ಸ್ಟ್ರೆಚ್ ಮಾರ್ಕುಗಳು ನಿಮ್ಮ ದೇಹದ ಮೇಲೆ ಉಂಟಾದರೆ, ನಿಮ್ಮ ಚರ್ಮವು ಮತ್ತೆ ಇನ್ನೆಂದೂ ಸ್ಟ್ರೆಚ್ ಮಾರ್ಕುಗಳಿಂದ ಮುಕ್ತವಾಗುವುದೇ ಇಲ್ಲ ಎಂದರ್ಥವಲ್ಲ. ನೀವು ಅವುಗಳನ್ನು ಕೆಟ್ಟದ್ದು ಅಥವಾ ಕುರೂಪ ಎಂದು ಅಂದುಕೊಂಡರೆ, ಅವುಗಳೊಂದಿಗೆ ನೀವು ಬದುಕುವುದು ಕಷ್ಟವಾಗುತ್ತದೆ. ಸ್ಟ್ರೆಚ್ ಮಾರ್ಕುಗಳು ಕೇವಲ ಪ್ರೆಗ್ನನ್ಸಿಯಿಂದ ಮಾತ್ರ ಅಲ್ಲದೆ, ತೂಕ ಗಳಿಸಿಕೊಳ್ಳುವುದರಿಂದ, ಅಡ್ರಿನಲ್ ಗ್ರಂಥಿಯ ಕಾಯಿಲೆಯಿಂದ ಮತ್ತು ಔಷಧಿಗಳ ಬಳಕೆಯಿಂದ ಕೂಡ ಆಗಬಹುದು.
ಇವುಗಳನ್ನು ಹೋಗಲಾಡಿಸಲು ತೈಲಗಳು, ಕ್ರೀಮುಗಳು ಮತ್ತು ಮಸ್ಸಾಜ್ ಎಲ್ಲವನ್ನೂ ಪ್ರಯತ್ನಿಸಿದ ಮೇಲೂ ಇವುಗಳು ಹೋಗಲಿಲ್ಲ ಎಂದರೆ, ನಿಮಗೆ ಹಗಲಿರುಳು ಚಿಂತೆ ಹುಟ್ಟಿಸುತ್ತಿರುವ ಸ್ಟ್ರೆಚ್ ಮಾರ್ಕುಗಳನ್ನ ತೊಲಗಿಸುವ ದಾರಿಗಳು ಹೇಳುತ್ತೇವೆ ಓದಿ.
೧. ಹರಳೆಣ್ಣೆ
ಇದನ್ನು ಬಳಸಿ ಸ್ಟ್ರೆಚ್ ಮಾರ್ಕುಗಳು ಇರುವ ಜಾಗದಲ್ಲಿ ನಿಯಮಿತವಾಗಿ ಪ್ರತಿದಿನ ಮಸಾಜ್ ಮಾಡಿದರೆ, ನೀವು ಅತ್ಯದ್ಭುತ ಫಲಿತಾಂಶಗಳನ್ನ ಕಾಣಬಹುದು. ನೀವು ಸ್ಟ್ರೆಚ್ ಮಾರ್ಕುಗಳಿರುವ ಜಾಗದ ಮೇಲೆ ದಿನಕ್ಕೆ 10-15 ನಿಮಿಷಗಳ ಕಾಲ ಹರಳೆಣ್ಣೆ ಬಳಸಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ ಮತ್ತು ಆ ಭಾಗವನ್ನ ಕಾಟನ್ ಬಟ್ಟೆಯಿಂದ ಸುತ್ತಿ. ಬೇಕಿದ್ದರೆ ನೀವು ಉಪ್ಪನ್ನು ಬಿಸಿ ಮಾಡಿ ಒಂದು ಕರ್ಚಿಫ್ ಅಲ್ಲಿ ಕಟ್ಟಿ, ಅದರಿಂದ ಆ ಭಾಗಕ್ಕೆ ಕಾವು ಕೊಟ್ಟಿಕೊಂಡರೆ ಎಣ್ಣೆಯು ಇನ್ನಷ್ಟು ಚೆನ್ನಾಗಿ ತ್ವಚೆಯೊಳಗೆ ಇಳಿಯುತ್ತದೆ. ಹೀಗೆ ಮಾಡಲು ಶುರು ಮಾಡಿದ ಒಂದೇ ತಿಂಗಳಲ್ಲಿ ನೀವು ಸಕಾರಾತ್ಮಕ ಪರಿಣಾಮಗಳನ್ನ ಕಾಣಬಹುದು.
