ಕರಾವಳಿ

ದ್ವಿತೀಯ ಪಿಯುಸಿ ಫಲಿತಾಂಶ : ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನ

Pinterest LinkedIn Tumblr

ಗೋವಿಂದಾಸ್ ಕಾಲೇಜಿನ ವಿದ್ಯಾರ್ಥಿನಿ ಅಂಕಿತಾ

ಮಂಗಳೂರು, ಎಪ್ರಿಲ್ 30: ಈ ಭಾರಿಯ ದ್ವಿತೀಯ ಪಿಯುಸಿ ಫಲಿತಾಂಶವನ್ನು ಸೋಮವಾರ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಮತ್ತು ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ. ಪಿಯು ಮಂಡಳಿಯ ನಿರ್ದೇಶಕಿ ಸಿ. ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು ಶೇ. 59.56 ಫಲಿತಾಂಶ ಬಂದಿದ್ದು, ಈ ಬಾರಿ ನಗರಕ್ಕಿಂತ ಗ್ರಾಮೀಣ ಭಾಗದ ಮಕ್ಕಳು ಒಳ್ಳೆಯ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ – ಪ್ರಥಮ ಸ್ಥಾನ (91.49), ಉಡುಪಿ -ದ್ವಿತೀಯ ಸ್ಥಾನ (90.67), ಕೊಡಗು -ತೃತೀಯ ಸ್ಥಾನ (83.94) ಫಲಿತಾಂಶ ದಾಖಲಿಸಿದ್ದರೆ ಚಿಕ್ಕೋಡಿ ಕೊನೆಯ ಸ್ಥಾನ ಗಳಿಸಿದೆ.

ದ.ಕ.ಜಿಲ್ಲೆಯ ಸುರತ್ಕಲ್ ಗೋವಿಂದಾಸ್ ಕಾಲೇಜಿನ ವಿದ್ಯಾರ್ಥಿನಿ ಪ್ರಸಾದ್ ಎಂಬವರ ಪುತ್ರಿ ಅಂಕಿತಾ ದ್ವಿತೀಯ ಪಿಯುಸಿಯಲ್ಲಿ 3ನೇ ರ್‍ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಪ್ರಸಕ್ತ ಸಾಲಿ ಫಲಿತಾಂಶ ಹೀಗಿದೆ : ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ, ಕೊಡಗು 3ನೇ ಹಾಗೂ ಚಿಕ್ಕೋಡಿ ಜಿಲ್ಲೆ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದಿದೆ. 118 ಕಾಲೇಜುಗಳು ಶೂನ್ಯ ಸಂಪಾದನೆ ಮಾಡಿದೆ. 68 ಕಾಲೇಜುಗಳಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಾಗಿದೆ.

ಈ ಬಾರಿ ಒಟ್ಟು 6.90 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಈ ಪೈಕಿ 3.52 ಲಕ್ಷ ಬಾಲಕರು ಹಾಗೂ 3.37 ಲಕ್ಷ ಬಾಲಕಿಯರು ಪರೀಕ್ಷೆ ಬರೆದಿದ್ದರು. ಮಾರ್ಚ್ 1 ರಿಂದ 17ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಪರೀಕ್ಷೆಗೆ ಹಾಜರಾಗಿದ್ದ 6,85,713 ವಿದ್ಯಾರ್ಥಿಗಳಲ್ಲಿ 4,08, 421 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 67.48ರಷ್ಟು, ವಾಣಿಜ್ಯ ಶೇಕಡಾ 63.64 ಮತ್ತು ಕಲಾ ವಿಭಾಗದಲ್ಲಿ ಶೇಕಡಾ 45.13ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾದ್ದಾರೆ. ಫಲಿತಾಂಶದಲ್ಲಿ ಈ ಬಾರಿಯೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ.ಶೇ. 67.11 ರಷ್ಟು ಬಾಲಕಿಯರು ಉತ್ತೀರ್ಣರಾದರೆ, ಶೇ. 52.30 ಬಾಲಕರು ಉತ್ತೀರ್ಣರಾಗಿದ್ದಾರೆ.

ಪಿಯು ಫಲಿತಾಂಶವನ್ನು http://karresults.nic.in/ , http://kseeb.kar.nic.in/ ವೀಕ್ಷಿಸಬಹುದಾಗಿದೆ.

Comments are closed.