ಕರಾವಳಿ

ಒಡೆದ ತುಟಿಗಳ ಆರೈಕೆ ಮಾಡಲು ನೈಸರ್ಗಿಕ ಸ್ಕ್ರಬ್ಸ್ ಗಳು.

Pinterest LinkedIn Tumblr

ಒಣಗಿದ ಅಥವಾ ಒಡೆದ ತುಟಿಗಳ ಸಮಸ್ಯೆಯನ್ನ ನಾವೆಲ್ಲರೂ ಅನುಭವಿಸಿಯೇ ಇರುತ್ತೇವೆ. ಇದು ತುಂಬಾ ಭೀಕರ ಅನಿಸುತ್ತದೆ ಎಲ್ಲರಿಗೂ, ಏಕೆಂದರೆ ಒಡೆದ ತುಟಿಗಳಿಂದ ಮುಖದ ಸೌಂದರ್ಯ ಹಾಳಾಗುವುದು ಒಂದು ಕಡೆ ಆದರೆ ಅದರ ನೋವು ಇನ್ನೊಂದು ಕಡೆ. ಇದು ಸಾಮಾನ್ಯವಾಗಿ ಚಳಿಗಾಲ, ಶೀತದ ಕಾಲದಲ್ಲಿ ಹೆಚ್ಚಾಗಿ ಆಗುವ ಸಮಸ್ಯೆ. ಸರ್ವೇ ಸಾಮಾನ್ಯವಾಗಿ ನಾವೆಲ್ಲರೂ ಇದಕ್ಕೆ ಪರಿಹಾರವಾಗಿ ತುಪ್ಪ, ಎಣ್ಣೆ ಮತ್ತು ಮಾರುಕಟ್ಟೆಯಲ್ಲಿ ಸಿಗುವ ಲಿಪ್ ಕೇರ್ ಅನ್ನು ಹಚ್ಚಿಕೊಳ್ಳುತ್ತೇವೆ ಆದರೆ ಇದು ಶಾಶ್ವತ ಪರಿಹಾರವಲ್ಲ. ಈ ಸಮಸ್ಯೆಗೆ ನೈಸರ್ಗಿಕ ಹಾಗು ಮನೆಯಲ್ಲೇ ತಯಾರಿಸಿಕೊಳ್ಳಬಹುದಂತಹ ಕೆಲವು ಟಿಪ್ಸ್ ಇಲ್ಲಿವೆ ನೋಡಿ.

ಸಕ್ಕರೆ ಲಿಪ್ ಸ್ಕ್ರಬ್: ಇದನ್ನು ತಯಾರಿಸಲು ತೆಂಗಿನ ಎಣ್ಣೆ, ಜೇನುತುಪ್ಪ ಮತ್ತು ಕಂದು ಸಕ್ಕರೆ. ಈ ಮೂರು ಪದಾರ್ಥಗಳನ್ನು ಮಿಶ್ರಣ ಮಾಡಿ ನಿಮ್ಮ ತುಟಿಗಳಿಗೆ ಹಚ್ಚಿಕೊಂಡು ಐದು ನಿಮಿಷಗಳ ಕಾಲ ಹಾಗೆ ಅದನ್ನು ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಸಕ್ಕರೆ ಒಂದು ಎಫ್ಫೋಲಿಯಾಯಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಜೇನುತುಪ್ಪವು ಚರ್ಮವನ್ನು ಮೃದುಗೊಳಿಸಿ ಸತ್ತ ಚರ್ಮವನ್ನು ತೆಗೆದುಹಾಕುತ್ತದೆ. ನೋಯುತ್ತಿರುವ ಅಥವಾ ಒಣಗಿದ ತುಟಿಗಳಿಗೆ ಇದು ಅತ್ಯಂತ ಪರಿಣಾಮಕಾರಿ ಚಿಕಿತ್ಸೆ.

ಕಾಫಿ ಸ್ಕ್ರಬ್: ಕಾಫಿಯಲ್ಲಿನ ಕೆಫೀನ್ ಅಂಶವು ತುಟಿಗಳ ಬಣ್ಣ ಮತ್ತು ಹೊಸ ಚರ್ಮ ಬರುವಂತೆ ಮಾಡುತ್ತದೆ. ಕಾಫಿ ರುಚಿ ಕೊಡುವುದಲ್ಲದೆ ನಮ್ಮ ತುಟಿಗಳನ್ನು ಕೂಡ ಪೋಷಿಸುತ್ತದೆ. ಕಾಫಿ ಮತ್ತು ಆಲಿವ್ ತೈಲ ಒಂದು ಚಮಚ, ಇವೆರಡನ್ನೂ ಮಿಶ್ರಣ ಮಾಡಿ ನಿಮ್ಮ ತುಟಿಗಳಿಗೆ ನಿಧಾನವಾಗಿ ಹಚ್ಚಿಕೊಂಡು ಐದು ನಿಮಿಷಗಳ ಕಾಲ ಅದನ್ನು ಹಾಗೆ ಬಿಟ್ಟು ನಂತರ ನೀರಿನಿಂದ ತೊಳೆಯಿರಿ, ನಂತರ ನಿಮ್ಮ ತುಟಿಗಳನ್ನು ನೋಡಿ ಮೃದುವಾಗಿರುತ್ತವೆ.

