ಕರ್ನಾಟಕ

ಆಮ್ನಿಯೋಟಿಕ್ ಚೀಲದ ಒಳಗೇ ಮಗುವಿನ ಉಸಿರಾಟದ ಅದ್ಬುತ ವಿಡಿಯೋ

Pinterest LinkedIn Tumblr

 

https://www.facebook.com/assessoriamamae/videos/1763343487246029/

ನೀವು ಎಂದಾದರೂ ಮಗುವು ಆಮ್ನಿಯೋಟಿಕ್ ಚೀಲದ ಒಳಗೇ ಇದ್ದಕೊಂಡು ಭೂಮಿಗೆ ಬಂದಿರುವುದು ನೋಡಿದ್ದೀರಾ? ಆಮ್ನಿಯೋಟಿಕ್ ಚೀಲ ಎಂದರೆ, ಗರ್ಭದ ಒಳಗೆ ತಿಳಿ, ಪಾರದರ್ಶಕ ದ್ರವ್ಯ ತುಂಬಿಕೊಂಡ ಒಂದು ಚೀಲ. ಇದುವೇ ಬೆಳೆಯುವ ಭ್ರೂಣಕ್ಕೆ ಆಶ್ರಯ ನೀಡುವುದು.

ಬಹುತೇಕ ಪ್ರಕರಣಗಳಲ್ಲಿ ಹೆರಿಗೆ ಸಮಯದಲ್ಲಿ ಈ ಆಮ್ನಿಯೋಟಿಕ್ ಚೀಲ ತಾನಾಗಿಯೇ ಹರಿದು ಹೋಗುತ್ತದೆ – ಇದನ್ನೇ ನಾವು ನೀರು ಹೊಡೆಯೋದು ಎಂದು ಹೇಳುವುದು. ಆದರೆ ಈ ಪ್ರಕರಣದಲ್ಲಿ ಆಗಿದ್ದೆ ಬೇರೆ. ಮಗುವು ಹೆರಿಗೆಯ ನಂತರವೂ ಇನ್ನೂ ಆಮ್ನಿಯೋಟಿಕ್ ಚೀಲದ ಒಳಗೆಯೇ ಮುದುರಿಕೊಂಡು ಕುಳಿತಿತ್ತು. ನೋಡಲಿಕ್ಕೂ ಅದ್ಭುತ ಹಾಗು ಕಾಣಿಸಿಕೊಳ್ಳುವುದು ಬಹಳ ವಿರಳ. ಏಕೆಂದರೆ ಇಂತಹ ಪ್ರಕರಣ 80000 ಹೆರಿಗೆಗಳಲ್ಲಿ ಒಮ್ಮೆ ಮಾತ್ರ ಎದುರಾಗುವುದು.

ಅರೋಗ್ಯ ಸಂಸ್ಥೆಯೊಂದು ಪೋಸ್ಟ್ ಮಾಡಿರುವ ಈ ವಿಡಿಯೋವನ್ನು ಈಗಾಗಲೇ ಸುಮಾರು 50 ಲಕ್ಷ ಮಂದಿ ನೋಡಿ ಬೆರಗಾಗಿದ್ದಾರೆ.

ಇದು ನೋಡಲು ಸುಂದರವಾಗಿದ್ದರೂ, ಅಷ್ಟೇ ವಿಚಿತ್ರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ನೀವು ಈ ಚೀಲವನ್ನು ನೋಡಬಹುದು. ಅದು ಬಹುತೇಕ ಸಂಪೂರ್ಣ ಪಾರದರ್ಶಕವಾಗಿದೆ. ಅದರೊಳಗೆ ದ್ರವ್ಯ ತುಂಬಿಕೊಂಡಿದ್ದು, ನೀವು ಮಗುವು ಇನ್ನೂ ತನ್ನ ಕರುಳುಬಳ್ಳಿ ಜೊತೆಗಿರುವುದು ಕಾಣಬಹುದು. ಆ ಚೀಲದ ಒಳಗೆ ಕೂಡ ಮಗುವು ತನ್ನ ಚಲನವಲನಗಳನ್ನ ನಡೆಸುತ್ತಿದೆ. ಆದರೆ ಈ ಚೀಲವು ಮುಚ್ಚಿಕೊಂಡಿದ್ದರು ಮಗುವಿಗೆ ಯಾವುದೇ ತೊಂದರೆ ಇಲ್ಲ. ಏಕೆಂದರೆ, ಅದಕ್ಕೆ ಬೇಕಿರುವ ಆಮ್ಲಜನಕ ಅದರ ಕರಳುಬಳ್ಳಿಯಿಂದ ಅದಕ್ಕೆ ಸಿಗುತ್ತಿದೆ.

Comments are closed.