ಕರಾವಳಿ

ಇತಂಹ ಆಹಾರ ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಸಮಸ್ಯೆಗಳು ತಪ್ಪಿದಲ್ಲ

Pinterest LinkedIn Tumblr

ಹೊಟ್ಟೆ ಖಾಲಿಯಾಗಿದ್ದಾಗ ಏನೋ ಒಂದು ತಿನ್ನಬೇಕು ಅನ್ನಿಸುವುದು ಸಹಜ. ಅದರಲ್ಲೂ ಆ ಟೈಮಲ್ಲಿ ಹಸಿವೂ ಸ್ವಲ್ಪ ಜಾಸ್ತಿ ಇರುತ್ತದೆ. ಏನು ಸಿಕ್ಕರೂ ತಿಂದುಬಿಡುವಷ್ಟು ತಳಮಳ ಇರುತ್ತದೆ. ಹಾಗಂತ ಕೆಳಗೆ ಪಟ್ಟಿಮಾಡಿರುವ ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಅನಾರೋಗ್ಯ ಸಮಸ್ಯೆಗಳು, ವಾಯು ವಿಕಾರಗಳು ತಪ್ಪಿದ್ದಲ್ಲ. ಅಂತಹ ಆಹಾರ ಪದಾರ್ಥಗಳ ಬಗ್ಗೆ ಇಲ್ಲಿದೆ ನೋಡಿ ಒಂದು ನೋಟ.

ಬಾಳೆಹಣ್ಣು : ಸ್ವಲ್ಪ ಹಸಿ ಇರುವ ಬಾಳೆಹಣ್ಣನ್ನು ಬೆಳಗ್ಗೆಯೇ ತಿನ್ನುವುದು ಅಷ್ಟು ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ರಕ್ತದಲ್ಲಿ ಮೆಗ್ನಿಷಿಯಂ ಪ್ರಮಾಣ ಹೆಚ್ಚುತ್ತದೆ. ಪ್ರತಿಫಲವಾಗಿ ಹೃದಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ ಚೆನ್ನಾಗಿ ಕಳಿತ ಬಾಳೆಹಣ್ಣಿಗೆ ವಿನಾಯಿತಿ ಇದೆ. ಚೆನ್ನಾಗಿ ಹಣ್ಣಾದ ಬಾಳೆಹಣ್ಣು ತಿನ್ನುವುದರಿಂದ ಏನೂ ಆಗಲ್ಲ.

ಖಾರ : ಖಾರ ಹೆಚ್ಚಾಗಿರುವ ಆಹಾರವನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆಗಳು ಉತ್ಪನ್ನವಾಗುತ್ತವೆ. ಮೆಣಸಿನಕಾಯಿ, ಮೆಣಸು, ಲವಂಗ.ವಗೈರೆ ಮಸಾಲಾ ತಿನಿಸುಗಳು ಸಹ ಖಾಲಿ ಹೊಟ್ಟೆ ಸೇರುವುದು ಒಳ್ಳೆಯದಲ್ಲ.

ಹುಳಿ ಹಣ್ಣುಗಳು : ನಿಂಬೆ ಜಾತಿಯ ಫಲಗಳನ್ನು ಬೆಳಗ್ಗೆಯೇ ತಿನ್ನುವುದು ಒಳ್ಳೆಯದಲ್ಲ. ನಿಂಬೆ, ಆರೇಂಜ್, ಹುಳಿಯಾಗಿರುವ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇವುಗಳ ರಸವನ್ನೂ ಸಹ ಕುಡಿಯಬಾರದು. ಇವುಗಳಿಂದ ಅಸಿಡಿಟಿ ಉಂಟಾಗುತ್ತದೆ. ಗ್ಯಾಸ್ಟ್ರಿಕ್, ಹೊಟ್ಟೆ ಹುಣ್ಣಿಗೂ ದಾರಿಯಾಗುತ್ತದೆ.

ಹಸಿ ಸೊಪ್ಪು : ಎಲೆಹಸಿರಿನ, ಹಸಿ ಸೊಪ್ಪುಗಳು ದೇಹಕ್ಕೆ ಸಾಕಷ್ಟು ಒಳಿತು ಮಾಡುತ್ತವೆ. ಆದರೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನುವುದು ಮಾತ್ರ ಮಾಡಬಾರದು. ಆ ರೀತಿ ಮಾಡಿದರೆ ಸ್ಟಮಕ್ ಲೈನಿಂಗ್ ಹಾಳಾಗುತ್ತದೆ.

