ಕರಾವಳಿ

ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಆಹಾರ ಪದ್ದತಿ ಟಿಪ್ಸ್ ..

Pinterest LinkedIn Tumblr

ಆಹಾರದ ಅಭ್ಯಾಸವು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ತುಂಬಾ ಜನರಿಗೆ ರಾತ್ರಿ ಯಾವ ಟೈಮ್ ಗೆ ತಿಂದರೆ ಆರೋಗ್ಯಕ್ಕೆ ಒಳ್ಳೇಯದು ಎಂದು ಸಹ ತಿಳಿದಿಲ್ಲ. ರಾತ್ರಿ 8 ಗಂಟೆಯ ನಂತರ ಆಹಾರ ತೆಗೆದು ಕೊಳ್ಳುವವರಿಗೆ ಬಾಡಿ ಮಾಸ್ ಇಂಡೆಕ್ಸ್ ಅಧಿಕವಾಗಿ ಬೆಳೆಯುತ್ತದಂತೆ. ಆದರೆ 8 ಗಂಟೆಗಿಂತ ಮುಂಚೆಯೇ ತಿನ್ನುವವರಿಗೆ ಈ ಬಾಡಿ ಮಾಸ್ ಇಂಡೆಕ್ಸ್ ಕಮ್ಮಿಯಾಗಿರುತ್ತದಂತೆ. ಆದರೆ 8 ಗಂಟೆಯ ನಂತರ ಸ್ನಾಕ್ಸ್ ಮತ್ತು ಇತರೆ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದರಿಂದ ಶರೀರದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ಬೆಳೆದು ತೂಕ ಜಾಸ್ತಿಯಾಗುತ್ತದೆ ಎಂದು ನಿಪುಣರು ಎಚ್ಚರಿಸುತ್ತಿದ್ದಾರೆ.

ಹಾಗೆಯೇ ಹಗಲು ತಿನ್ನುವ ಅಹಾರದಿಂದ ಮನುಷ್ಯನ ಆರೋಗ್ಯ, ಶರೀರ ತತ್ವ ಆಧಾರವಾಗಿರುತ್ತದೆ. ಹಾಗೆ ಆತ ನಿದ್ರೆ ಮಾಡುವ ಸಮಯದ ಆಧಾರದ ಮೇಲೆ ಸಹ ಶರೀರ ಆರೋಗ್ಯ, ತೂಕ ದಂತಹವು ಆಧಾರಪಟ್ಟಿರುತ್ತದೆ. ಹಾಗೆ ಈ ಮಧ್ಯೆ ತುಂಬಾ ಜನ ಜಂಕ್ ಪುಡ್ಸ್ ಗೆ ಅಭ್ಯಾಸ ಪಟ್ಟಿರುತ್ತಾರೆ. ಅದು ಸಹ ರಾತ್ರಿ ಟೈಮ್ ನಲ್ಲಿ ಜಾಸ್ತಿ ತಿನ್ನುತ್ತಾರೆ. ಇದರಿಂದ…

ಅನೇಕ ಅನಾರೊಗ್ಯ ಸಮಸ್ಯೆಗಳು ಬರುತ್ತಿವೆಯೆಂದು ಇತ್ತೀಚೆಗೆ ನಡೆದ ಪರಿಶೋಧನೆಯೊಂದರಲ್ಲಿ ತಿಳಿದು ಬಂದಿದೆ. ಹಾಗೆಯೇ ಟೈಮ್ ಗೆ ಆಹಾರವನ್ನು ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಕೂಡ ಹತ್ತಿರ ಬರುವುದಿಲ್ಲ. ಅದಕ್ಕೆ ಟೈಮ್ಗೆ ಊಟ ಮಾಡುವುದು, ಹಾಗೆ ದಿನಕ್ಕೆ ಅರ್ಧಗಂಟೆ ಕ್ರಮ ತಪ್ಪದೇ ವ್ಯಾಯಾಮ ಮಾಡುವುದು ಆರೊಗ್ಯಕ್ಕೆ ಎಷ್ಟೋ ಒಳ್ಳೆಯದು ಎಂದು ಹೇಳುತ್ತಿದ್ದಾರೆ ಆರೋಗ್ಯ ನಿಪುಣರು.

