ಕರಾವಳಿ

ಅಂಟ್ವಾಳದಿಂದ ಕೂದಲ ಸೌಂದರ್ಯ ಜೊತೆಗೆ ಇತರೆ ಪ್ರಯೋಜನಗಳು

Pinterest LinkedIn Tumblr

ಕೂದಲಿಗೆ ಹೊಳಪು ತರುವುದರ ಜತೆಗೆ, ಕೂದಲು ದೃಢವಾಗಿ, ದಟ್ಟವಾಗಿ ಬದಲಾಯಿಸುವಲ್ಲಿ ಅಂಟ್ವಾಳ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಹಿರಿಯರು ಒಂದು ಕಾಲದಲ್ಲಿ ಶಾಂಪೂಗೆ ಬದಲಾಗಿ ಅಂಟ್ವಾಳ ಕಾಯಿಯ ರಸತೆಗೆದು ಕೂದಲಿಗೆ ಹಚ್ಚಿ ಸ್ನಾನ ಮಾಡುತ್ತಿದ್ದರು. ಇದರಿಂದ ಅವರ ಕೂದಲು ದಟ್ಟವಾಗಿ, ದೃಢವಾಗಿ ಇರುತ್ತಿತ್ತು. ಆದರೆ ಅಂಟ್ವಾಳವನ್ನು ನಾವು ಮರತೇ ಹೋಗಿದ್ದೇವೆ. ಈ ಸಂಗತಿ ಪಕ್ಕಕ್ಕಿಟ್ಟರೆ ಇಷ್ಟಕ್ಕೂ ಅಂಟ್ವಾಳದಿಂದ ನಮಗೆ ಕೇವಲ ಕೂದಲ ಸೌಂದರ್ಯ ಅಷ್ಟೇ ಅಲ್ಲದೆ ಹಲವು ಇತರೆ ಲಾಭಗಳು ಸಹ ಇವೆ. ಅವನ್ನು ನಾವು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಹಾಗಿದ್ದರೆ ಅಂಟ್ವಾಳದಿಂದ ಆಗುವ ಇತರೆ ಪ್ರಯೋಜನಗಳು ಏನು ಎಂದು ಈಗ ತಿಳಿದುಕೊಳ್ಳೋಣ..!

ಅಂಟ್ವಾಳದ ದ್ರವ ತಯಾರಿ ಹೀಗೆ..
ಒಂದು ಬಟ್ಟಲಿನಲ್ಲಿ 12 ರಿಂದ 15 ಅಂಟ್ವಾಳ ತೆಗೆದುಕೊಳ್ಳಬೇಕು. ಆ ಬಟ್ಟಲಲ್ಲಿ 6 ಕಪ್ ನೀರು ಹಾಕಬೇಕು. ಅದನ್ನು ಚೆನ್ನಾಗಿ ಕುದಿಸಬೇಕು. ಒಂದು ಗಂಟೆ ಕಾಲ ಕಡಿಮೆ ಉರಿಯಲ್ಲಿ ಕುದಿಸಬೇಕು. ಆ ಬಳಿಕ ಆ ಮಿಶ್ರಣವನ್ನು ಒಂದು ರಾತ್ರಿಪೂರ್ತಿ ಹಾಗೆಯೇ ಬಿಡಬೇಕು. ಆ ಬಳಿಕ ಬೆಳಗ್ಗೆ ಅದರಲ್ಲಿರುವ ಅಂಟ್ವಾಳ ನೀರನ್ನು ಶೋಧಿಸಿ, ಗಾಳಿಯಾಡದ ಪಾತ್ರೆಗೆ ಹಾಕಿ ಮುಚ್ಚಬೇಕು. ಇದರಲ್ಲಿ ಯಾವುದೇ ಸಂರಕ್ಷಕಗಳನ್ನು ಹಾಕಿಲ್ಲವಾದ ಕಾರಣ, ಈ ದ್ರವ ಒಂದು ವಾರದಲ್ಲಿ ಕೆಡುವ ಸಾಧ್ಯತೆಗಳಿದೆ. ಆದಕಾರಣ ಈ ದ್ರವಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಹಿಂಡಿದರೆ ಆ ದ್ರವ ಹೆಚ್ಚು ದಿನಗಳ ಕಲಾ ಕೆಡದಂತೆ ಇರುತ್ತದೆ.

