ಕರಾವಳಿ

ಮುಖದ ಮೇಲಿನ ಜಿಡ್ಡಿನ ಸಮಸ್ಯೆ ನಿವಾರಣೆಗೆ ಈ ಸಲಹೆ

Pinterest LinkedIn Tumblr

ಹೊರಗೆ ತಿರುಗಾಡುವುದರಿಂದ ಕೆಲವರಿಗೆ ಮುಖದಲ್ಲಿ ಜಿಡ್ಡು, ಕೊಳೆ ಸೇರಿಕೊಳ್ಳುತ್ತದೆ. ಆದರೆ, ಕೆಲವರಿಗೆ ಮಾತ್ರ ಮುಖ ಯಾವಾಗಲೂ ಜಿಡ್ಡಿನಿಂದಲೇ ಕೂಡಿರುತ್ತದೆ. ಇದರಿಂದಾಗಿ ಮೊಡವೆ, ಕಪ್ಪು ಮಚ್ಚೆ ಮುಂತಾದ ಸಮಸ್ಯೆಗಳು ಬರುತ್ತವೆ. ಈ ನಿಟ್ಟಿನಲ್ಲಿ ಕೆಳಗೆ ನೀಡಲಾಗಿರುವ ಕೆಲವು ಸಲಹೆಗಳನ್ನು ಪಾಲಿಸಿದಲ್ಲಿ ಇವುಗಳಿಂದ ಮುಕ್ತಿ ಪಡೆಯಬಹುದು.

1.ಅಲುವೆರಾ ರಸಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿಕೊಂಡು, ಸ್ವಲ್ಪ ಸಮಯದನಂತರ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಮುಖದ ಮೇಲಿನ ಜಿಡ್ಡು, ಕೊಳೆ ತೊಲಗಿ, ಮುಖ ಕಾಂತಿಯುತವಾಗುತ್ತದೆ.

2. ಅಲುವೇರಾ ಎಲೆಗಳನ್ನು ನೀರಿನಲ್ಲಿ ಕುದಿಸಬೇಕು. ನಂತರ ಪೇಸ್ಟ್ ಮಾಡಿ ಕೆಲವು ತೊಟ್ಟುಗಳ ಜೇನನ್ನು ಬೆರೆಸಿ, ಮುಖಕ್ಕೆ ಬಳಿದುಕೊಂಡು 15 ನಿಮಿಷಗಳ ನಂತರ ಶುಭ್ರಮಾಡಿಕೊಳ್ಳಬೇಕು. ವಾರದಲ್ಲಿ ಎರಡು ಮೂರು ಸಲ ಹೀಗೆ ಮಾಡಿದರೆ,ಮುಖದ ಮೇಲಿನ ಕೊಳೆ ಹಾಗೂ ಜಿಡ್ಡು ಮಾಯವಾಗುತ್ತದೆ.

3. ಒಂದು ಪಾತ್ರೆಯಲ್ಲಿ ಒಂದು ಚಮಚ ಅಲುವೇರಾ ತಿರುಳು, ಅರ್ಧ ಚಮಚ ಮೊಸರು, ಅರ್ಧ ಚಮಚ ಸೌತೆಕಾಯಿ ರಸ, ಸ್ವಲ್ಪ ರೋಸ್ ವಾಟರ್ ಹಾಕಿ ಚೆನ್ನಾಗಿ ಕಲೆಸಬೇಕು. ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖ ಕಾಂತಿಯುತವಾಗುತ್ತದೆ. ಅನೇಕ ಚರ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ.

4.ಒಂದು ಚಮಚ ಅಲುವೇರಾ ತಿರುಳು, ಒಂದು ಚಮಚ ಓಟ್ಸ್, ಒಂದು ಚಮಚ ಸೌತೆಕಾಯಿ ತುರಿ ಇವೆಲ್ಲವನ್ನೂ ಬೆರೆಸಿ, ಮುಖ್ಕಕೆ ಹಚ್ಚಿ ಮಸಾಜ್ ಮಾಡಿಕೊಂಡು ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆದುಕೊಳ್ಳಬೇಕು. ಇದರಿಂದ ಮುಖದ ಜಿಡ್ಡು, ಕೊಳೆ ತೊಲಗುತ್ತದೆ.ಮುಖ ಕಾಂತಿಯುತವಾಗುತ್ತದೆ.

Comments are closed.