ಕರಾವಳಿ

ದೇವಾಡಿಗ ಕ್ರೀಡಾಕೂಟ 2016 -17

Pinterest LinkedIn Tumblr

ಮಂಗಳೂರು,ಜನವರಿ. 9 : ನಗರದ ಮಣ್ಣಗುಡ್ಡ, ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗ ಸಂಘ (ರಿ) ಮತ್ತು ಮಹಿಳಾ ಸಂಘಟನೆ ಹಾಗೂ ಯುವಜನ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ದೇವಾಡಿಗ ಕ್ರೀಡಾಕೂಟ 2016 – 17 ಬಾನುವಾರ ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು.

ಅದಾನಿ ಗ್ರೂಪ್, ಯುಪಿಸಿಎಲ್ ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಅಳ್ವ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

 

ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್, ನ್ಯೂರೋ ಸರ್ಜನ್ ಡಾ.ಕೆ.ವಿ ದೇವಾಡಿಗ, ದುಬೈಯ ಖ್ಯಾತ ಉದ್ಯಮಿ ಆಕ್ಮೆ ಸಂಸ್ಥೆಯ ಮಾಲ್ಹಕ ಹರೀಶ್ ಶೇರಿಗಾರ್, ವಿಜಯಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಯು.ಕುಮಾರ್ ನಾಥ್, ಯೂತ್ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಮಿಥುನ್ ರೈ, ಉದಯವಾಣಿ ಪತ್ರಿಕೆಯ ಸಹ ಉಪಾಧ್ಯಕ್ಷ ಕೆ.ಆನಂದ್, ಉದ್ಯಮಿ ಶ್ರೀನಿವಾಸ್ ಸೇರಿಗಾರ್, ಬ್ಯಾಂಕ್ ಅಧಿಕಾರಿಗಳಾದ ಶ್ರೀಮತಿ ಅನುಪಮ ಶಶಿಧರ್ ಮೊಯ್ಲಿ, ಶ್ರೀಮತಿ ನೇಹಾ ನಿತ್ಯಾನಂದ ಮೊದಲಾದವರು ಅಥಿತಿಗಳಾಗಿದ್ದರು.

ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷರಾದ ಡಾ. ದೇವರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

 

ಸಂಘದ ಕೋಶಾಧಿಕಾರಿ ಶ್ರೀಮತಿ ಗೀತಾ.ವಿ.ಕಲ್ಯಾಣ್‌ಪುರ್, ಜೊತೆ ಕಾರ್ಯದರ್ಶಿಗಳಾದ ಶಿವಾನಂದ ಮೊಯ್ಲಿ, ಸದಾಶಿವ ಎಂ.ಮೊಯ್ಲಿ, ಸಂಘಟನಾ ಕಾರ್ಯದರ್ಶಿಗಳಾದ ಭಾಸ್ಕರ್ ಇಡ್ಯಾ, ನಾಗೇಶ್ ದೇವಾಡಿಗ, ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಮಮತ ಪದ್ಮನಾಭ ದೇವಾಡಿಗ, ಯುವ ಸಂಘಟನೆಯ ಅಧ್ಯಕ್ಷ ಉದಯ ಕುಮಾರ್ ಕಣ್ವತೀರ್ಥ, ಪಧಾಧಿಕಾರಿಗಳಾದ ಕರುಣಾಕರ್ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಭಶ್ಚಂದ್ರ ಕಣ್ವತೀರ್ಥ ಅತಿಥಿಗಳನ್ನು ಸ್ವಾಗತಿಸಿದರು.ಶ್ರೀನಿವಾಸ್‌ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ :ಸಂಜೆ ದೇವಾಡಿಗ ಕ್ರೀಡಾಕೂಟದ ಸಮಾರೋಪ ನಡೆಯಿತು.

22ರಂದು ಕ್ರಿಕೆಟ್ ಪಂದ್ಯಾಟ :ಜನವರಿ 22ರಂದು ನಗರದ ಕೆ.ಪಿ.ಟಿ ಮೈದಾನದಲ್ಲಿ ದೇವಾಡಿಗ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.

Comments are closed.