ಕರಾವಳಿ

ಮಕ್ಕಳ ಪೋಷಣೆಯಲ್ಲಿ ನೂತನ ತಂದೆ ತಾಯಂದಿರು ಎದುರಿಸುವ ಸವಾಲುಗಳು

Pinterest LinkedIn Tumblr

ಮಕ್ಕಳ ಪೋಷಣೆ ಎಷ್ಟು ಅದ್ಬುತ ಹಾಗು ಹಿತಕರವಾಗಿ ಇರುತ್ತದೆಯೋ ಅಷ್ಟೇ ವೇದನೆ ಹಾಗು ಒತ್ತಡಗಳಿಂದ ಕೂಡಿರುತ್ತದೆ. “ಅಯ್ಯೋ ಈ ಮಕ್ಕಳು ಬೇಡ,ಅವರು ಕೊಡೊ ಕಾಟವೂ ಬೇಡ” ಎಂದು ಅಮ್ಮ ಗೊಣುಗುವುದನ್ನು ನಾವು ಕೇಳಿದ್ದೇವೆ. ಇಲ್ಲಿದೆ ಎಲ್ಲ ನೂತನ ತಂದೆ ತಾಯಂದಿರು ಎದುರಿಸುವ ೬ ಸವಾಲುಗಳು. ನಿಮಗೂ ಕೂಡ ಇತ್ತೀಚಿಗೆ ಮಗುವಾಗಿದ್ದರೆ ಇವುಗಳನ್ನು ಎಂದಾದರು ಅನುಭವಿಸಿಯೇ ಇರುತ್ತೀರ.

೧. ಪತಿ ಪತ್ನಿಯರ ಯುದ್ಧ
ಅಮ್ಮಂದಿರ!, ನಿಮಗೆ ನಿಮ್ಮ ಗಂಡನ ಮೇಲೆ ಎಷ್ಟೊಂದು ಸಿಟ್ಟು ಬರುತ್ತದೆ ಅಂದರೆ ನೀವು ಅವರಿಗೆ ಒಂದು ದಿನದಲ್ಲಿಯೇ ಅವರಿಗೆ ಹಲವು ಬಾರಿ ವಿಚ್ಚೇದನ ನೀಡಿ ಬಿಡಬೇಕೆಂದು ಅನಿಸುತ್ತದೆ! ಏಕಂದರೆ ಹೊಸ ಮಗುವಿನೊಂದಿಗೆ ನಿಮ್ಮ ಹೆಗಲ ಮೇಲೆ ಬೀಳುವ ಸಹಸ್ರ ಸಹಸ್ರ ಜವಾಬ್ದಾರಿಗಳನ್ನ ನಿಭಾಯಿಸುವುದು ಎಷ್ಟು ಕಷ್ಟವೆಂದು ನಿಮ್ಮ ಪತಿಗೆ ಅರ್ಥವೇ ಆಗುವುದಿಲ್ಲ. ನಿಮ್ಮ ಪತಿ ಅವರ ಪಾಲಿನ ಜವಾಬ್ದಾರಿಗಳನ್ನು ನಿಭಾಯಿಸುತ್ತಿಲ್ಲ ಎಂದು ನಿಮಗೆ ಅನಿಸಬಹುದು. ನಿಮ್ಮ ಪತಿಯ ಮೇಲೆ ಎಷ್ಟು ಕೋಪ ಉಂಟಾಗುತ್ತದೆ ಎಂದರೆ ಅವರನ್ನು ನಿದ್ದೆಯಲ್ಲೇ ಕೊಲ್ಲುವಷ್ಟು! ಆದರೆ ಯಾವಾಗಲು ನೆನಪಿಡಿ, ನಿಮ್ಮ ಪತಿಯು ಕೂಡ ಆರ್ಥಿಕ ಸ್ತಿಥಿ ಸುಧಾರಿಸಲು ಬಹಳಷ್ಟು ಒತ್ತಡದಲ್ಲಿ ಇದ್ದಾರೆ ಎಂದು. ಏಕಂದರೆ ಈಗ ನಿಮ್ಮ ಸಂಸಾರ ಇನ್ನೊಂದು ವ್ಯಕ್ತಿಯನ್ನು ಬರಮಾಡಿಕೊಂಡಿದೆ.

