದು. ಉತ್ಕರ್ಷಣ ನಿರೋಧಕ ಗುಣಗಳನ್ನು ಒಳಗೊಂಡಿದ್ದು, ಮಧುಮೇಹ ಟೈಪ್-2, ಕೊಲೆಸ್ಟ್ರಾಲ್ಗಳಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆಮಾಡುತ್ತದೆ. 3 ತಿಂಗಳಕಾಲ ಗಣನೀಯವಾಗಿ ದಾಲ್ಚಿನ್ನಿಯನ್ನು ಸೇವಿಸುವುದರಿಂದ ಹಿಮೊಗ್ಲೋಬಿನ್ ಎ1ಸಿ ಅನ್ನು ನಿಯಂತ್ರಿಸುತ್ತದೆ. ದೀರ್ಘ ಕಾಲದ ಮಧುಮೇಹ ಮಟ್ಟವನ್ನು ನಿರ್ಧರಿಸುತ್ತದೆ. ಟೈಪ್ 1 ಮಧುಮೇಹ ಮಟ್ಟವನ್ನು ಸಹ ನಿಯಂತ್ರಣದಲ್ಲಿ ಇಡುವುದು. ಇದನ್ನು ದಿನಕ್ಕೆ ಕೇವಲ ಒಂದು ಟೀ ಚಮಚ ದಷ್ಟು ಮಾತ್ರ ಸೇವಿಸಬೇಕು.

ಮೊಟ್ಟೆಗಳು :
ಚಿಕ್ಕವರಿಂದ ಹಿಡಿದು ದೊಡ್ಡವರು ಸಹ ಇಷ್ಟ ಪಡುವಂತಹ ಆಹಾರ ಪದಾರ್ಥವೆಂದರೆ ಮೊಟ್ಟೆ. ಇದರಲ್ಲಿ ಪ್ರೋಟೀನ್‌ಗಳು ಸಮೃದ್ಧವಾಗಿರುತ್ತವೆ. ನಿತ್ಯವೂ ಮೊಟ್ಟೆ ಸೇವನೆ ಮಾಡುವುದರ ಮೂಲಕ ಹೃದಯ ಸಮಸ್ಯೆಯನ್ನು ನಿವಾರಿಸಬಹುದು ಎಂದು ಹೇಳಲಾಗುವುದು. ಇನ್ಸುಲಿನ್ ಸಂವೇದನೆಯ ಸುಧಾರಣೆಗೆ ಸಹಾಯ ಮಾಡುವು ದಲ್ಲದೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ಗಳನ್ನು ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ಗಳನ್ನು ತಗ್ಗಿಸುವುದು. ಲುಟೆಯೆನ್ ನಂತಹ ಉತ್ಕರ್ಷಣ ನಿರೋಧಕಗಳು ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತವೆ.
ಚಿಯಾ ಬೀಜಗಳು : ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಬಯಸಿದರೆ ಚಿಯಾ ಬೀಜ ನಿಮಗೆ ಅತ್ಯುತ್ತಮ ಆಯ್ಕೆಯಾಗುವುದು. ಇವುಗಳಲ್ಲಿ ಜೀರ್ಣಕಾರಿ ಕಾರ್ಬ್‌ಗಳನ್ನು ಹೊಂದಿರುತ್ತವೆ. ಇವು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತವೆ. ಚಿಯಾ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯಕರವಾದ ತೂಕವನ್ನು ಹೊಂದ ಬಹುದು. ದೀರ್ಘಕಾಲದವರೆಗಿನ ಹಸಿವನ್ನು ದೂರ ಇಡುತ್ತದೆ. ಉರಿಯೂತದ ಗುರುತುಗಳು ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಅರಿಶಿಣ :
ಅರಿಶಿಣ ದಿನನಿತ್ಯದ ಅಡುಗೆ ತಯಾರಿಸಲು ಬಳಸುವ ಮಸಾಲೆ ಪದಾರ್ಥಗಳಲ್ಲಿ ಒಂದು. ಆಹಾರದ ರುಚಿಯನ್ನು ದ್ವಿಗುಣಗೊಳಿಸುವುದರ ಮೂಲಕ ವಿಶೇಷ ಶಕ್ತಿಗಳಿಂದ ಆರೋಗ್ಯ ರಕ್ಷಣೆ ಮಾಡುತ್ತದೆ. ಇದರಲ್ಲಿ ಕಕ್ರ್ಯುಮಿನ್ ಸಕ್ರಿಯ ಘಟಕಾಂಶವಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಉರಿಯೂತವನ್ನು ಕಡಿಮೆ ಮಾಡುವುದು. ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಇಡುವುದು. ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ.
ಗ್ರೀಕ್ ಮೊಸರು : ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂ ತ್ರಿಸಲು ಹಾಗೂ ಹೃದಯ ರೋಗವನ್ನು ತಡೆಯಲು ಗ್ರೀಕ್ ಮೊಸರನ್ನು ಸೇವಿಸಬಹುದು. ಈ ಉತ್ಪನ್ನವು ದೇಹದ ತೂಕ ನಷ್ಟ ವನ್ನು ಮಾಡುವುದಲ್ಲದೆ ಮಧುಮೇಹ-2ನೇ ವಿಧದ ಜನರ ದೇಹ ರಚನೆಯನ್ನು ಸುಧಾರಿಸುತ್ತದೆ. ಗ್ರೀಕ್ ಮೊಸರು ಇತರ ಮೊಸ ರಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಹಸಿವಿನ ನೋವನ್ನು ದೀರ್ಘಾವಧಿಯವರೆಗೆ ತಡೆ ಯಲು ಸಹಾಯ ಮಾಡುವ ಪ್ರೋಟೀನ್‌ಗಳನ್ನು ಹೊಂದಿರುತ್ತದೆ.

