ಮುಂಬೈ

ಖ್ಯಾತ ಸಮಾಜ ಸೇವಕ ಆರ್. ಕೆ. ಸುವರ್ಣ ನಿಧನ

Pinterest LinkedIn Tumblr

ಮುಂಬಯಿ : ತೀಯಾ ಸಮುದಾಯದ ಗುರಿಕಾರರೆಂದೇ ಮುಂಬಯಿ ಮಹಾನಗರದಲ್ಲಿ ಪ್ರಸಿದ್ದರಾಗಿರುವ ಖ್ಯಾತ ಸಮಾಜ ಸೇವಕ ರಾಮಚಂದ್ರ ಕೆ. ಸುವರ್ಣ (ತನಿಯಪ್ಪಣ್ಣ) (89) ಅವರು ಜ. 8 ರಂದು ರಾತ್ರಿ ಮೀರಾರೋಡ್ ನ ತನ್ನ ಪುತ್ರನ ಮನೆಯಲ್ಲಿ ನಿಧನ ಹೊಂದಿದರು.

ತೀಯಾ ಸಮಾಜ ಮುಂಬಯಿ ಯ ಕಾರ್ಯಕಾರಿ ಸಮಿತಿಯಲ್ಲಿ ಕೆಲವು ವರ್ಷಗಳ ಕಾಲ ಕ್ರೀಯಾ ಶೀಲರಾಗಿದ್ದ ಸುವರ್ಣರು ತೀಯಾ ಸಮುದಾಯದ ಸಂಸ್ಕೃತಿಯನ್ನು ಮಹಾನಗರದಲ್ಲಿ ಉಳಿಸಿ ಬೆಳೆಸುವಲ್ಲಿ ವಿವಿಧ ರೀತಿಯಲ್ಲಿ ನಾಲ್ಕು ದಶಕಕ್ಕೂ ಮಿಕ್ಕಿ ನಿಸ್ವಾರ್ಥವಾಗಿ ಸಮಾಜಬಾಂಧವರ ಸೇವೆಗೈದಿರುವರು.

ನಾಲ್ವರು ಹೆಣ್ಣು ಮಕ್ಕಳು, ಒರ್ವ ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ ಇವರ ನಿಧನಕ್ಕೆ ತೀಯಾ ಸಮುದಾಯದ ವಿವಿಧ ಸಂಘಟನೆಗಳು ಸಂತಾಪ ಸೂಚಿಸಿದೆ.

ತೀಯಾ ಸಮಾಜದ ಗಣ್ಯರಾದ ರೋಹಿದಾಸ ಬಂಗೇರ, ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಸಸಿಹಿತ್ತ್ಲು ಶ್ರೀ ಭಗವತೀ ತೀಯಾ ಸಂಘದ ಅಧ್ಯಕ್ಷ ಚಂದ್ರಹಾಸ ಪಾಲನ್, ತೀಯಾ ವೆಲ್ಫೇರ್ ಅಸೋಶಿಯೇಶನಿನ ಅಧ್ಯಕ್ಷ ಗೋವಿಂದ ಮಂಜೇಶ್ವರ್, ಕನಿಲ ಶ್ರೀ ಭಗವತೀ ಕ್ಷೇತ್ರ ಮುಂಬಯಿ ಸಮಿತಿಯ ಅಧ್ಯಕ್ಷ ರವಿ ಎಸ್. ಮಂಜೇಶ್ವರ್ ಹಾಗೂ ಇತರ ಗಣ್ಯರು ಸಂತಾಪ ಸೂಚಿಸುತ್ತಾ ಇವರ ಅಗಲಿಕೆಯಿಂದ ತೀಯಾ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.

Comments are closed.