ಪುದೀನಾ ಲಿಪ್ ಸ್ಕ್ರಬ್: ಪುದೀನ ಸ್ಕ್ರಬ್ ತುಟಿಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಪುದೀನಾ ಎಳೆಗಳು ಶುಷ್ಕ ಮತ್ತು ಒಣಗಿದ ತುಟಿಗಳಿಗೆ ಅದ್ಭುತಗಳನ್ನು ಮಾಡುತ್ತದೆ. ಪುದೀನಾ ಪೇಸ್ಟ್ ಮತ್ತು ಆಲಿವ್ ತೈಲ ಒಂದು ಚಮಚ ಇವೆರಡನ್ನೂ ಮಿಶ್ರಣ ಮಾಡಿ ನಿಮ್ಮ ತುಟಿಗಳಿಗೆ ನಿಧಾನವಾಗಿ ಹಚ್ಚಿಕೊಂಡು ಐದು ನಿಮಿಷಗಳ ಕಾಲ ಅದನ್ನು ಹಾಗೆ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ನಿಮ್ಮ ತುಟಿಗಳು ಮೃದುವಾಗಿ ಹೊಳೆಯುವ ಹಾಗೆ ಆಗುತ್ತವೆ.

ಕೊಕೊ ಲಿಪ್ ಸ್ಕ್ರಬ್: ಈ ಸ್ಕ್ರಬ್ ಅಂಗಡಿಗಳಲ್ಲಿ ತುಂಬಾ ದುಬಾರಿಯಾಗಿದೆ. ಆದರೆ ಇದನು ನೀವೇ ಮನೆಯಲ್ಲಿ ಕೇವಲ ಎರಡು ಪದಾರ್ಥಗಳನ್ನು ಬಳಸಿ ಸುಲಬವಾಗಿ ಮಾಡಬಹುದು. ಇದನ್ನು ಮಾಡಲು ತೆಂಗಿನ ಎಣ್ಣೆ ಮತ್ತು ಉಪ್ಪು ಒಂದು ಟೀ ಚಮಚ ಇವೆರಡನ್ನೂ ಮಿಶ್ರಣ ಮಾಡಿ ನಿಮ್ಮ ತುಟಿಗಳಿಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ಪ್ರತಿ ದಿನ ಹೀಗೆ ಮಾಡಿಕೊಳ್ಳುವುದರಿಂದ ಉತ್ತಮ ಕೆಂಪು ತುಟಿಗಳು ನಿಮ್ಮದಾಗುತ್ತವೆ.

ನಿಂಬೆ ಲಿಪ್ ಸ್ಕ್ರಬ್: ಈ ಸ್ಕ್ರಬ್’ನಲ್ಲಿ ನಿಂಬೆ ರಸ ಇರುವುದರಿಂದ, ಬೇಸಿಗೆಯಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಿಂಬೆ ಸ್ಕ್ರಬ್’ನಲ್ಲಿ ಇರುವ ವಿಟಮಿನ್ ಸಿ ತುಟಿಗಳಿಗೆ ಅದ್ಭುತವನ್ನೇ ಮಾಡುತ್ತದೆ. ನಿಂಬೆ ರಸವು ನೈಸರ್ಗಿಕವಾಗಿ ಶುದ್ಧೀಕರಣವಾಗಿ ಕೆಲಸ ಮಾಡುತ್ತದೆ ಮತ್ತು ತುಟಿಗಳ ಮೇಲಿನ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ಜೇನುತುಪ್ಪ ನಿಂಬೆ ಮತ್ತು ಸಕ್ಕರೆ ಲಿಪ್ ಸ್ಕ್ರಬ್: ಜೇನುತುಪ್ಪ, ನಿಂಬೆ ಮತ್ತು ಸಕ್ಕರೆ ಈ ಮೂರನ್ನು ಬೆರಸಿ ನಿಮ್ಮ ತುಟಿಗಳಿಗೆ ಈ ಮಿಶ್ರಣದಿಂದ 5 ನಿಮಿಷ ಮಾಸಾಜ್ ಮಾಡಿಕೊಂಡು ನಂತರ ತೊಳೆದುಕೊಳ್ಳಿ. ಆರೋಗ್ಯಕರ ತುಟಿಗಳಿಗೆ ಮೂರು ಅತ್ಯುನ್ನತ ಪ್ರಯೋಜನವನ್ನು ನೀಡುತ್ತವೆ. ಜೇನುತುಪ್ಪ ಉತ್ಕರ್ಷಣ ನಿರೋಧಕಗಳ ಒಂದು ಶಕ್ತಿಕೇಂದ್ರ ಮತ್ತು ನಿಂಬೆ ಅಗತ್ಯ ಜೀವಸತ್ವಗಳನ್ನು ಒದಗಿಸುತ್ತದೆ. ಈ ಸ್ಕ್ರಬ್ ತುಟಿಗಳಿಗೆ ಒಂದು ಮಾಯಿಶ್ಚೈಸರ್ ಆಗಿ ಕಾರ್ಯನಿರ್ವಹಿಸುತ್ತದೆ.

ಜೇನುತುಪ್ಪ ಲಿಪ್ ಸ್ಕ್ರಬ್ ಜೇನುತುಪ್ಪ ಸ್ಕ್ರಬ್: , ತಯಾರಿಸುವ ವಿಧಾನ ಅಡಿಗೆ ಸೋಡಾ, ಆಲಿವ್ ಎಣ್ಣೆಯ ಜೇನುತುಪ್ಪ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ತುಟಿಗಳಿಗೆ ಹಚ್ಚಿಕೊಂಡು ಮಸಾಜ್ ಮಾಡಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಸತ್ತ ಕೋಶಗಳನ್ನು ತೆಗೆದುಹಾಕುವಲ್ಲಿ ಇದು ಸಹಾಯ ಮಾಡುತ್ತದೆ.

Comments are closed.