ಮನೋರಂಜನೆ

ಈ ಬಾರಿ ಪ್ರಸಾರದ 20 ನಿಮಿಷಕ್ಕೆ ಮೊದಲೇ ಬಿಗ್ ಬಾಸ್ ಫಿನಾಲೆ ಶೂಟ್

Pinterest LinkedIn Tumblr

ಕನ್ನಡ ಬಿಗ್ಬಾಸ್ ಸೀಸನ್ 5ರ ಫಿನಾಲೆ ಹಂತ ತಲುಪಿದ್ದು, ಇದೇ ಶನಿವಾರ- ಭಾನುವಾರ ಅಂತಿಮ ಘಟ್ಟದ ಕಾರ್ಯಕ್ರಮ ನಡೆಯಲಿದೆ. ಶೋ ಪ್ರಸಾರದ 20 ನಿಮಿಷಕ್ಕೆ ಮೊದಲೇ ಬಿಗ್ಬಾಸ್ ಫಲಿತಾಂಶವನ್ನು ಚಿತ್ರೀಕರಣ ಮಾಡಲು ಚಾನೆಲ್ ನಿರ್ಧರಿಸಿದೆ ಎಂದು ಗೊತ್ತಾಗಿದೆ.

ಫಲಿತಾಂಶ ಸೋರಿಕೆ ಆಗಬಾರದು ಎಂಬ ಉದ್ದೇಶದಿಂದ ಚಾನೆಲ್ ಈ ನಿರ್ಧಾರ ಕೈಗೊಂಡಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಫಿನಾಲೆ ಕಾರ್ಯಕ್ರಮಕ್ಕೆ ಸಾಮಾನ್ಯ ಪ್ರೇಕ್ಷಕರ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರೇಕ್ಷಕರ ಸ್ಥಾನವನ್ನು ಜ್ಯೂನಿಯರ್ ಕಲಾವಿದರು ತುಂಬಲಿದ್ದಾರೆ. ಮೊಬೈಲ್, ಕ್ಯಾಮೆರಾ ಸೇರಿ ಕೆಲ ವಸ್ತುಗಳನ್ನು ತರದಂತೆ ಆ ಕಲಾವಿದರಿಗೆ ಈಗಾಗಲೇ ಸೂಚಿಸಲಾಗಿದೆ. ಬಿಗ್ಬಾಸ್ ಸ್ಪರ್ಧಿಗಳು ಮತ್ತು ಅವರ ಕುಟುಂಬದ ಸದಸ್ಯರು ಕೂಡ ಫಿನಾಲೆಯಲ್ಲಿ ಹಾಜರಿರಲಿದ್ದಾರೆ.

‘ಸೀಸನ್ 3 ಹೊರತುಪಡಿಸಿ ಉಳಿದೆಲ್ಲ ಸೀಸನ್ಗಳಲ್ಲಿ ಪ್ರೇಕ್ಷಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಪ್ರೇಕ್ಷಕರ ಮಧ್ಯೆ ನಾವು ಫಿನಾಲೆ ಮಾಡಲ್ಲ. ಯಾಕೆಂದರೆ, ಚಿತ್ರೀಕರಣಕ್ಕೂ ಮತ್ತು ಪ್ರಸಾರಕ್ಕೂ ಒಂದಷ್ಟು ಅಂತರ ಇದ್ದೇ ಇರುತ್ತದೆ. ಉಳಿದಂತೆ ಪ್ರತಿ ಬಾರಿಯೂ ಇರುವಂತೆ ಫಿನಾಲೆಯಲ್ಲಿ ಮಾತುಕತೆ ಇದ್ದೇ ಇರುತ್ತದೆ’ ಅಂತಾರೆ ಬಿಗ್ಬಾಸ್ ಕನ್ನಡ ನಿರ್ದೇಶಕ ಪರಮೇಶ್ ಗುಂಡ್ಕಲ್.

Comments are closed.