ಬೀಜಗಳು :
ಬಾದಾಮಿ, ಪಿಸ್ತಾ, ಬ್ರೆಜಿಲ್ ಬೀಜಗಳು, ಗೋಡಂಬಿ ಸೇರಿದಂತೆ ಇನ್ನಿತರ ಬೀಜಗಳು ಹಸಿವನ್ನು ತಡೆಯ ಬಹುದಾದ ತ್ವರಿತ ಆಹಾರ ಪದಾರ್ಥಗಳು. ಇವು ಹಸಿವನ್ನು ದೀರ್ಘ ಸಮಯದವರೆಗೆ ತಡೆಯುತ್ತವೆ.

ಬ್ರೊಕೊಲಿ :
ಸಾಮಾನ್ಯವಾಗಿ ಎಲ್ಲೆಡೆಯೂ ದೊರೆಯುವ ಬ್ರೊಕೊಲಿ 3 ಗ್ರಾಂ ಜೀರ್ಣಕಾರಿ ಕಾರ್ಬ್ ಮತ್ತು 27ಗ್ರಾಂ ಕ್ಯಾಲೋರಿಗಳನ್ನು ಹೊಂದಿದೆ. ಇದರಲ್ಲಿ ಮೆಗ್ನೀಶಿಯಂ, ವಿಟಮಿನ್-ಸಿ, ಸಮೃದ್ಧವಾಗಿದೆ ಎಂದು ಹೇಳಲಾಗುವುದು. ಇದರಲ್ಲಿರುವ ಪೌಷ್ಟಿಕಾಂಶವು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಲುಟೀನ್ ನಂತಹ ಉತ್ಕರ್ಷಣ ನಿರೋಧಕಗಳಿರುವುದರಿಂದ ಕಣ್ಣಿಗೆ ಸಂಬಂಧಿಸಿದ ಕಾಯಿಲೆಯನ್ನು ನಿಯಂತ್ರಿಸುವುದು.

