ಕರ್ನಾಟಕ

ಮೊಳಕೆಬಂದ ಕಾಳು ತಿಂದರೆ ನಮಗೆ ಲಾಭ ಇದೆ ಆದರೆ ಮೊಳಕೆಬಂದ ಬೆಳ್ಳುಳ್ಳಿ ತಿಂದರೆ ಏನು ಲಾಭ..? ತಿಳಿಯಬೇಕೆ..ಮುಂದೆ ಓದಿ..

Pinterest LinkedIn Tumblr

ಮಂಗಳೂರು: ಮನೆಯಲ್ಲಿ ಉಳಿದಂತಹ ಬೆಳ್ಳುಳ್ಳಿ ಎಳೆಗಳು ಮೊಳಕೆ ಬಂದಿದೆಯಾ…? ಕೆಲಸಕ್ಕೆ ಬಾರದವು ಎಂದು ಬಿಸಾಡುತ್ತಿದ್ದೀರಾ…? ಹಾಗಾದರೆ ಸ್ವಲ್ಪ ನಿಲ್ಲಿ…..! ಏಕೆಂದರೆ ಬೆಳ್ಳುಳ್ಳಿಗಿಂತ ಮೊಳಕೆ ಬಂದಿರುವ ಬೆಳ್ಳುಳ್ಳಿ ಎಳೆಯಲ್ಲಿಯೇ ಅಧಿಕ ಪೋಷಕಾಂಶಗಳಿರುತ್ತವೆಯಂತೆ…! ಕೆಲವರು ವಿಜ್ಞಾನಿಗಳು ಮಾಡಿದ ಪರಿಶೋಧನೆಯಲ್ಲಿ ತಿಳಿದುಬಂದಿದೆ.

ಇಷ್ಟಕ್ಕೂ ಮೊಳಕೆ ಬಂದಿರುವ ಬೆಳ್ಳುಳ್ಳಿ ಎಳೆಯಲ್ಲಿ ಎಂತಹ ಲಾಭಗಳು ಪಡೆಯಬಹುದು ಗೊತ್ತಾ….? ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

1.ಮೊಳಕೆ ಬಂದಿರುವ ಬೆಳ್ಳುಳ್ಳಿಎಳೆಗಳಲ್ಲಿ ಸಾಧಾರಣಕ್ಕಿಂತ ಒಂದು ಸ್ವಲ್ಪ ಅಧಿಕವಾದ ಯಾಂಟಿ ಯಾಕ್ಸಿಡೆಂಟ್’ಗಳು ಇರುತ್ತವೆ. ಮೊಳಕೆ ಬಂದಿರುವುಗಳಲ್ಲಿ ಮೆಟಾಬೊಲೆಟ್ಸ್ ಎಂಬುವವು ಹೆಚ್ಚಾಗಿರುತ್ತವೆಯಂತೆ. ಇವು ಮೊಳಕೆಗಳು ಸಸಿಗಳಾಗಿ ಬದಲಾಗುವುದಕ್ಕೆ ತುಂಬಾ ಉಪಯೋಗವಾಗುತ್ತವೆಯಂತೆ. ಆ ರೀತಿಯಾಗಿ ಅವುಗಳಿಗೆ ಹರಡುವ ರೋಗಳಿಂದ ಸಸಿಗಳನ್ನು ರಕ್ಷಿಸುತ್ತವೆಯಂತೆ. ಅಂತಹ ಆ ಮೆಟಾಬೊಲೆಟ್ಸ್ ಇರುವ ಮೊಳಕೆ ಬಂದಿರುವ ಬೆಳ್ಳುಳ್ಳಿ ಎಳೆಗಳನ್ನು ತಿಂದರೆ ನಮಗೂ ಸಹ ಅಂತಹ ಲಾಭಗಳೇ ಬರುತ್ತವೆ. ಪ್ರಮುಖವಾಗಿ ಕಾಯಿಲೆಗಳು, ಇನ್ಫೆಕ್ಷನ್ ಗಳು ವಾಸಿಯಾಗುತ್ತವೆ.

2.ಮೊಳಕೆ ಬಂದಿರುವ ಬೆಳ್ಳುಳ್ಳಿಎಳೆಗಳನ್ನು ತಿಂದರೆ ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಬ್ಬು ಕರಗುತ್ತದೆ. ಕೆಟ್ಟ ಕೊಲೆಸ್ಟ್ರ‍ಾಲ್ ಹೋಗಿ ಒಳ್ಳೆಯ ಕೊಲೆಸ್ಟ್ರ‍ಾಲ್ ವೃದ್ದಿಯಾಗುತ್ತದೆ. ರಕ್ತದ ಸರಬರಾಜು ಉತ್ತಮವಾಗಿ ಹೃದಯ ರೋಗಗಳು ಬರುವುದಿಲ್ಲ.