ಅಪ್ಪಂದಿರ!, ಮಕ್ಕಳನ್ನು ಬೆಳೆಸುವುದಾಗಲಿ ಅಥವಾ ಸದಾ ಕಾಲ ಅಳುವ ಮಗುವನ್ನು ಸಂಭಾಲಿಸುವುದಾಗಲಿ ಸುಲಭದ ಕೆಲಸವಲ್ಲ. ನಿಮ್ಮ ಅರ್ಧಾಂಗಿಯೂ ಯಾವುದಾದರು ಚಿಕ್ಕ ವಿಷಯದ ಸಲುವಾಗಿ ನಿಮ್ಮಲ್ಲಿ ಹಠ ಹಿಡಿದರೆ ಅಥವಾ ಯಾವುದೋ ಜವಾಬ್ದಾರಿಗಳನ್ನು ಹೊರಲು ಹೇಳಿದರೆ, ಮರುಮಾತಾಡಿ ದೊಡ್ಡದು ಮಾಡಬೇಡಿ. ದುಡಿಯುವ ಕೆಲಸ ನಿಮ್ಮದಾಗಿರಬಹುದು ಆದರೆ ಆಕೆಯ ಕೆಲಸವೂ ತುಂಬಾ ಆಯಾಸಕಾರಿ. ಅವಳಿಗೂ ಸಹಾಯ ಮಾಡಿ. ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಪಾತ್ರೆ ತೊಳೆಯರಿ ಅಥವ ಬಟ್ಟೆ ಒಗೆಯಿರಿ.

ಒಬ್ಬರನ್ನು ಒಬ್ಬರು ಬದಿದುಕೊಳ್ಳುವಂತೆ ಆಗುವುದು ಸಹಜ. ಆದರೆ ಏನೇ ಸಮಸ್ಯೆ ಇದ್ದರೂ, ನೀವಿಬ್ಬರು ಕೂತುಕೊಂಡು ಸಮಾಧಾನದಿಂದ ಮಾತಾಡಿದರೆ ಬಗೆಹರಿಯದೆ ಇರುವುದಿಲ್ಲ.

೨. “ನಂಗೆ ಅವರೇ ಊಟ ಮಾಡಿಸಬೇಕು”
ಊಟದ ವಿಷ್ಯ ಬಂದೊಡನೆ ಮಕ್ಕಳು ತುಂಬಾ ಕಾಟ ಕೊಡುವುದರಿಲ್ಲ ಅಚ್ಚರಿ ಏನಿಲ್ಲ. ಅವರು ಕೆಲವೊಮ್ಮೆ ತುಂಬಾ ಹಠ ಹಿಡಿಯುತ್ತಾರೆ. ಆದರೆ, ಆ ಹಠಕ್ಕೆ ಸೋತರೆ ತಪ್ಪೇನಿಲ್ಲ ಬಿಡಿ. ನಿಮ್ಮ ಮಗುವಿಗೆ ಸೋಳುವುದಲ್ಲದೆ ಮಾತ್ತ್ಯಾರಿಗೆ ಸೋತಿರಿ ಆಲ್ವಾ? ಅವರು ಕಡಾಕಂಡಿತವಾಗಿ ಇಷ್ಟಪಡದೆ ನಿರಾಕರಿಸಿದ ಆಹಾರವನ್ನು ಅವರಿಗೆ ತುಂಬಾ ಒತ್ತಾಯ ಮಾಡಿ ತಿನಿಸಬೇಡಿ. ಹೀಗೆಂದ ಮಾತ್ರಕ್ಕೆ ನೀವು ಮಕ್ಕಳಿಗೆ ಕೇವಲ ಕುರುಕಲು ತಿಂಡಿ ಕೊಟ್ಟು ಹಾಲು ಮಾಡಬೇಡಿ.

ನಿಮ್ಮ ಮಗುವಿನ ಆರೋಗ್ಯಕ್ಕೆ ಹಾನಿ ಮಾಡದೆ, ಮಗು ಅದನ್ನು ಇಷ್ಟ ಕೂಡ ಪಡುವಂತ ಆಹಾರಗಳನ್ನ ಹುಡುಕಿ. ಹಾಗು ನಿಮ್ಮ ಮಗುವಿನ ಊಟದ ಸಮಯವನ್ನು ಹೆಚ್ಚು ಖುಷಿಕರವಾಗಿ ಮಾಡಿ. ಇದು ನಿಮ್ಮಿಬ್ಬರಿಗೂ ಒಳ್ಳೆಯದು.