ಆಲೀವ್ ಎಣ್ಣೆ :
ಒಲೆರಿಕ್ ಆ್ಯಸಿಡ್ ಅನ್ನು ಒಳಗೊಂಡಿರುವ ವರ್ಜಿನ್ ಆಲೀವ್ ಎಣ್ಣೆ ಎಚ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಮತ್ತು ಟ್ರೈಗ್ಲಿಸರಿನ್‌ಗಳ ಮಟ್ಟವನ್ನು ನಿಯಂತ್ರಿಸುವುದು. 2ನೇ ವಿಧದ ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಈ ಎಣ್ಣೆಯ ಸೇವನೆಯಿಂದ ಜಿಎಲ್ ಪಿ-1 ಹಾರ್ಮೋನ್‌ಗಳಲ್ಲಿ ಹೆಚ್ಚಿಸುವುದು. ಹೃದಯ ಸಂಬಂಧಿ ರೋಗಗಳನ್ನು ತಡೆಯುವುದು. ವರ್ಜಿನ್ ಆಲೀವ್ ಎಣ್ಣೆ ಪಾಲಿಫಿನಾಲ್ಗಳನ್ನು ಸಮೃದ್ಧವಾಗಿ ಹೊಂದಿರುವುದರಿಂದ ರಕ್ತನಾಳಗಳಿಗೆ ಸಂಬಂಧಿಸುವ ಜೀವಕೋಶಗಳನ್ನು ರಕ್ಷಿಸುತ್ತದೆ. ಉರಿಯೂತ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಅಗಸೆ ಬೀಜ :
ರಕ್ತದಲ್ಲಿ ರಕ್ತದ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಸುಧಾರಿಸಲು ಅಗಸೆ ಬೀಜದ ಆಯ್ಕೆ ಆರೋಗ್ಯಕರವಾದದ್ದು. 2ನೇ ವಿಧದ ಮಧುಮೇಹದಿಂದ ಬಳಲುತ್ತಿದ್ದವರು 12 ವಾರಗಳ ಕಾಲ ಸೀಮೆ ಅಗಸೆ ಬೀಜವನ್ನು ಸೇವಿಸುವುದರಿಂದ ರಕ್ತದಲ್ಲಿ ಎ1ಸಿ ಮಟ್ಟದಲ್ಲಿ ಹೆಚ್ಚಳವನ್ನು ಕಾಣಬಹುದು. ಇದರ ಸೇವನೆಯಿಂದ ರಕ್ತ ಹೆಪ್ಪುಗಟ್ಟುವುದು, ಹೃದಯಘಾತ ಮತ್ತು ಪಾಶ್ವವಾಯು ಅಪಾಯವನ್ನು ಕಡಿಮೆಮಾಡುತ್ತದೆ. ಇನ್ಸುಲಿನ್ ವೇದನೆಯನ್ನು ತಗ್ಗಿಸಿ ದೀರ್ಘಕಾಲದ ವರೆಗಿನ ಹಸಿವಿನ ನೋವನ್ನು ತಡೆಯುವುದು.

ಆಪಲ್ ಸೈಡರ್ ವಿನೆಗರ್ :
ಇನ್ಸುಲಿನ್ ವೇದನೆ ತಡೆ ಯಲು ಮತ್ತು ರಕ್ತದಲ್ಲಿ ವೇಗವಾಗಿ ಸಕ್ಕರೆ ಪ್ರಮಾಣವನ್ನು ತಡೆಯಲು ಆಪಲ್ ಸೈಡರ್ ವಿನೆಗರ್ ಅತ್ಯುತ್ತಮವಾದ ಆಯ್ಕೆಯಾಗಿದೆ. ಕಾರ್ಬ್ ಪುಷ್ಟೀಕರಿಸುವ ಊಟ ಸವಿದಾಗ ಆಪಲ್ ಸೈಡರ್ ವಿನೆಗರ್ ರಕ್ತದ ಮಟ್ಟದಲ್ಲಿ ಸುಮಾರು ಶೇ.20ರಷ್ಟು ನಷ್ಟಗೊಳಿಸುತ್ತದೆ. ಮಲಗುವ ಮುನ್ನ ವಿನೆಗರ್ ಅನ್ನು 2 ಟೀ ಚಮಚ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಶೇ. 6ರಷ್ಟು ಕಡಿಮೆ ಮಾಡುತ್ತದೆ. ಪೂರ್ಣತೆಯನ್ನು ಭಾವನೆಯನ್ನು ನೀಡುವುದರ ಜೊತೆಗೆ ಗ್ಯಾಸ್ಟ್ರೋಪೊರೆಸಿಸ್ ಸಂಭವಿಕೆಯನ್ನು ತಡೆಯುತ್ತದೆ. ನಿತ್ಯವೂ ನಿಯಮಿತವಾಗಿ ಒಂದು ಗ್ಲಾಸ್ ನೀರಿಗೆ ಒಂದು ಟೀ ಚಮಚ ವಿನೆಗರ್ ಸೇರಿಸಿ ಸೇವಿಸಿ.