ಇನ್ನು ಆಹಾರದ ವಿಷಯಕ್ಕೆ ಬಂದರೆ ಫೈಬರ್ ಪದಾರ್ಥ ಹೆಚ್ಚಾಗಿ ಇರುವ ಆಹಾರ ತೆಗೆದುಕೊಳ್ಳುವುದು ಬೆಟರ್ ಎನ್ನುತ್ತಿದ್ದಾರೆ. ಮುಖ್ಯವಾಗಿ ರಾತ್ರಿ ಊಟದಲ್ಲಿ ಪೈಬರ್ ಪದಾರ್ಥಗಳು ಇರುವ ಆಹಾರ ತಿಂದರೆ ತೂಕ ಹೆಚ್ಚಿಸುವ ಅಪಾಯದಿಂದ ಹೊರ ಬರಬಹುದು. ಯಾಕೆನ್ನುವ ಕಾರಣ ಎಂದರೆ ಈ ಆಹಾರವನ್ನು ತಿಂದ ನಂತರ ನಿದ್ರೆ ಮಾಡುವ ಮೊದಲೇ ಜೀರ್ಣವಾಗುತ್ತದೆ.

ಅದಾದ ನಂತರ.. ತಿಂದ ಆಹಾರಕ್ಕೆ ಸಂಬಂಧಿಸಿದ ಶಕ್ತಿ ಆ ರಾತ್ರಿಯಿಂದ ಖರ್ಚಾಗುವುದು ಸ್ಟಾರ್ಟ್ ಆಗುತ್ತದೆ. ಆ ನಂತರ ಅದು ಬಾಡಿಯಲ್ಲಿ ಸೇರಿಕೊಳ್ಳುವ ಅಪಾಯ ತಪ್ಪಿಹೊಗುತ್ತದೆ. ಅದಕ್ಕೆ ರಾತ್ರಿ ವೇಳೆ ಲೈಟ್ ಮೀಲ್, ಇನ್ನು ಆರೋಗ್ಯದ ಮೇಲೆ ಪ್ರಜ್ಞೆ ಹೆಚ್ಚಾಗಿದ್ದರೆ ಹಣ್ಣು ಫಲಗಳಿನಂತಹುದು ತಿಂದರೆ ಇನ್ನೂ ಒಳ್ಳೆಯದಂತೆ.

ಬೆಳಿಗ್ಗೆ ಮಧ್ಯಾಹ್ನ ಏನು ತಿಂದರು ರಾತ್ರಿ ಮಾತ್ರ ಡೈಯೇಟ್ ನಿಯಮಗಳನ್ನು ಖಚಿತವಾಗಿ ಅನುಸರಿಸಬೇಕಂತೆ. ಆ ನಂತರ ತೂಕ ಹೆಚ್ಚಾಗುವ ಸಮಸ್ಯೆಗಳಿಂದ ಹೊರ ಬೀಳುತ್ತೀರ. ಜಂಕ್ ಫುಡ್ಸ್, ಫಾಸ್ಟ್ ಫುಡ್ಸ್, ಎಣ್ಣೆ ಪದಾರ್ಥಗಳು, ಫ್ರೈಗಳು, ಸಾಂಬಾರು, ಪಪ್ಸ್, ನಾನ್ ವೆಜ್ ಊಟ ರಾತ್ರಿ ವೇಳೆ ತೆಗೆದುಕೊಳ್ಳದಿದ್ದರೆ ಅವರ ಆರೋಗ್ಯಕ್ಕೆ, ಶರೀರದ ಸ್ಟ್ರಕ್ಚರ್ ಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ನಿಪುಣರು ತಿಳಿಸಿದ್ದಾರೆ.

ರಾತ್ರಿ 8 ಗಂಟೆಯ ಒಳಗೆ ರಾತ್ರಿ ಊಟವನ್ನು ಪೂರ್ತಿ ಮಾಡಿ 10-10:30 ಗಂಟೆಯ ಒಳಗೆ ನಿದ್ರೆ ಮಾಡಿದರೆ ತುಂಬಾ ಒಳ್ಳೆಯದಂತೆ. ಆದ್ದರಿಂದ ನೀವು ಈ ಪದ್ದತಿಗಳನ್ನು ಅನುಸರಿಸಿ ಒಳ್ಳೆಯ ಆರೋಗ್ಯವನ್ನು ಸ್ವಂತ ಮಾಡಿಕೊಳ್ಳಿ.

Comments are closed.