ಕರ್ನಾಟಕ

ಹಲವು ರೋಗಗಳಿಗೆ “ಎಳನೀರು” ರಾಮಬಾಣ.

Pinterest LinkedIn Tumblr

ಮಂಗಳೂರು: ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಹೆಚ್ಚದಾಗ ಜನರು ತಂಪುಪಾನೀಯಗಳ ಮೊರೆ ಹೋಗುವುದು ಸಹಜ. ಆದರೆ ಆರೋಗ್ಯದ ದೃಷ್ಟಿಯಿಂದ ಎಳನೀರಿನ ಸೇವನೆ ಅತಿ ಉತ್ತಮ ಎಂದು ವೈಜ್ಞಾನಿಕವಾಗಿಯೇ ತಿಳಿದಿರುವ ವಿಷಯ..

* ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ. ಇದರ ಸೇವನೆಯಿಂದ ದೇಹಕ್ಕೆ ಆರೋಗ್ಯ ನೀಡುವುದಲ್ಲದೇ,ಫಿಟ್ನೆಸ್ ಗೂ ಇದು ಉಪಯೋಗಕರವಾಗಿದೆ.

* ಗರ್ಭಿಣಿ ಮಹಿಳೆ ಇದನ್ನು ನಿಯಮಿತವಾಗಿ ಸೇವಿಸಿದರೆ ಸುಂದರ ಹಾಗೂ ಸ್ವಾಸ್ಥ್ಯ ಮಗು ಹುಟ್ಟಲಿದೆ. ಈ ಎಲ್ಲಾ ಗುಣ ಹೊಂದಿರುವುದರಿಂದಲೇ ತೆಂಗಿನಕಾಯಿ ಮರವನ್ನು ಕಲ್ಪವೃಕ್ಷವೆಂತಲೇ ಕರೆಯಲಾಗುತ್ತದೆ.

* ಧಾರ್ಮಿಕ ಮಹತ್ವದ ಜೊತೆಗೆ ಔಷಧಿಯ ಗುಣವನ್ನು ಹೊಂದಿದ್ದು, ವಿಟಮಿನ್,ಪೊಟಾಶಿಯಂ,ಫೈಬರ್,ಕ್ಯಾಲ್ಸಿಯಂ,ಮೆಗ್ನೀಶಿಯಂ ಮತ್ತು ಖನಿಜ ಗುಣವನ್ನು ಹೊಂದಿದೆ.

* ತೆಂಗಿನಲ್ಲಿ ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಅಂಶವಿಲ್ಲ, ಹಾಗಾಗಿ ಬೊಜ್ಜು ಕರಗಲು ಸಹಾಯಮಾಡುತ್ತದೆ.

* ಬೇಸಿಗೆಯಲ್ಲಿ ನೀರು ಸೇವನೆಗಿಂತ ಎಳನೀರು ಸೇವನೆಯಿಂದ ಹೆಚ್ಚು ಖುಷಿ ಕೊಡಲಿದೆ.

* ಕೇವಲ ಖುಷಿಯಲ್ಲದೇ ದೇಹವನ್ನು ಲವಲವಿಕೆಯಿಂದಲೂ ಇಡಲಿದೆ.

* ಆರೋಗ್ಯವಷ್ಟೇ ಅಲ್ಲದೆ ಇದರ ಸೇವನೆಯಿಂದ ಮುಖದ ತ್ವಚೆಯನ್ನು ಹೊಂದಿದೆ.

* ಶಕ್ತಿ ನೀಡುವ ಗುಣ ಹೊಂದಿರುವ ಎಳನೀರನ್ನು ವ್ಯಾಯಾಮದ ನಂತರ ಸೇವನೆ ಮಾಡುವುದು ಸೂಕ್ತ, ಅತಿ ಹೆಚ್ಚು ವಿಟಮಿನ್ ಹೊಂದಿರುವ ಎಳನೀರು ಸೇವನೆ ದೇಹಕ್ಕೆ ಆರೋಗ್ಯಕರ.

ಈ ಉಪಯುಕ್ತ ಲೇಖನವನ್ನ ತಪ್ಪದೇ ಶೇರ್ ಮಾಡಿ, ಇತರರು ಇದರ ಸದುಪಯೋಗವನ್ನು ಪಡೆಯುವಂತೆ ಮಾಡಿರಿ.

ಮಾಹಿತಿ : ಯೋಗಾಮೃತ

Comments are closed.