ಸ್ಟ್ರಾಬೆರಿಗಳು:
ಸ್ಟ್ರಾಬೆರಿ ಹಣ್ಣು ಉತ್ಕರ್ಷಣ ನಿರೋಧಕ ಮತ್ತು ಆಂಥೋಸಯಾನಿನ್‌ಗಳಿಂದ ಸಮೃದ್ಧಗೊಂಡಿವೆ. ಇದನ್ನು ಸೇವಿಸುವುದರಿಂದ ಊಟದ ನಂತರ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಧುಮೇಹ-2 ನೇ ವಿಧದ ರೋಗಿಗಳಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಬಹುಬೇಗ ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದಲ್ಲದೆ ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ವಿಟಮಿನ್ ಸಿ ಇರುವುದರಿಂದ ಉರಿಯೂತದಂತಹ ಸಮಸ್ಯೆಗಳನ್ನು ತಡೆಯುವುದು.

ಬೆಳ್ಳುಳ್ಳಿ :
ಅಪಾರ ಪ್ರಮಾಣದ ಪೌಷ್ಟಿಕಾಂಶವನ್ನು ಒಳ ಗೊಂಡಿರುವ ಮೂಲಿಕೆ ಬೆಳ್ಳುಳ್ಳಿ. ಇದರ ಬಳಕೆಯಿಂದ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ನಿತ್ಯವು ಮಿತವಾಗಿ ಬೆಳ್ಳುಳ್ಳಿ ಎಸಳನ್ನು ಸೇವಿಸುವುದರಿಂದ ರಕ್ತದೊತ್ತಡ, ಉರಿಯೂತ, ಕೊಲೆಸ್ಟ್ರಾಲ್ ಮಧುಮೇಹ-2ನೇ ವಿಧವನ್ನು ಕಡಿಮೆ ಮಾಡಬಹುದು.

ಕುಂಬಳಕಾಯಿ (ಸ್ಕ್ವಾಷ್):
ಈ ತರಕಾರಿಯಲ್ಲಿ ಝೀಕ್ಸಾಂಥಿನ್ ಮತ್ತು ಲುಟೀನ್ ಅಂತಹ ಉತ್ಕರ್ಷಣ ನಿರೋಧಕಗಳನ್ನು ಸಮೃದ್ಧವಾಗಿವೆ. ಇನ್ಸುಲಿನ್ ಮಟ್ಟದ ನಿಯಂತ್ರಣ, ಸ್ಥೂಲಕಾಯದ ನಿಯಂತ್ರಣ, ಕಣ್ಣಿನ ಪೊರೆ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸುವುದು. ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಈ ತರಕಾರಿಯನ್ನು ಸೇವಿಸುವುದರಿಂದ ಮಧುಮೇಹಿಗಳು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು.

ಶಿರಾಟಕಿ ನೂಡಲ್ಸ್ :
ಶಿರಾಟಕಿ ನೂಡಲ್ಸ್ ಸೇವಿಸುವುದರಿಂದ ಮಧುಮೇಹ ರೋಗಿಗಳು ತಮ್ಮ ದೇಹದ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು. ಜೊತೆಗೆ ಕೆಲಸದಲ್ಲಿ ಸಕ್ರಿಯಗೊಳ್ಳಬಹುದು. ಇದರಲ್ಲಿ ಅಧಿಕ ಪ್ರಮಾಣದ ಫೈಬರ್ ಇರುವುದರಿಂದ ದೀರ್ಘಾವಧಿಯ ವರೆಗೆ ಹಸಿವಿನ ನೋವನ್ನು ತಡೆಯಬಹುದು. ಇದು ಹಸಿವಿನ ಹಾರ್ಮೋನ್ ಆದ ಘ್ರಾಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ನೂಡಲ್ಸ್ ತಯಾರಿಸುವಾಗ ಸ್ವಚ್ಛವಾಗಿ ತೊಳೆಯಬೇಕು. ಜೊತೆಗೆ ಆಹಾರ ತಯಾರಿಸುವಾಗ ಯಾವುದೇ ಕೊಬ್ಬಿನ ಪದಾರ್ಥವನ್ನು ಸೇರಿಸದೆ ಕೆಲವು ನಿಮಿಷಗಳ ಕಾಲ ದೊಡ್ಡ ಉರಿಯಲ್ಲಿ ಬೇಯಿಸಿ

Comments are closed.