೩. “ನಂಬರ್ ೨”ಗೆ ಹೋಗುವುದನ್ನು ಹೇಳಿಕೊಡುವುದು
ನೋಡ್ರೀ ನೀವು ಎಷ್ಟೇ ಬೇಡಿಕೊಂಡರು, ಮಕ್ಕಳಿಗೆ ಯಾವಾಗೂ ಬೇಕೆನಿಸುವುದು ಅವಾಗಲೇ ಅವರು ಹೋಗುವುದು. ನೀವು ಅವರನ್ನ ಒತ್ತಾಯ ಪಡಿಸಲು ಆಗುವುದಿಲ್ಲ, ಆದರೆ ಮಕ್ಕಳು ತಾವಾಗಿಯೇ ಕಲಿಯುವುದು ಇಲ್ಲ. ನಿಮ್ಮ ಮಗು ಇದಿಕ್ಕಿದಂತೆ ಒಂದು ದಿನ ಎದ್ದು “ನಾನು ಇಂದು ನನ್ನ ಪ್ಯಾಂಟ್ ಅಲ್ಲಿ ಮಾಡದೆ, ಶೌಚಾಲಯದಲ್ಲೇ ಮಾಡ್ತೀನಿ” ಎಂದು ಹೇಳಲು ಸಾಧ್ಯವಿಲ್ಲ. ಇದನ್ನು ಕಲಿಸಲು ಬಹಳಷ್ಟು ಸಮಯ ಹಾಗು ಶ್ರಮದ ಅಗತ್ಯವಿದೆ. ಹಾಗಾಗಿ ತಾಳ್ಮೆ ಕಲೆತುಕೊಳ್ಳಿ.

ಇದನ್ನು ಸುಲಭ ಮಾಡಲು ಒಂದು ಒಳ್ಳೆಯ ಉಪಾಯವೆಂದರೆ ನಿಮ್ಮ ಮಗುವಿಗೆ ಕಾರಿನಲ್ಲಿ ಒಂದು ಜಾಲಿ ರೈಡ್ ನ ಆಸೆ ತೋರಿಸುವುದು ಅಥವಾ ಟಾಯ್ಲೆಟ್ ಕುರ್ಚಿಯ ಮೇಲೆ ನಿಮ್ಮ ಮಗುವಿನ ನೆಚ್ಚಿನ ಸೂಪರ್ ಹೀರೋಗಳ ಚಿತ್ರಗಳನ್ನು ಅಥವಾ ಸ್ಟಿಕ್ಕರ್ ಗಳನ್ನ ಅಂಟಿಸಿ.

೪. ಮಗುವಿನ ಉದ್ಧಟತನ
ಮಕ್ಕಳು ತುಂಬಾ ಅಹಿತಕರ ಸಮಯದಲ್ಲೇ ಹಠ ಮಾಡುವುದು, ಉದ್ಧಟತನ ತೋರುವುದಕ್ಕೆ ಇಷ್ಟ ಪಡುವಂತೆ. ನಿಮಗ ಕಾಟ ಕೊಡಲೆಂದೇ ದೇವರು ನಿಮಗೆ ನಿಮ್ಮ ಮಗುವನ್ನು ಕಳುಹಿಸಿದ್ದಾನೆ ಎಂದು ನಿಮಗೆ ಭಾಸವಾಗಬಹುದು. ಅಂತಹ ಸಮಯಗಳಲ್ಲಿ ನಿಮಗೆ ನಿಮ್ಮ ವೇದನೆಯನ್ನು ಹೇಗೆ ವ್ಯಕ್ತಪಡಿಸಬೇಕು ಎಂದೇ ತಿಳಿಯುವುದಿಲ್ಲ. ಯಾವುದಾದರು ಸಮಾರಂಭಗಳು ಅಥವಾ ಔತಣಕೂಟಗಳಲ್ಲಿ ನಿಮ್ಮ ಮಗು ಹಠ ಮಾಡಿದರೆ, ನೀವು ಮುಜುಗರ ಮಾಡಿಕೊಳ್ಳಬೇಡಿ. ಯಾರು ಕೂಡ ೫ ತಿಂಗಳ ಮಗುವು ಸಂಭಾವಿತನಾಗಿ, ಪ್ರಶಾಂತವಾಗಿ ಇರಬೇಕೆಂದು ಭಾವಿಸುವುದಿಲ್ಲ. ನಿಮ್ಮ ಮಗುವಿನೊಂದಿಗೆ ತಾಳ್ಮೆಯಿಂದ ವ್ಯವಹರಿಸಿ ಹಾಗು ಅವರನ್ನು ಸಮಾಧಾನ ಪಡಿಸಿ.