೨. ವಿಟಮಿನ್ C
ಸ್ಟ್ರೆಚ್ ಮಾರ್ಕುಗಳನ್ನ ಹೋಗಲಾಡಿಸುವುದರಲ್ಲಿ ಉತ್ತಮ ಫಲಿತಾಂಶ ಕೊಡುವ ಮತ್ತೊಂದು ಅಂಶ ಎಂದರೆ ಅದು ವಿಟಮಿನ್ C. ವಿಟಮಿನ್ C ಇರುವ ಆಹಾರಗಳನ್ನ ಹೆಚ್ಚು ಸೇವಿಸುವುದರಿಂದ ನಿಮ್ಮ ಸ್ಟ್ರೆಚ್ ಮಾರ್ಕುಗಳ ಬಾಹ್ಯನೋಟ ಉತ್ತಮವಾಗುತ್ತದೆ ಮತ್ತು ನಿಮ್ಮ ತ್ವಚೆಯು ಹೊಳಪು ಕೂಡ ಹೆಚ್ಚುತ್ತದೆ. ನೀವು ಹುಳಿ ಹಣ್ಣುಗಳಾದ ಕಿತ್ತಳೆ, ಮೋಸಂಬಿ, ಮಾವು, ಸ್ಟ್ರಾಬೆರಿ, ನಿಂಬೆಹಣ್ಣು ಅಂತಹ ಹಣ್ಣುಗಳಿಂದ ಸುಲಭವಾಗಿ ವಿಟಮಿನ್ C ಅನ್ನು ಪಡೆಯಬಹುದು. ಒಂದು ವೇಳೆ ನಿಮಗೆ ಈ ವಿಟಮಿನ್ ನಿಮ್ಮ ಸ್ಟ್ರೆಚ್ ಮಾರ್ಕುಗಳನ್ನ ದಿಢೀರನೆ ಹೋಗಲಾಡಿಸಲಿಲ್ಲ ಎಂದರೂ ನಿಮ್ಮ ತ್ವಚೆಯ ಆರೋಗ್ಯವನ್ನು ಹೆಚ್ಚಿಸುವುದಂತೂ ನಿಶ್ಚಿತ.
೩. ಕೌಂಟರ್ ಮೇಲಿನ ಕ್ರೀಮುಗಳು
ಮೆಡೆರ್ಮ ಮತ್ತು ಬರ್ಟ್ ಬೀ ಅವರ ಶಕ್ತಿಶಾಲಿ ಕ್ರೀಮುಗಳು ಮತ್ತು ಲೋಷನ್ಗಳು ಸ್ಟ್ರೆಚ್ ಮಾರ್ಕುಗಳನ್ನ ಪರಿಣಾಮಕಾರಿಯಾಗಿ ಕಡಿಮೆ ಮಾಡುವ ವಸ್ತುಗಳನ್ನ ಒಳಗೊಂಡಿವೆ. ಇವುಗಳನ್ನು ನೀವು ಹತ್ತಿರದ ಮೆಡಿಕಲ್ ಸ್ಟೋರ್ಸ್ ಅಲ್ಲೇ ಖರೀದಿಸಬಹುದು. ಅಲ್ಲದೆ ಇವುಗಳು ಕ್ರೀಮ್ ಮತ್ತು ತೈಲ – ಎರಡೂ ರೂಪಗಳಲ್ಲೂ ಲಭ್ಯವಿದೆ. ಇಷ್ಟೇ ಅಲ್ಲದೆ ಈ ಎರಡು ಬ್ರಾಂಡ್ (ಮೆಡೆರ್ಮ ಮತ್ತು ಬರ್ತ್ ಬೀ) ಸ್ಟ್ರೆಚ್ ಮಾರ್ಕುಗಳು ದೇಹದ ಮೇಲೆ ಎಷ್ಟಿವೆ ಎಂಬುದರ ಆಧಾರದ ಮೇಲೆ ಥೆರಪಿಯನ್ನು ಸಹ ನೀಡುತ್ತವೆ. ಈ ಉತ್ಪನ್ನಗಳನ್ನ ಬಳಸಿ ನಿಮ್ಮ ಸ್ಟ್ರೆಚ್ ಮಾರ್ಕುಗಳ ನಿಯಂತ್ರಣ ಹೊಂದಿ.
