ಕರಾವಳಿ

ಯಾವ ದಿನ ಶನಿದೇವರನ್ನು ಪೂಜಿಸಿದರೆ ದೋಷ ಪರಿಹಾರವಾಗುತ್ತೆ ..ಗೋತ್ತೆ…?

Pinterest LinkedIn Tumblr

ಶನಿಗ್ರಹವು ನಿಧಾನವಾಗಿ ಚಲಿಸುತ್ತದೆ. ಅಂದರೆ ಶನಿಗ್ರಹವು ಸೂರ್ಯನನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಲು ತೆಗೆದು ಕೊಳ್ಳುವ ಸಮಯ ೩೦ ವರ್ಷಗಳು.

ಶನಿಯನ್ನು ಶನೈಶ್ವರ, ಶನಿ ಭಗವಾನ್, ಶನಿದೇವ ಎಂದೆಲ್ಲಾ ಕರೆಯುತ್ತಾರೆ. ಶನಿಯನ್ನು ಶನಿವಾರ ಪೂಜಿಸಿದರೆ ದೋಷ ಪರಿಹಾರವಾಗುವುದು. ಶನಿಯು ಸೂರ್ಯದೇವನ ಪುತ್ರ. ಹಾಗು ಸೂರ್ಯನ ಹೆಂಡತಿ ಛಾಯ ನೆರಳಿನ ದೇವತೆ, ಹೀಗಾಗಿ ಛಾಯಾಪುತ್ರ ಎಂದೂ ಕರೆಯಲಾಗುತ್ತದೆ. ಹಿಂದೂಗಳ ಸಾವಿನ ದೇವತೆ ಯಮನ ಹಿರಿಯ ಸಹೋದರ ಶನಿ. ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು.

ಈತನು ಕಪ್ಪು ಬಣ್ದದವನಾಗಿದ್ದು, ಕಪ್ಪು ಬಟ್ಟೆಯನ್ನು ಧರಿಸಿದವನು, ಕೈಯಲ್ಲಿ ಕತ್ತಿಯನ್ನು ಹಿಡಿದವನಾಗಿದ್ದು, ಬಾಣ ಹಾಗು ಎರಡು ಚಾಕು ಹೊಂದಿದ್ದು, ಕಪ್ಪಗಿನ ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ.

ಶ್ರೀ ಶನಿ ಮಹಾತ್ಮೆ ಚರಿತ್ರೆಯಲ್ಲಿ ಶನಿ ದೇವರನ್ನು ಹೇಗೆ ಪೂಜೆ ಮಾಡಬೇಕೆಂದು ಹೇಳಲಾಗಿದೆ.ಶನಿದೇವನ ಕೋಪಕ್ಕೆ ಗುರಿಯಾದರೆ ಎಷ್ಟು ಕಷ್ಟ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಒಂದು ಸಣ್ಣ ಕಥೆಯನ್ನು ಓದಿ.