೫. ನಿದ್ದೆ ಸಮಯ ಯಾವುದು?
ಮನುಷ್ಯರು ಯಾವು ವಯಸ್ಸಿನವರಾದರು ನಿದ್ದೆಯೆಂದರೆ ಇಷ್ಟ ಪಡದೆ ಇರುವುದಿಲ್ಲ. ನಿಮ್ಮ ಮಗುವಿಗು ಕೂಡ ನಿದ್ದೆಯೆಂದರೆ ಇಷ್ಟ. ಆದರೆ ಅದಕ್ಕೆ ನಿದ್ದೆಗೆ ಸಮಯ ಯಾವುದೆಂದು ತಿಳಿದಿರುವುದಿಲ್ಲ ಅಷ್ಟೇ. ನಿಮಗೆ ಮಗು ಜನಿಸಿದ ನಂತರದ ಮೊದಲ ಕೆಲವು ತಿಂಗಳು ನೀವು ಬಹಳಷ್ಟು ನಿದ್ದೆ ಕಳೆದುಕೊಳ್ಳುತ್ತೀರ. ಮಗು ಹೆರುವದರ ಅಡ್ಡಪರಿಣಾಮವೇ ಇದು. ಆದರೆ ಅದನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸಲು ಬೇಕ್ಕಗಿರುವ ಉಪಾಯಗಳು ಇಲ್ಲಿವೆ :

1- ನಿಮ್ಮ ಮಗು ಮಲಗುವ ಕೋಣೆಯನ್ನು ಆದಷ್ಟು ಹಿತಕರವಾಗಿ ಮಾಡಿ. ಇದು ನಿಮ್ಮ ಮಗುವಿಗೆ ನಿದ್ದೆ ಬರಿಸುವುದು.
2- ನೀವು ಕೂಡ ಎಷ್ಟು ನಿದ್ದೆಯಾಗುತ್ತದೋ ಅಷ್ಟು ಮಾಡಿಕೊಳ್ಳಿ. ಏಕೆಂದರೆ ನಿದ್ದೆ ಅಂದರೆ ಕೇವಲ ಮಕ್ಕಳಿಗೆ ಮಾತ್ರ ಅಲ್ಲ ಎಲ್ಲರಿಗೂ ಇಷ್ಟ !
3- ಒಂದು ವೇಳಾಪಟ್ಟಿ ತಾಯರಿಸಿಕೊಳ್ಳಿ. ನೀವು ಹಾಗು ನಿಮ್ಮ ಪತಿಯು ಸರದಿಗಳಲ್ಲಿ ನಿಮ್ಮ ಮಗುವನ್ನು ನಿದ್ದೆಗೆ ಕಳಿಸುವ ಕೆಲಸವನ್ನು ತೆಗೆದುಕೊಳ್ಳಿ.

೬. ಹುಷಾರಿಲ್ವ? ಅಯ್ಯೋ!
ನಿಮ್ಮ ಕೈಯಲ್ಲಿ ಸರ್ವವೂ ನಿಯಂತ್ರಿಸುವುದು ಅಸಾಧ್ಯ. ನಿಮ್ಮ ಮಗುವಿಗೆ ಹುಶಾರಿಲ್ಲದಂತೆ ಆದರೆ, ನಿಮ್ಮನ್ನು ನೀವು ಬೈದುಕೊಳ್ಳಬೇಡಿ. ಮಕ್ಕಳಲ್ಲಿ ಪ್ರತಿರಕ್ಷಣಾ ವ್ಯವಸ್ತೆಯನ್ನು ವ್ರುದ್ಧಿಗೊಳಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಹಾಗಾಗಿ ಅವರು ಸ್ವಾಭಾವಿಕವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಅದಕ್ಕೆ ಕಾರಣಗಳು ಹಲವಾರು ಇರಬಹುದು.

ಇಂತಹ ಸಮಯದಲ್ಲಿ ನೀವು ಒಳ್ಳೆಯ ಮಕ್ಕಳ ತಜ್ಞ/ತಿಳಿದುಕೊಂಡಿರುವ ಸಂಬಧಿಯಿಂದ ಸಲಹೆ ಪಡೆದುಕೊಳ್ಳಿ. ಮಕ್ಕಳಿಗೆ ರಾಶಿಗಟ್ಟಲೆ ಬಣ್ಣ ಬಣ್ಣದ ಗುಳಿಗೆ, ಮಾತ್ರೆಗಳನ್ನು ಕೊಡುವವರ ಬಳಿ ಹೋಗಬೇಡಿ. ಮನೆಯಲ್ಲೇ ತಯಾರಿಸಿದ ಮದ್ದುಗಳೆ ನಿಮ್ಮ ಮಗುವಿಗೆ ಅತ್ಯಂತ ಹಿತಕಾರಿಯಾಗಿರುತ್ತದೆ (ವಿಷಯ ತುಂಬಾ ಗಂಭೀರವಾಗಿಲ್ಲದಾಗ).

Comments are closed.