ಕರಾವಳಿ

ಮನುಷ್ಯರಿಗೇಕೆ ಮೇಟಿಂಗ್ ಸೀಸನ್ (ಸಂಯೋಗ ಋತು) ಇಲ್ಲ… ಗೊತ್ತೆ..?

Pinterest LinkedIn Tumblr

ಬಹುತೇಕ ಪ್ರಾಣಿಗಳಿಗೆ ತಮ್ಮದೇ ಆದ ಸಂಯೋಗದ ಋತು (ಮೇಟಿಂಗ್ ಸೀಸನ್) ಇರುತ್ತದೆ ಹಾಗು ಅದು ಸಾಮಾನ್ಯವಾಗಿ ಅವುಗಳಿಗೆ ಬೇಕಾದಷ್ಟು ಆಹಾರ, ಬಿಸಿಲು ಮತ್ತು ಫಲವತ್ತತೆ ಲಭಿಸುವಂತಹ ಋತು ಆಗಿರುತ್ತದೆ. ಆದರೆ ಮನುಷ್ಯರಲ್ಲಿ? ಮನುಷ್ಯರು ಇಂತದ್ದೇ ಋತು ಎಂದಾಗಲಿ, ಇಂತಹದ್ದೇ ಹವಾಮಾನ ಇರಬೇಕೆಂದಾಗಲಿ ಕಾಯುತ್ತಾ ಕೂರದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಇದಕ್ಕೆ ಕಾರಣ ಏನು? ಈ ಪ್ರಶ್ನೆಗೆ ಉತ್ತರ ಪಡೆಯಲೆಂದು ಈ ಪ್ರಶ್ನೆಯನ್ನು ನಾವು ಕೆಲವು ತಜ್ಞರ ಮುಂದಿಟ್ಟೆವು.

ಮಾನವರು ಇನ್ನೊಬ್ಬರ ಸಂಗವನ್ನ ಬಯಸುವರು ಮತ್ತು ಅವರ ಆತ್ಮೀಯತೆಯನ್ನ ಬಯಸುವರು. ಹೀಗಾಗಿ ಅವರು ಕೇವಲ ಇನ್ನೊಂದು ಜೀವಕ್ಕೆ ಜನನ ನೀಡಲೆಂದು ಮಾತ್ರವೇ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವ ಬದಲು, ತಮ್ಮ ಬಾಂಧವ್ಯವನ್ನ ಗಟ್ಟಿಯಾಗಿಸಿಕೊಳ್ಳಲು ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವವರು ಎನ್ನುತ್ತಾರೆ ಓರ್ವ ತಜ್ಞರಾದ ಡೊಮಿನಿಕ್ ಕ್ಲಾರ್ಕ್.

ಇದರೊಂದಿಗೆ ಫ್ಲೋರಿಡಾದ ಬೀಕನ್ ಕಾಲೇಜಿನ ಪ್ರಾಣಿಶಾಸ್ತ್ರಜ್ಞರಾದ ಕ್ರಿಸಿ ಕೇಸ್ ಇನ್ನೊಂದಷ್ಟು ಮಾಹಿತಿ ನೀಡುತ್ತಾರೆ. ನಾವು, ಅಂದರೆ ಮಾನವರು “ನಿರಂತರ ತಳಿಗಾರರು” ಅಥವಾ ಕಂಟಿನ್ಯೂಯಸ್ ಬ್ರೀಡರ್ಸ್ ಎಂಬ ಜೈವಿಕ ಗುಂಪಿಗೆ ಸೇರಿರುವವರಾಗಿದ್ದು, ನಾವು ವರ್ಷವಿಡೀ ಸಂಯೋಗದಲ್ಲಿ ಭಾಗಿಯಾಗುತ್ತೇವೆ. ಇತರೆ ಕೆಲವು ಪ್ರಾಣಿಗಳು, ಪಕ್ಷಿಗಳು ಕಾಲೋಚಿತ ತಳಿಗಾರರು ಅಥವಾ ಸೀಸನಲ್ ಬ್ರೀಡರ್ಸ್ ಆಗಿದ್ದು, ಅವುಗಳು ಕೇವಲ ಕೆಲವು ನಿರ್ಧಿಷ್ಟ ಕಾಲಾವಧಿಯ ವೇಳೆ ಸಂಯೋಗದಲ್ಲಿ ಭಾಗಿಯಾಗುತ್ತವೆ. ಹೀಗೆ ಸೀಸನಲ್ ಆಗಿ ಸಂಯೋಗದಲ್ಲಿ ಭಾಗಿಯಾಗುವ ಪ್ರಾಣಿಗಳು ಅಥವಾ ಪಕ್ಷಿಗಳಲ್ಲಿ, ಹೆಣ್ಣು ಪ್ರಾಣಿ/ಪಕ್ಷ ಕೇವಲ ಯಾವುದಾದರು ಒಂದು ಸೀಸನ್ ಅಲ್ಲಿ ಮಾತ್ರ ಲೈಂಗಿಕ ಚಟುವಟಿಕೆ ಹೆಚ್ಚಿಸುವಂತ ಮಾನಸಿಕ ಮತ್ತು ದೈಹಿಕ ಬದಲಾವಣೆ ಹೊಂದುತ್ತದೆ. ಒಂದು ವೇಳೆ ಈ ಸಮಯದಲ್ಲಿ ಅವು ಗರ್ಭ ಧರಿಸಲಿಲ್ಲ ಎಂದರೂ, ಅವುಗಳ ಗರ್ಭಕೋಶದಲ್ಲಿನ ಎಂಡೊಮೆಟ್ರಿಯಲ್ ಲೈನಿಂಗ್ ಹಾಗೆಯೇ ಉಳಿಯುತ್ತದೆ.