ಅಂಟ್ವಾಳದ ದ್ರವದಿಂದ ಆಗುವ ಪ್ರಯೋಜನಗಳು..
1. ಒಂದು ಸ್ಪ್ರೇ ಬಾಟಲಿಯಲ್ಲಿ ಕಾಲು ಲೀಟರ್ ನೀರನ್ನು ತೆಗೆದುಕೊಳ್ಳಬೇಕು. ಇದಕ್ಕೆ 15 ಎಂಎಲ್ ಅಂಟ್ವಾಳ ದ್ರವ, 15 ಎಂಎಲ್ ವೆನಿಗರ್ ಬೆರೆಸಬೇಕು. ಈ ಮಿಶ್ರಣವನ್ನು ಕಿಟಕಿಗಳು, ಮನೆಯ ನೆಲ, ಇತರೆ ವಸ್ತುಗಳ ಮೇಲೆ ಸ್ಪ್ರೇ ಮಾಡಿ ಬಳಿಕ ಒಣಬಟ್ಟೆಯಿಂದ ಸ್ವಚ್ಛಗೊಳಿಸಬೇಕು. ಇದರಿಂದ ಆಯಾ ಜಾಗಗಳು ಫಳಫಳ ಎಂದು ಹೊಳೆಯುತ್ತವೆ. ಕೊಳೆ ಹೋಗುತ್ತದೆ. ಅವು ಸ್ವಚ್ಛವಾಗಿರುತ್ತವೆ.

2. ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ಅಂಟ್ವಾಳ ದ್ರವ ಚೆನ್ನಾಗಿ ಉಪಯೋಗಕ್ಕೆ ಬರುತ್ತದೆ. ಅಂಟ್ವಾಳ ದ್ರವದಲಿ ಚಿನ್ನದ ಆಭರಣಗಳನ್ನು ನೆನೆಸಬೇಕು. ಬಳಿಕ ಅವನ್ನು ತೆಗೆದು ಮೃದುವಾಗಿರುವ ಬ್ರೆಶ್ ಮೂಲಕ ಕ್ಲೀನ್ ಮಾಡಬೇಕು. ಬಳಿಕ ಸ್ವಚ್ಛವಾದ ನೀರಿನಲ್ಲಿ ಆಭರಣಗಳನ್ನು ತೊಳೆಯಬೇಕು. ಇದರಿಂದ ಆಭರಣಗಳು ಹೊಳೆಯುತ್ತವೆ.

3. ಅಂಟ್ವಾಳ ದ್ರವವನ್ನು ಹ್ಯಾಂಡ್ ವಾಶ್ ಆಗಿಯೂ ಬಳಸಬಹುದು. ಇದರಿಂದ ಕೈಗಳನ್ನು ತೊಳೆದುಕೊಂಡರೆ ಕ್ರಿಮಿಗಳು ಸಾಯುತ್ತವೆ. ಕೈಗಳಿಗೂ ಸುವಾಸನೆ.

4. ಮನೆಯಲ್ಲಿ ಸಾಕಿಕೊಂಡಿರುವ ಪ್ರಾಣಿಗಳನ್ನೂ ಅಂಟ್ವಾಳ ದ್ರವದಿಂದ ಸ್ವಚ್ಛಗೊಳಿಸಬಹುದು. ಆ ದ್ರವದಿಂದ ಸ್ನಾನ ಮಾಡಿದರೆ ಅವುಗಳ ದೇಹದಲ್ಲಿನ ಸೂಕ್ಷ್ಮ ಕ್ರಿಮಿಗಳು ಸಾಯುತ್ತವೆ.

5. ಕಾರ್ಪೆಟ್ ಮೇಲೆ ಕಲೆಗಳು ಆಗಿದ್ದರೆ ಅವುಗಳ ಮೇಲೆ ಅಂಟ್ವಾಳ ದ್ರವವನ್ನು ಹಾಕಿ ಬಳಿಕ ಬ್ರಷ್ ಸಹಾಯದಿಂದ ಕ್ಲೀನ್ ಮಾಡಬೇಕು. ಇದರಿಂದ ಕಾರ್ಪೆಟ್ ಮೇಲಿನ ಕೊಳೆ ನಿವಾರಣೆಯಾಗುತ್ತದೆ.

6. ಕಾರು, ದ್ವಿಚಕ್ರವಾಹನಗಳನ್ನು ಅಂಟ್ವಾಳ ದ್ರವದಿಂದ ಕ್ಲೀನ್ ಮಾಡಬಹುದು. ಇದರಿಂದ ಅವು ಫಳಫಳ ಎಂದು ಹೊಳೆಯುತ್ತವೆ.

Comments are closed.