ಸಿಹಿ, ಕ್ಯಾಂಡಿಗಳು : ಸಕ್ಕರೆ ಪ್ರಮಾಣ ಅಧಿಕವಾಗಿರುವ ಇವುಗಳನ್ನು ತಿನ್ನುವುದರಿಂದ ಲಿವರ್ ಮೇಲೆ ಪ್ರಭಾವ ಬೀಳುತ್ತದೆ. ನಿತ್ಯ ಬೆಳಗ್ಗೆ ಸಿಹಿ ತಿಂಡಿಗಳನ್ನು ತಿನ್ನುವುದರಿಂದ ಅಂಗಾಂಗಳು ಸಾಮರ್ಥ್ಯ ಕುಂಠಿತವಾಗುತ್ತದೆ. ಕೆಲವು ರೀತಿಯ ಖಾಯಿಲೆಗಳು ಬರುವ ಸಾಧ್ಯತೆಗಳೂ ಇವೆ.

ಕಾಫಿ : ನಿಜ.ಬಹಳಷ್ಟು ಮಂದಿಯ ದಿನ ಆರಂಭವಾಗುವುದು ಬಿಸಿಬಿಸಿಯಾದ ಕಾಫಿಯಿಂದ. ಬೆಳಗ್ಗೆ ಎದ್ದಕೂಡಲೇ ಬಾಯಿಯಿಂದ ಹೊರಬೀಳುವ ಪದ ಕಾಫಿ. ಜೀವನಪೂರ್ತಿ ಬೆಳಗ್ಗೆ ಎದ್ದಕೂಡಲೆ ಕಾಫಿಯಿಂದ ದಿನ ಪ್ರಾರಂಭಿಸುವವರು ಅದೆಷ್ಟೋ ಮಂದಿ ಕಣ್ಣೆದುರಿಗೇ ಕಾಣುತ್ತಿರುತ್ತಾರೆ. ಆದರೆ ಬೆಳಗ್ಗೆ ಎದ್ದಕೂಡಲೆ ಕಾಫಿ ಕುಡಿಯುವುದು ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಆಲ್ಕೋಹಾಲ್ : ಬೆಳಗ್ಗೆ ಎದ್ದಕೂಡಲೆ ಆಲ್ಕೋಹಾಲ್ ಡ್ರಿಂಕ್ಸ್ ತೆಗೆದುಕೊಂಡರೆ ಅದರ ಪ್ರಭಾವ ತುಂಬಾ ಜಾಸ್ತಿ ಇರುತ್ತದೆ. ಬೆಳಗ್ಗೆಯಾದ ಕಾರಣ ರಕ್ತನಾಳಗಳನ್ನು ಪ್ರಭಾವಿಸುತ್ತಾ, ಮಿದುಳನ್ನು ಸಹ ಬಹಳ ಶೀಘ್ರವಾಗಿ ಪ್ರಭಾವಗೊಳಿಸುತ್ತದೆ ಆಲ್ಕೋಹಾಲ್. ಹೃದಯ ಸೇರಿದಂತೆ ದೇಹದಲ್ಲಿನ ಅನೇಕ ಅಂಗಾಂಗಳನ್ನು ಘಾಸಿಗೊಳಿಸುತ್ತದೆ.

ಸಾಫ್ಟ್ ಡ್ರಿಂಕ್ಸ್ : ಇವು ಸಹ ಅಸಿಡಿಟಿಯನ್ನು ಉಂಟು ಮಾಡುತ್ತವೆ. ದೇಹದಲ್ಲಿರುವ ಉದರದ ಆಮ್ಲಗಳೊಂದಿಗೆ ಸಾಫ್ಟ್ ಡ್ರಿಂಕ್ಸ್ ಸೇರಿ ಸ್ನಾಯು ಸೆಳೆತ, ಬಾಡಿ ಪೆಯಿನ್ಸ್ ಕಾಣಿಸಿಕೊಳ್ಳಬಹುದು

Comments are closed.