ಮನೋರಂಜನೆ

‘ಪದ್ಮಾವತ್​’ಗೆ ಪ್ರತೀಕಾರ: ಸಂಜಯ್ ಲೀಲಾ ಬನ್ಸಾಲಿ ಅಮ್ಮನ ಬಗ್ಗೆ ಸಿನಿಮಾ ಮಾಡುತ್ತೇವೆ ಎಂದು ಘೋಷಿಸಿದ ಕರ್ಣಿ ಸೇನಾ

Pinterest LinkedIn Tumblr

ಜೈಪುರ/ಚಿತ್ತೋರ್​ಗಡ: ವಿವಾದಾತ್ಮಕ ಬಾಲಿವುಡ್ ಚಿತ್ರ‘ಪದ್ಮಾವತ್​’ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಶ್ರೀ ರಜಪೂತ್ ಕರ್ಣಿ ಸೇನೆ, ಪದ್ಮಾವತ್ ಚಿತ್ರದ ನಿರ್ದೇಶಕ ಸಂಜಯ್​ ಲೀಲಾ ಭನ್ಸಾಲಿ ಅವರ ತಾಯಿ ಮೇಲೆ ಸಿನಿಮಾ ಮಾಡುವುದಾಗಿ ಶುಕ್ರವಾರ ಘೋಷಿಸಿದೆ.

ಶೀಘ್ರದಲ್ಲೇ ಸಂಜಯ್ ಲೀಲಾ ಭನ್ಸಾಲಿ ಅವರ ತಾಯಿ ಕುರಿತG ‘ಲೀಲಾ ಕಿ ಲೀಲಾ’ ಎಂಬ ಹೆಸರಿನಲ್ಲಿ ಚಿತ್ರ ನಿರ್ಮಾಣ ಮಾಡುವುದಾಗಿ ಚಿತ್ತೋರ್​ಗಡದ ಕರ್ಣಿ ಸೇನೆ ಜಿಲ್ಲಾಧ್ಯಕ್ಷ ಗೋವಿಂದ್​ ಸಿಂಗ್​ ಕಾಂಗ್ರೋಟ್​ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಬನ್ಸಾಲಿ ಅವರ ತಾಯಿ ಲೀಲಾ ಅವರ ಕುರಿತಾದ ಸಿನಿಮಾಕ್ಕೆ ‘ಲೀಲಾ ಕಿ ಲೀಲಾ’ ಎಂದು ಶೀರ್ಷಿಕೆ ನೀಡಲಾಗಿದೆ. ಅರವಿಂದ್​ ವ್ಯಾಸ್​ ಸಿನಿಮಾದ ನಿರ್ದೇಶಕರಾಗಿದ್ದು, ಚಿತ್ರಕ್ಕಾಗಿ ಚಿತ್ರಕಥೆ ಸಿದ್ಧಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಇನ್ನು 15 ದಿನಗಳಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಈ ವರ್ಷದೊಳಗೆ ಸಿನಿಮಾ ತೆರೆ ಕಾಣಲಿದೆ.

ಸಿನಿಮಾದ ಚಿತ್ರೀಕರಣವನ್ನು ರಾಜಸ್ತಾನ್​ನಲ್ಲೇ ನಡೆಯಲಿದೆ. ನಮ್ಮ ತಾಯಿ ಪದ್ಮಾವತಿಯನ್ನು ಭನ್ಸಾಲಿ ಅವಮಾನ ಮಾಡಿದ್ದಾರೆ. ಆದರೆ ಭನ್ಸಾಲಿ ಹೆಮ್ಮೆ ಪಡುವಂತಹ ಸಿನಿಮಾವನ್ನು ನಾವು ಮಾಡುತ್ತೇವೆ ಎಂದು ಕರ್ಣಿ ಸೇನೆ ನಾಯಕ ತಿಳಿಸಿದ್ದಾರೆ.

Comments are closed.