ಕರಾವಳಿ

ಆಲ್ಕೋಹಾಲ್‌ನಿಂದ ಹಲವು ಸಮಸ್ಯೆ ನಿವಾರಣೆ ಸಾಧ್ಯವಂತೆ …?

Pinterest LinkedIn Tumblr

ಆಲ್ಕೋಹಾಲ್ ಕುಡಿದರೆ ಅಮಲಾಗುತ್ತದೆಂಬ ವಿಶಯ ಎಲ್ಲಿರಿಗೂ ಗೊತ್ತಿರುವಂತದ್ದೇ. ಆದರೆ, ಆಲ್ಕೋಹಾಲ್ ಮನೆಯಲ್ಲಿ ಉಪಯೋಗಿಸಿ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಇದನ್ನು ಮೈಗೆ ಹಚ್ಚಿದಲ್ಲಿ ಕ್ರಿಮಿ ಸಂಹಾರಿಣಿಯಾಗಿ ಕೆಲಸ ಮಾಡುತ್ತದೆ. ಆಲ್ಕೋಹಾಲ್ ನ ಇನ್ನೂ ಹಲವು ಪ್ರಯೋಜನಗಳನ್ನು ತಿಳಿಯೋಣ ಬನ್ನಿ…

ತಿಗಣೆಗಳನ್ನು ಕೊಲ್ಲಲು….
ಕೆಲವರ ಮನೆಯಲ್ಲಿ ತಿಗಣೆಗಳ ಕಾಟ ಹೆಚ್ಚಾಗಿರುತ್ತದೆ. ಸ್ವಲ್ಪ ಆಲ್ಕೋಹಾಲನ್ನು ಹಾಸಿಗೆಯ ಮೇಲೆ ಉದುರಿಸಿದರೆ… ತಿಗಣೆ ಕಾಟದಿಂದ ಮುಕ್ತಿ ಪಡೆಯಬಹುದು. ತಿಗಣೆ ಮೊಟ್ಟೆಗಳೂ ಸಹ ಸಾಯುತ್ತವೆ. ಕೆಲವು ದಿನಗಳ ಕಾಲ ಹೀಗೆ ಹಾಸಿಗೆಯ ಮೇಲೆ ಆಲ್ಕೋಹಾಲನ್ನು ಉದುರಿಸುವುದರಿಂದ ಸಂಪೂರ್ಣವಾಗಿ ತಿಗಣೆಗಳಿಂದ ಮುಕ್ತಿ ಪಡೆಯಬಹುದು.

ಡಿಯೋಡರೆಂಟ್ ಆಗಿ…
ಆಲ್ಕೋಹಾಲನ್ನು ಡಿಯೋಡರೆಂಟ್ ಆಗಿಯೂ ಉಪಯೋಗಿಸಬಹುದು. ಶರೀರದ ದುರ್ಗಂಧದಿಂದ ಹುಟ್ಟಿಕೊಳ್ಳುವ ಕ್ರಿಮಿಗಳನ್ನು ಸಂಹರಿಸುತ್ತದೆ. ಇದನ್ನು ತಾತ್ಕಾಲಿಕವಾಗಿ ಮಾತ್ರ ಉಪಯೋಗಿಸಬಹುದು. ದೀರ್ಘಕಾಲ ಉಪಯೋಗಿಸಿದಲ್ಲಿ ಅಲರ್ಜಿ ಸಮಸ್ಯೆ ತಲೆದೋರಬಹುದು.

ಮನೆಯಲ್ಲೇ ತಯಾರಿಸಬಹುದಾದ ಕೂಲ್ ಪ್ಯಾಕ್…
ಒಂದು ಪ್ಲಾಸ್ಟಿಕ್ ಬ್ಯಾಗ್ ತೆಗೆದುಕೊಂಡು ಎರಡು ಭಾಗ ನೀರು, ಒಂದು ಭಾಗ ಆಲ್ಕೋಹಾಲ್ ಹಾಕಿ ಸೀಲ್ ಮಾಡಿ ಫ್ರಿಡ್ಜ್ ನಲ್ಲಿಟ್ಟರೆ…ಕೂಲ್ ಪ್ಯಾಕ್ ರೆಡಿ. ಶರೀರದ ಮೇಲೆ ಹೊಡೆತದಿಂದ ಆಗುವ ನೋವನ್ನು ಉಪಶಮನಗೊಳಿಸಲು ಇದನ್ನು ಉಪಯೋಗಿಸಬಹುದು.

ಹೇನುಗಳನ್ನು ನಿವಾರಿಸಲು…
ಆಲ್ಕೋಹಾಲ್ ಹಾಗು ಲ್ಯಾವೆಂಡರ್ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳತಕ್ಕದ್ದು. ನಂತರ ತಲೆಯನ್ನು ಬಾಚಿಕೊಂಡಲ್ಲಿ ಹೇನುಗಳೆಲ್ಲವೂ ಉದುರಿ ಬೀಳುತ್ತವೆ.

ಕಿವಿಗಳನ್ನು ಶುಭ್ರಗೊಳಿಸಲು…
ಬಹಳಷ್ಟು ಮಂದಿ ಕಿವಿಗಳನ್ನು ಸ್ವಚ್ಚಗೊಳಿಸಲು ಇಯರ್ ಬಡ್ಸ್ ಉಪಯೋಗಿಸುತ್ತಿರುತ್ತಾರೆ. ಇದರ ಬದಲಿಗೆ ವಿನಿಗರ್ ಹಾಗೂ ಆಲ್ಕೋಹಾಲ್ ಮಿಶ್ರಣವನ್ನು ಕಿವಿಯೊಳಗೆ ಹಾಕಿಕೊಂಡು ಶುಭ್ರಪಡಿಸಿಕೊಳ್ಳಬಹುದು.

Comments are closed.