ಕರ್ನಾಟಕ

ಸುಗಂಧ ಪೂಸಿಕೊಂಡರೂ ಮೈ ದುರ್ಗಂಧ ಕಡಿಮೆಯಾಗದಿರಲು ಕಾರಣ ಹಾಗೂ ಇದರ ದುರ್ಗಂಧದ ವಿಧಗಳು

Pinterest LinkedIn Tumblr

ಮಂಗಳೂರು: ಒಂದು ವೇಳೆ ನಿಮ್ಮ ಶರೀರದಿಂದ ಬರುವಂತಹ ದುರ್ಗಂಧ ಯಾವುದೇ ಸುಗಂಧ ಪೂಸಿಕೊಂಡರೂ ಮೈದುರ್ಗಂಧವನ್ನು ಮರೆಮಾಚಲು ಸಾಧ್ಯವಾಗದಿದ್ದರೇ ಅಥವಾ ಜನರ ಮುಂದೆ ಮುಜುಗರ ತರುವಂತಿದ್ದರೆ ಇದಕ್ಕೆ ಪರಿಹಾರ ಕಂಡುಕೊಂಡಿದ್ದಿರಾ…..

ಹೌದು ಎಂಬ ಉತ್ತರ ನಿಮ್ಮದಾದರೆ ನಿಮ್ಮ ಶರೀರ ನಿಮಗೇನೂ ಹೇಳುತ್ತಿದೆ ಎಂದು ಅರ್ಥೈಸಿಕೊಳ್ಳಬೇಕು. ನಾವೆಲ್ಲರೂ ಬೆವರು ಹರಿಸುತ್ತೇವೆ. ಸಾಕಷ್ಟು ದುರ್ಗಂಧವೂ ಉಂಟಾಗುತ್ತದೆ. ಆದರೆ ಇದನ್ನು ನಿಯಂತ್ರಿಸಲು ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಸಾಕು.

ಆದರೆ ಸಾಕಷ್ಟು ಸ್ವಚ್ಛತೆಯ ವಿಧಾನಗಳಾದ ಸ್ನಾನ, ಸುಗಂಧ ಮೊದಲಾದ ಕೆಲವು ಕ್ರಮಗಳನ್ನು ಕೈಗೊಂಡರೂ ಮೈ ದುರ್ಗಂಧ ಕಡಿಮೆಯಾಗದೇ ಇದ್ದರೆ ತಕ್ಷಣ ಇದಕ್ಕೆ ಕಾರಣವನ್ನು ಕಂಡುಕೊಳ್ಳುವುದು ಉತ್ತಮ.

ದುರ್ಗಂಧದ ವಿಧಗಳು ಹಾಗೂ ಅದಕ್ಕೆ ಕಾರಣ :
1.ಒಂದು ವೇಳೆ ನಿಮ್ಮ ಶರೀರದಿಂದ ಮೀನಿನ ವಾಸನೆ ಬರುತ್ತಿದ್ದರೆ ಇದು ದೇಹದ ಜೀವ ರಾಸಾಯನಿಕ ಕ್ರಿಯೆ ಬಾಧೆಗೊಳಗಾಗಿರುವ trimethylaminuria ಎಂಬ ಕಾಯಿಲೆಯಿಂದ ಬಳಲುತ್ತಿರುವ ಸೂಚನೆಯಾಗಿರಬಹುದು. ಈ ಕಾಯಿಲೆ ಇದ್ದವರ ದೇಹದಲ್ಲಿ ಪೋಟೀನ್ ಗಳನ್ನು ಒಡೆಯಲು ಸಾಕಷ್ಟು ಶಕ್ತಿ ಇಲ್ಲದೇ ಇರುವ ಕಾರಣ ಇದು ಮೀನಿನ ವಾಸನೆ ಮೂಡಿಸುತ್ತದೆ.

2. ಒಂದು ವೇಳೆ ಮೈವಾಸನೆ ಮಲದ ವಾಸನೆಯನ್ನು ಹೋಲುತ್ತಿದ್ದರೆ ಇದು ನಿಮ್ಮ ದೇಹದ ಜೀರ್ಣಾಂಗಗಳಲ್ಲಿ ತೊಂದರೆ ಇರುವುದನ್ನು ಸೂಚಿಸುತ್ತದೆ. ಅಜೀರ್ಣ, ಮಲಬದ್ಧತೆ ಮೊದಲಾದವುಗಳ ಮೂಲಕ ಬೆವರಿನಲ್ಲಿಯೂ ಮಲದ ವಾಸನೆ ಸೂಸುತ್ತದೆ.

