ಕರ್ನಾಟಕ

ತಣ್ಣೀರು ಸ್ನಾನ ಎಂದರೆ ಮಾರು ದೂರು ಓಡುವವರಿಗೆ ತಣ್ಣೀರು ಸ್ನಾನದಿಂದ ಆರೋಗ್ಯದ ಮೇಲಾಗುವ ಲಾಭದ ಬಗ್ಗೆ ತಿಳಿಯಿರಿ.

Pinterest LinkedIn Tumblr

ಮಂಗಳೂರು: ತಣ್ಣೀರು ಸ್ನಾನ ಅಂದಾಕ್ಷಣ ಅನೇಕರು ಮಾರು ದೂರು ಓಡುತ್ತಾರೆ. ಆಯ್ಯೋ ಆಗಲ್ಲಪ್ಪಾ ತುಂಬಾ ಚಳಿ .. ಅನ್ನುತ್ತಾರೆ ಆದರೆ , ತಣ್ಣೀರು ಸ್ನಾನದಿಂದ ಆರೋಗ್ಯದ ಮೇಲಾಗುವ ಲಾಭ ಒಂದೆರಡಲ್ಲ. ಆ ಕುರಿತು ಒಂದಷ್ಠು ಮಾಹಿತಿ ಇಲ್ಲಿದೆ.

* ರೋಗನಿರೋಧಕ ಶಕ್ತಿ ಹೆಚ್ಚಳ :
ತಣ್ಣೀರು ಸ್ನಾನವು ನಿಮ್ಮನ್ನು ಶೀತ, ಸೋಂಕು ಹಾಗೂ ಜ್ವರದಿಂದ ದೂರ ಇಡಲು ಸಹಕರಿಸುತ್ತದೆ. ಇದು ಅಧ್ಯಯನಗಳಿಂದಲೂ ಸಾಬೀತಾಗಿದೆ. ಅಲ್ಲದೆ, ಕೆಲವು ಕ್ಯಾನ್ಸರ್‌ಗಳಿಗೂ ತಣ್ಣೀರು ಸ್ನಾನ ರಾಮಬಾಣ.

* ತೂಕ ಇಳಿಸಲು ಉತ್ತೇಜನ:
ತಣ್ಣೀರು ಸ್ನಾನವು ದೇಹದಲ್ಲಿರುವ ಬ್ರೌನ್ ಫ್ಯಾಟ್ ಉತ್ಪಾದನೆಯ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುತ್ತದೆ. ಈ ಪ್ಯಾಟ್‌‍ಗಳು ಗ್ಲುಕ್ಲೋಸನ್ನು ಬಳಸಿಕೊಂಡು ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಮೂಲಕ ದೇಹದ ತೂಕ ಇಳಿಕೆಯಾಗುತ್ತದೆ.

* ಖಿನ್ನತೆ ನಿವಾರಣೆ:
ತಣ್ಣೀರು ಸ್ನಾನದಿಂದ ಅಗುವ ಇನ್ನೋಂದು ಬಹು ಮುಖ್ಯ ಉಪಯೋಗವೆಂದರೆ ಮಾನಸಿಕ ಖಿನ್ನತೆ ನಿವಾರಣೆ. ತಣ್ಣೀರು ಸ್ನಾನವು ಮೆದುಳಿನಲ್ಲಿರುವ ಖಿನ್ನತೆ ನಿವಾರಿಸುವ ನೋರಾಡೆರಾನೈಲ್ ರಾಸಾಯನಿಕ ಬಿಡುಗಡೆ ಮಾಡಲು ಸಹಕರಿಸುತ್ತದೆ.

* ರಕ್ತದ ಚಲನೆ:
ರಕ್ತದ ಪರಿಚಲನೆ ಉತ್ತಮವಾಗಿದ್ದರೆ. ಹೃದಯ ಆರೋಗ್ಯಯುತವಾಗಿರುತ್ತದೆ. ಬಿಸಿ ನೀಋ ಹಾಗೂ ತಣ್ಣೀರು ಸ್ನಾನವನ್ನು ಜತೆಯಾಗಿ ಮಾಡುವುದರಿಂದ ರಕ್ತದ ಪರಿಚಲನೆ ಉತ್ತಮವಾಗುತ್ತದೆ.ಇದರಿಂದ ಆರೋಗ್ಯವೂ ಸುಧಾರಿಸುತ್ತದೆ.

* ಉಸಿರಾಟ ಸುಧಾರಣೆ:
ತಣ್ಣೀರು ಸ್ನಾನ ಮಾಡುವಾಗ ಉಸಿರಾಟ ದೀರ್ಘವಾಗುತ್ತದೆ. ಇದು ಶಾ‌ನಿಂದ ಆಗುವ ಒತ್ತಡ ನಿವಾರಿಸುತ್ತದೆ. ಕ್ರಿಡಾಚಟುವಟಿಕೆಗಳ ವೇಳೆ ಹೇಗೆ ನೀವು ದೀರ್ಘವಾಗಿ ಉಸಿರಾಟ ತೆಗೆದುಕೊಳ್ಳುತ್ತೀರೋ ಅದೇ ರೀತಿಯ ಅನುಭವ ತಣ್ಣೀರು ಸ್ನಾನದ ವೇಳೆಯೂ ಆಗುತ್ತದೆ. ಇದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಅಮ್ಲಜನಕ ಸಿಗುತ್ತದೆ. ಇದು ಬಹುಬೇಗ ಸುಸ್ತಾಗುವುದನ್ನು ನಿವಾರಿಸುತ್ತದೆ. ನಿಮ್ಮ ಕ್ರೀಡಾ ಸಾಧನೆಯೂ ಸುಧಾರಿಸುತ್ತದೆ.

* ಉಷ್ಣತೆ ನಿಯಂತ್ರಣ:
ತಣ್ಣೀರು ಸ್ನಾನವು ದೇಹದ ಅಂತರಿಕ ಉಷ್ಣತೆಯನ್ನು ಹೆಚ್ಚಿಸುತ್ತದೆ. ಒಂದು ವೇಳೆ ನಿಮ್ಮ ಕೈಗಳು ಹಾಗೂ ಪಾದಕ್ಕೆ ತೀವ್ರ ವಳಿಯ ಅನುಭವ ಅಗುತ್ತಿದ್ದರೆ. ಅಥವಾ ನೀಉ ಅಸಹಜ ರೀತಿಯಲ್ಲಿ ಬೆವರುತ್ತಿದ್ದರೆ ತಣ್ಣೀರು ಸ್ನಾನ ಮಾಡಬಹುದು

Comments are closed.