ಶನಿ ಮಹಾತ್ಮನ ಹುಟ್ಟಿದ ಕಥೆಯನ್ನು ಕೇಳಿದ ವಿಕ್ರಮಾದಿತ್ಯನು ನಕ್ಕು ಗೇಲಿ ಮಾಡುತ್ತಾನೆ. ಶನಿಯು ವಿಕ್ರಮಾದಿತ್ಯನ ಅಪಹಾಸ್ಯವನ್ನು ಕಂಡು ಶಾಪವನ್ನು ನೀಡುತ್ತಾನೆ. ಇದರಿಂದಾಗಿ ವಿಕ್ರಮಾದಿತ್ಯನ ಜೀವನ ಕಷ್ಟದಲ್ಲಿ ಸಿಲುಕಿ, ಶನಿಯನ್ನು ರೇಗಿಸಿದ ಫಲವನ್ನು ಅನುಭವಿಸುತ್ತಾನೆ. ವಿಕ್ರಮಾದಿತ್ಯನು ತನ್ನ ರಾಜ್ಯವನ್ನು ಕಳೆದುಕೊಳ್ಳುತ್ತಾನೆ, ಕಳ್ಳತನದ ಆರೋಪವನ್ನು ಎದುರಿಸುತ್ತಾನೆ. ಆತನ ಕೈ ಕಾಲುಗಳನ್ನು ನೆರೆಯ ರಾಜ ಕತ್ತರಿಸಿ ಹಾಕುತ್ತಾನೆ. ಕೊನೆಗೆ ವಿಕ್ರಮಾದಿತ್ಯನು ಶನಿಯನ್ನು ಪ್ರಾರ್ಥಿಸುತ್ತಾನೆ. ವಿಕ್ರಮಾದಿತ್ಯನ ಪ್ರಾರ್ಥನೆಗೆ ಭಕ್ತಿಗೆ ಮೆಚ್ಚಿ, ಅವನ ಹಳೆಯ ಜೀವನಕ್ಕೆ ಪುನಃ ತಂದು ನಿಲ್ಲಿಸುತ್ತಾನೆ. ಹಾಗೂ ಗಣೇಶನು ಹುಟ್ಟಿದ ಸ್ವಲ್ಪ ಹೊತ್ತಿಗೆ ನವಗ್ರಹಗಳು ಅವನನ್ನು ನೋಡಲು ಬಂದ ಸಂದರ್ಭದಲ್ಲಿ ಶನಿಯು ದಿಟ್ಟಿಸಿ ನೋಡಿದ್ದರಿಂದ ಗಣೇಶನು ತನ್ನ ತಲೆಯನ್ನೇ ಕಳೆದುಕೊಳ್ಳುತ್ತಾನೆ. ನಂತರ ಗಣೇಶನನ್ನು ಬದುಕಿಸಲು ಆನೆಯ ಮುಖವನ್ನು ಕಡಿದು ತಂದು ಗಣೇಶನ ದೇಹಕ್ಕೆ ಜೋಡಿಸಲಾಗಿದೆ ಎಂದು ಶಿವ ಪುರಾಣದಲ್ಲಿ ಹೇಳಿದೆ.

ಶನಿ ಭಗವಾನನ ಕೃಪೆಯನ್ನು ಪಡೆಯಲು ಏನೇನು ಮಾಡಬೇಕು? ತಿಳಿದುಕೊಳ್ಳಿ:
ಶನಿ ದೇವನ ಒಂದು ಸಾಮಾನ್ಯ ಮಂತ್ರ : ಓಂ ಶಂ ಶನೈಸ್ಕಾರ್ಯಯೇ ನಮಃ ಎಂದು ಜಪಿಸಬೇಕು.
ಕರಿ ಎಳ್ಳನ್ನು ಬ್ರಾಹ್ಮಣರಿಗೆ ದಾನ ಮಾಡಿ.
ಕಪ್ಪು ಹಸುವಿಗೆ ಕರಿ ಎಳ್ಳು , ಬೆಲ್ಲದ ಮಿಶ್ರಣವನ್ನು ತಿನ್ನಿಸಿ.
ಪ್ರತಿದಿನ ಮನೆಯ ಮುಖ್ಯದ್ವಾರದ ಮುಂದೆ ಸೂರ್ಯ ಮುಳುಗಿದ ಮೇಲೆ ಎರಡು ಎಳ್ಳೆಣ್ಣೆಯ ದೀಪಗಳನ್ನು ಹಚ್ಚಿಡಬೇಕು.
ಶನಿವಾರದಂದು ಉಪವಾಸ ಮಾಡಿ. ಬೆಳಗ್ಗೆ ೬ ರಿಂದ ಸಂಜೆ ೬ ರವರೆಗೆ ಶ್ರಾವಣ ಮಾಸದಲ್ಲಿ ಕಡ್ಡಾಯವಾಗಿ ಮಾಡಬೇಕು.
ರಾಮ ನಾಮ, ಹನುಮಾನ್ ಚಾಲೀಸ , ದುರ್ಗಾ ಸ್ತುತಿಯ ಪಠಣ ಮಾಡಿದರೆ ಇನ್ನೂ ಒಳ್ಳೆಯದು.
ಕಾಗೆಗಳಿಗೆ ಬೆಳಗಿನ ಹೊತ್ತಿನಲ್ಲಿ ಆಹಾರ ನೀಡಬೇಕು.
೧೯ ಸುತ್ತು ನವಗ್ರಹ ಪ್ರದಕ್ಷಿಣೆ ಮಾಡಬೇಕು.
ಶನಿಯನ್ನು ಸಂತೃಪ್ತಿಗೊಳಿಸುವ ಉಪಾಯವೆಂದರೆ ಶನಿವಾರದಂದು ನೀಲಿ ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು ಹಾಗು ಬಡವರಿಗೆ ಸಹಾಯ ಮಾಡಬೇಕು.