3.ಸಾಮಾನ್ಯವಾಗಿ ಬೆವರಿನ ವಾಸನೆ ಹೆಚ್ಚು ಘಾಟು ಹೊಂದಿರುವುದಿಲ್ಲ ಅತಿ ಹತ್ತಿರದಲ್ಲಿ ಮಾತ್ರ ಅನುಭವಕ್ಕೆ ಬರುತ್ತದೆ. ಒಂದು ವೇಳೆ ಇದು ಸ್ವಲ್ಪ ದೂರದವರೆಗೆ ಅನುಭವಕ್ಕೆ ಬಂದಿದ್ದು ತೀಕ್ಷ್ಣವಾಗಿದ್ದರೆ ಇದು hyperhidrosis ಎಂಬ ಸ್ಥಿತಿಯ ಸೂಚನೆಯಾಗಿರಬಹುದು. ಈ ಕಾಯಿಲೆ ಇರುವ ವ್ಯಕ್ತಿಗಳು ಅಗತ್ಯಕ್ಕೂ ಹೆಚ್ಚು ಬೆವರುತ್ತಾರೆ.

4.ಒಂದು ವೇಳೆ ಕಬ್ಬಿಣ ತುಕ್ಕು ಹಿಡಿದಿದ್ದರೆ ಬರುವಂತಹ ವಾಸನೆ ಬರುತ್ತಿದ್ದರೆ ಇದು ನಿಮ್ಮ ಯಕೃತ್ನಲ್ಲಿ (ಲಿವರ್) ತೊಂದರೆ ಇರುವುದನ್ನು ಸೂಚಿಸುತ್ತದೆ. ಅಲ್ಲದೇ ಕೆಲವು ಜೀವರಾಸಾಯನಿಕ ಕ್ರಿಯೆಯಲ್ಲಿ ಇರುವ ತೊಂದರೆಗಳು ಮತ್ತು ಜೀರ್ಣಾಂಗಗಳಲ್ಲಿ ತೊಂದರೆ ಇರುವುದನ್ನೂ ಸೂಚಿಸುತ್ತದೆ.

ಮಹಿಳೆಯರು ಒಂದು ವೇಳೆ ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡಿದ ಬಳಿಕವೂ ಬೆವರಿನ ವಾಸನೆ ಸೂಸುತ್ತಿದ್ದರೆ ಇದು ಗರ್ಭಿಣಿಯಾಗಿರುವ ಅಥವಾ ರಜೋನಿವೃತ್ತಿ ಕಾಲ ನಿಕಟವಾಗಿರುವ ಸಮಯವನ್ನು ಸೂಚಿಸುತ್ತದೆ.

ಒಂದು ವೇಳೆ ಜೀವಮಾನವಿಡೀ ನಿಮ್ಮ ಬೆವರು ಘಾಟಿನಿಂದ ಕೂಡಿದ್ದು ಈಗ ಈ ಘಾಟು ಕಡಿಮೆಯಾಗಿದ್ದರೆ ಇದು ವೃದ್ದಾಪ್ಯ ಹತ್ತಿರಾಗುತ್ತಿರುವ ಸೂಚನೆಯನ್ನು ಸೂಚಿಸುತ್ತದೆ. ಏಕೆಂದರೆ ವೃದ್ದಾಪ್ಯ ಆವರಿಸುತ್ತಿದ್ದಂತೆಯೇ ಬೆವರಿನ ಗ್ರಂಥಿಗಳೂ ನಿಧಾನವಾಗಿ ಕ್ಷಮತೆ ಕಳೆದುಕೊಳ್ಳುತ್ತವೆ.

ಒಂದು ವೇಳೆ ನಿಮ್ಮ ಬೆವರಿನ ವಾಸನೆ ಮದ್ಯದ ವಾಸನೆಯನ್ನು ಹೋಲುತ್ತಿದ್ದರೆ ಇದು ನೀವು ಮದ್ಯಕ್ಕೆ ವ್ಯಸನಿಯಾಗಿರುವ ಸೂಚನೆಯನ್ನು ನೀಡುತ್ತದೆ.

Comments are closed.