೪. ಮೈಕ್ರೋಡೆರ್ಮಬ್ರಾಶೆನ್
ಇನ್ನೊಂದು ಜನಪ್ರಿಯ ಚಿಕಿತ್ಸೆ ಎಂದರೆ ಅದು ನಿಮ್ಮ ತ್ವಚೆಯ ಮೇಲ್ಮೈಯನ್ನು ಕಳಚಿ ನಿಮ್ಮ ಸ್ಟ್ರೆಚ್ ಮಾರ್ಕುಗಳ ಅಂದವನ್ನ ಹೆಚ್ಚಿಸುವ ಪ್ರಕ್ರಿಯೆಯೇ ಮೈಕ್ರೋಡೆರ್ಮಬ್ರಾಶೆನ್. ಮನೆಯಲ್ಲೇ ನೀವು ಬಳಸಬಹುದಾದ ಬಹಳಷ್ಟು ಮೈಕ್ರೋಡೆರ್ಮಬ್ರಾಶೆನ್ ಕಿಟ್ ಲಭ್ಯವಿವೆ, ಆದರೆ ನೀವು ಇದನ್ನು ಯಾವುದಾದರೂ ನುರಿತ ತಜ್ಞರ ಕಡೆಯಿಂದ ಬ್ಯೂಟಿ ಸಲೂನ್ ಅಲ್ಲಿ ಮಾಡಿಸಿಕೊಳ್ಳುವುದು ಒಳ್ಳೆಯದು. ನೀವು ಈ ಚಿಕಿತ್ಸೆಯನ್ನ ಶುರು ಮಾಡಿದ ನಂತರ, ಕೆಲವಷ್ಟು ಬಾರಿ ರಿಪೀಟ್ ಟ್ರೀಟ್ಮೆಂಟ್ ಗಾಗಿ ತಜ್ಞರ ಬಳಿ ಹೋಗಿ ಬರುತ್ತಿರಬೇಕು.
೫. ಸ್ಕಿನ್ ಬ್ರಷಿಂಗ್
ಸ್ಕಿನ್ ಬ್ರಷಿಂಗ್ ಕೂಡ ನಿಮ್ಮ ದೇಹದಲ್ಲಿನ ಸೆಲ್ಯೂಲೈಟ್ ಕಡಿಮೆ ಮಾಡಿ, ದೇಹದಲ್ಲಿ ರಕ್ತ ಸಂಚಾರ ವೃದ್ಧಿಸಿ, ನಿಮ್ಮ ತ್ವಚೆಯ ಮರು ಕಾಮಗಾರಿಯಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ ಎಂಬುದು ತಿಳಿದು ಬಂದಿದೆ. ಈ ರೀತಿ ನಿಮ್ಮ ತ್ವಚೆಯನ್ನು ಕೈಯಾರೆ ಪ್ರಚೋದಿಸಿದರೆ ನಿಮ್ಮ ತ್ವಚೆಯು ಸ್ಟ್ರೆಚ್ ಮಾರ್ಕುಗಳನ್ನ ದೂರ ಮಾಡಿ, ನಿಮ್ಮ ದೇಹದ ಒಟ್ಟಾರೆ ಅಂದವನ್ನ ಹೆಚ್ಚಿಸುತ್ತದೆ. ಅಲ್ಲದೆ ಇದು ಅಂಗಾಂಶಗಳು ಎಲ್ಲಾ ಕಡೆ ಸಮವಾಗಿ ಹರಡಿಕೊಳ್ಳುವಂತೆ ಸಹಾಯ ಮಾಡಿ, ಸ್ಟ್ರೆಚ್ ಮಾರ್ಕುಗಳನ್ನ ಕ್ಷೀಣಿಸುತ್ತದೆ.

Comments are closed.