ಆದರೆ ಮಾನವ ಜಾತಿಯಲ್ಲಿನ ಪ್ರೌಢಾವಸ್ಥೆಗೆ ಕಾಲಿಟ್ಟಿರುವ ಹೆಣ್ಣು ರೆಗ್ಯುಲರ್ ಆಗಿ ಅಂಡೋತ್ಪತ್ತಿ ಮತ್ತು ಋತುಸ್ರಾವ ಹೊಂದುತ್ತಾಳೆ. ಆಗ ಆಕೆ ಗರ್ಭ ಧರಿಸಲಿಲ್ಲ ಎಂದರೂ ಆಕೆಯ ಗರ್ಭಕೋಶದಲ್ಲಿನ ಎಂಡೊಮೆಟ್ರಿಯಲ್ ಲೈನಿಂಗ್ ಹೊರಬೀಳುತ್ತದೆ. ಹೀಗಾಗಿ ಆಕೆಗೆ ಪುನಃ ಲೈಂಗಿಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಲು ಮತ್ತ್ಯಾವುದೇ ದೈಹಿಕ ಅಥವಾ ಮಾನಸಿಕ ಬದಲಾವಣೆಗಳು ಬೇಕಿಲ್ಲ.

ಇನ್ನೋರ್ವ ತಜ್ಞರಾದ ಜಾಕ್ವಾಲಿನ್ ಪ್ರೈಮ್ ಅವರು “ಮಾನವರು ಸಾಮಾಜಿಕ ಪ್ರಾಣಿಗಳು. ಈ ಪ್ರಾಣಿಗಳು ತಾವು ಜೀವಂತವಾಗಿರಲು ಮತ್ತು ಸಂತಾನೋತ್ಪತ್ತಿ ಮಾಡಲು ತಮ್ಮ ಗುಂಪಿನ ಇತರ ಸದಸ್ಯರ ಮೇಲೆ ಅವಲಂಬಿತವಾಗಿರುತ್ತಾರೆ. ಇದರ ಅರ್ಥ ನಾವು ಇನ್ನೊಬ್ಬರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯವಾಗಿರುತ್ತದೆ. ಎರಡು ವ್ಯಕ್ತಿಗಳ ನಡುವೆ ಬಾಂಧವ್ಯ ಬೆಳೆದು, ಅನ್ಯೋನ್ಯತೆ ಹೆಚ್ಚಿಸಿಕೊಳ್ಳಬೇಕು ಎಂದರೆ ಅದಕ್ಕೆ ಧ್ವನಿ ಮತ್ತು ಸ್ಪರ್ಶದ ಸಂವಹನವು ಬಹಳ ಮುಖ್ಯವಾಗುತ್ತದೆ. ಈ ವಿಷಯದಲ್ಲಿ ಮಾನವರು ಇತರೆ ಸಸ್ತನಿಗಳಿಗೆ ತುಂಬಾ ಬೇರೆಯಾಗಿಲ್ಲ, ಆದರೆ ನಾವು ಅನುಸರಿಸುವ ವಿಧಾನಗಳು ಮತ್ತು ನಾವು ತೆಗೆದುಕೊಳ್ಳುವ ದಾರಿಗಳು ಮಾತ್ರ ಬೇರೆ” ಎನ್ನುತ್ತಾರೆ.

Comments are closed.