3. ಮೊಳಕೆ ಬಂದಿರುವ ಬೆಳ್ಳುಳ್ಳಿ ಎಳೆಗಳಲ್ಲಿ ಯಾಂಟಿ ಯಾಕ್ಸಿಡೆಂಟ್’ಗಳು ಸಮೃದ್ದಿಯಾಗಿ ಇರುತ್ತವೆ ಎಂದು ಹೇಳಿದ್ದೇವೆ ಅಲ್ವಾ… ಹೌದು ಆದರೆ ಅವು ರೋಗ ನಿರೋದಕ ಶಕ್ತಿಯನ್ನು ಸಹ ಹೆಚ್ಚಿಸುತ್ತವೆ. ಕ್ಯಾನ್ಸರ್ ಬರದ ಹಾಗೆ ನೋಡಿಕೊಳ್ಳುವುದಲ್ಲದೆ, ಕ್ಯಾನ್ಸರ್ ಕಣಗಳನ್ನು ವೃದ್ದಿಯಾಗಲು ಬಿಡುವುದಿಲ್ಲ.

4. ಯಾಂಟಿ ಯಾಕ್ಸಿಡೆಂಟ್’ಗಳು ಹೆತೇಚ್ಚವಾಗಿ ಇದ್ದ ಕಾರಣ , ವಯಸ್ಸು ಹೆಚ್ಚಾದ್ದರಿಂದ ಸುಕ್ಕುಬರುವುದು ಹೋಗುತ್ತವೆ . ಇದರಿಂದ ಚರ್ಮ ಯೌವ್ವನವಾಗಿ, ಕಾಂತಿಯುತವಾಗಿ ಬದಲಾಗುತ್ತದೆ.

5. .ಮೊಳಕೆ ಬಂದಿರುವ ಬೆಳ್ಳುಳ್ಳಿ ಎಳೆಗಳನ್ನು ತಿನ್ನುತ್ತಿದ್ದರೆ, ಜ್ಞಾಪಕ ಶಕ್ತಿ ಬೆಳೆಯುತ್ತದೆ. ಚಿಕ್ಕಮಕ್ಕಳಿಗೆ ತಿನ್ನಿಸಿದರೆ ಅವರ ಮೆದುಳು ವಿಸ್ತಾರವಾಗಿ ಬುದ್ದಿ ಬೆಳವಣಿಗೆ ಯಾಗುತ್ತದೆ. ನಾಡಿಗಳೆಲ್ಲವೂ ಉತ್ತೇಜನ ಗೊಳ್ಳುತ್ತವೆ.

ಆದರೆ ಮೊಳಕೆ ಬಂದಿರುವ ಬೆಳ್ಳುಳ್ಳಿಎಳೆಗಳನ್ನು ಹೇಗೆ ತಯಾರಿಸುವುದು ಅಂಥ ತಿಳಿಯಬೇಕಾ…

ಒಂದು ಚಿಕ್ಕ ಬಟ್ಟಲು ಅಥವಾ ಗ್ಲಾಸ್ ನಲ್ಲಿ ಅದರ ತುಂಬಾ ಶುದ್ದವಾದ ನೀರನ್ನು ತುಂಬಿಸಬೇಕು. ಈಗ ಒಂದು ಬೆಳ್ಳುಳ್ಳಿ ಎಳೆಯನ್ನು ಅಥವಾ ಒಂದು ಬೆಳ್ಳುಳ್ಳಿ ಫೂರ್ತಿಯಾಗಿ ತೆಗೆದುಕೊಂಡು ಅದಕ್ಕೆ ಚಿತ್ರದಲ್ಲಿ ತೋರಿಸಿದಂತೆ ಮೂರು ಕಡೆ ಟೂತ್ ಪಿಕ್ ಗಳನ್ನು ಚುಚ್ಚಬೇಕು. ಅನಂತರ ಆ ಟೂತ್ ಪಿಕ್ ಗಳ ಸಹಾಯ ದಿಂದ ಅದನ್ನು ಮೇಲ್ಬಾಗದಲ್ಲಿ ಇರಿಸಬೇಕು. ಆದರೆ ಬೆಳ್ಳುಳ್ಳಿ ಕೆಳಗಿನ ಭಾಗದಲ್ಲಿರುವ ಬೇರುಗಳ ವರೆಗೆ ಮಾತ್ರ ನೀರಿನಲ್ಲಿ ಮುಳುಗುವಂತೆ ಬೆಳ್ಳುಳ್ಳಿ ಯನ್ನು ಇರಿಸಬೇಕು. ಹೀಗೆ ಐದು ದಿನಗಳಿದ್ದರೆ ಬೆಳ್ಳುಳ್ಳಿ ಮೊಳೆಯುತ್ತದೆ. ಆದರೆ ಬೆಳ್ಳುಳ್ಳಿಯನ್ನು ಇರಿಸಿದ ಬಟ್ಟಲನ್ನು ಕಿಟಕಿ ಅಂತಹ ಪ್ರದೇಶದಲ್ಲಿ, ಸೂರ್ಯ ರಶ್ಮಿ ತಗಲುವ ಹಾಗೆ ಇರಿಸಬೇಕು. ಇದರಿಂದ ಮೊಳಕೆಗಳು ಚೆನ್ನಾಗಿ ಬರುತ್ತವೆ.

Comments are closed.