ಈ ಲೋಕದ ಸಮಸ್ತ ಜನರಿಗೆ ಶನಿಕಾಟ ತಪ್ಪಿದ್ದಲ್ಲ ಎಂಬುದು ನಿಶ್ಚಿತವಾದ ಮಾತು. ಪ್ರತಿಯೊಬ್ಬರಿಗೂ ತನ್ನ ಜೀವಿತಾವಧಿಯಲ್ಲಿ ಸಾಡೇಸಾತನ್ನು ಅನುಭವಿಸಲೇ ಬೇಕಾಗುತ್ತದೆ. ಸಾಡೇಸಾತಿ ಎಂದರೇನೇ ಎಷ್ಟೋ ಜನ ಭಯ ಬೀಳುತ್ತಾರೆ. ಸಾಡೇಸಾತಿ ಕಾದಾಟದಲ್ಲಿ ಅವರು ಅನುಭವಿಸಿದ ಕಷ್ಟಗಳನ್ನು ಕೇಳಿದರೇನೇ ಮೈ ನಡುಕ ಬರುತ್ತದೆ. ಹನ್ನೆರಡು ರಾಶಿಗಳಲ್ಲೂ ಸಂಚರಿಸುವ ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷವಿರುತ್ತಾನೆ.

ಶನಿಯು ಕರ್ಮಕ್ಕನುಗುಣವಾಗಿಯೇ ಫಲ ಕೊಡುತ್ತಾನೆ. ನಿಮ್ಮ ಉತ್ತಮ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾದರೆ ಶನಿಯು ಹೆಚ್ಚಿನ ಕಾಟ ಕೊಡುವುದಿಲ್ಲ. ಆದರೆ ನಿಮ್ಮ ಉತ್ತಮ ಸಮಯದಲ್ಲಿ ದಬ್ಬಾಳಿಕೆ, ಅನ್ಯಾಯ, ಅಕ್ರಮ, ಅನೀತಿ, ಅಧರ್ಮದ ಕೆಲಸಗಳು ಮತ್ತಿತರ ದುಷ್ಟತನದ ಕೆಲಸಗಳನ್ನು ಮಾಡಿದ್ದರೆ ನೀವು ಮಾಡಿದ್ದೆಲ್ಲವನ್ನೂ ನಿಮಗೆ ತನ್ನ ಶನಿ ಸಾಡೇಸಾತಿಯಲ್ಲಿ ಮರಳಿ ನೀಡುತ್ತಾನೆ.

ಹೆದರಬೇಕಾಗಿಲ್ಲ. ಶನಿಯ ಕೆಟ್ಟ ಪ್ರಭಾವದಿಂದ ದೂರವಾಗಲು, ಹಾಗೂ ಒಳ್ಳೆಯ ಫಲ ಪಡೆಯಲು ಶನಿದೇವರ ಪೂಜಿಸಿ ಅನುಗ್ರಹ ಪಡೆದುಕೊಳ್ಳಬಹುದು. ಹಾಗೂ ಒಳ್ಳೆಯ ಕರ್ಮಗಳನ್ನು ಮಾಡುತ್ತಿದ್ದರೆ ಸಾಡೇಸಾತು ಮುಗಿಯುವ ಹೊತ್ತಿಗೆ ಶನಿಯು ಒಳ್ಳೆಯ ಫಲ ನೀಡುತ್ತಾನೆ ಎಂಬ ಪ್ರತೀತಿಯಿದೆ.

Comments are closed.