ಕರ್ನಾಟಕ

ವೈದ್ಯರು ಇಂಜೆಕ್ಷನ್ ಚುಚ್ಚುವ ಮೊದಲು ಸ್ವಲ್ಪ ಮದ್ದನ್ನು ಹೊರ ಚೆಲ್ಲುತ್ತಾರೆ ಯಾಕೆ..?

Pinterest LinkedIn Tumblr

ಮಂಗಳೂರು: ನೀವು ಎಂದಾದರೂ ಆಸ್ಪತ್ರೆಯಲ್ಲಿ ಇಂಜೆಕ್ಷನ್‌ ಮಾಡಿಸಿಕೊಂಡಿದ್ದೀರಾ..? ಇಂದಿನ ದಿನಗಳಲ್ಲಿ ಆಸ್ಪತ್ರೆಯ ಮೆಟ್ಟಿಲು ಹತ್ತದವರು ಬಹುಶಃ ಯಾರೂ ಇಲ್ಲ. ಹಾಗೆಯೇ ಇಂಜೆಕ್ಷನ್ ಮಾಡಿಕೊಳ್ಳದವರು ಯಾರೂ ಇಲ್ಲ. ಆದರೆ ಇಂಜೆಕ್ಷನ್ ಮಾಡುವ ಸಮಯದಲ್ಲಿ ಒಂದು ವಿಷಯವನ್ನು ನೀವು ಗಮನಿಸಿದ್ದೀರಾ..? ಅದೇನೆಂದರೆ, ನರ್ಸ್ ಇಲ್ಲವೇ ಡಾಕ್ಟರ್ ಮೆಡಿಸಿನ್‌ ಅನ್ನು ಸಿರಂಜಿನಲ್ಲಿ ಪೂರ್ತಿ ಎಳೆದ ಮೇಲೆ ಅದರಿಂದ ಮೊದಲು ಸ್ವಲ್ಪ ಮೆಡಿಸಿನ್ ಹೊರಗೆ ಬಿಟ್ಟಮೇಲೆಯೇ ಇಂಜೆಕ್ಷನ್ ಮಾಡುತ್ತಾರೆ ಅಲ್ವಾ, ಅವರು ಹಾಗೆ ಮಾಡುವುದನ್ನು ನೀವು ಎಂದಾದರೂ ನೋಡಿದ್ದಿರಾ…? ನೋಡಿಯೇ ಇರುತ್ತೀರ ಆದರೆ, ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲ. ಹಾಗಾದರೆ ಅವರು ಯಾಕೆ ಹಾಗೆ ಮಾಡುತ್ತಾರೆ ಎಂಬುದನ್ನು ಈಗ ತಿಳಿದುಕೊಳ್ಳೋಣ…

ಮೆಡಿಸಿನ್ ಸಿರಂಜಿನೊಳಗೆ ಎಳೆಯುವಾಗ ಮೆಡಿಸಿನ್ ಜೊತೆಗೆ ಅಲ್ಪ ಪ್ರಮಾಣದಲ್ಲಿ ಗಾಳಿ ಸಿರಂಜ್’ನೊಳಗೆ ಹೋಗುತ್ತದೆ. ಸಣ್ಣ ಸಣ್ಣ ಏರ್ ಬಬುಲ್ಸ್ ರೂಪದಲ್ಲಿ ರೋಗಿಯ ರಕ್ತದಲ್ಲಿ ಹೋಗುತ್ತದೆ. ಇದರಿಂದ ಮೆಡಿಸಿನ್ ಎಲ್ಲಾ ಒಂದೇ ಡೋಸ್ ಆಗಿ ರೋಗಿಗೆ ದೊರೆಯುವುದಿಲ್ಲ. ಇದರಿಂದ ರೋಗಿ ಅನಾರೋಗ್ಯ ಅಷ್ಟು ಬೇಗ ವಾಸಿಯಾಗುವುದಿಲ್ಲ. ಇದರ ಜೊತೆಗೆ ರೋಗಿಯ ರಕ್ತದಲ್ಲಿ ಸೇರಿದ ಗಾಳಿಯ ಗುಳ್ಳೆಗಳು ಶರೀರದ ಎಲ್ಲಕ್ಕೂ ರಕ್ತದ ಮೂಲಕ ಸೇರಿಕೊಳ್ಳುತ್ತವೆ. ಇದರಿಂದ ಆಗುವ ಪರಿಣಾಮವನ್ನು ” ಏರ್ ಎಂಬಾಲಿಸಮ್(Air Embolism)” ಎನ್ನುವರು. ಇದರಿಂದ ನಮ್ಮ ಶರೀರದಲ್ಲಿ ತೀವ್ರವಾದ ಅರೋಗ್ಯ ಸಮಸ್ಯೆಗಳು ಬರುತ್ತವೆ.

ಏರ್ ಎಂಬಾಲಿಸಮ್ ನಿಂದ ಉಸಿರಾಟ ಕಷ್ಟವಾಗುತ್ತದೆ. ಒಮ್ಮೊಮ್ಮೆ ಉಸಿರಾಟ ಕ್ರಿಯೆಯ ಅವಯವಗಳು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತವೆ. ಎದೆನೋವು ಕಾಣಿಸಿಕೊಳ್ಳುತ್ತದೆ. ಹೃದಯದ ಕಾರ್ಯಕ್ಕೆ ತೊಂದರೆಯಾಗುತ್ತದೆ. ಸ್ನಾಯು ಮತ್ತು ಕೀಲು ನೋವುಗಳು ಬರುತ್ತವೆ.

ಏಕಾಗ್ರತೆ ಕಳೆದುಕೊಳ್ಳುವುದು, ಮೂರ್ಛೆ, ಆತುರ, ಚಿಂತೆ ಮುಂತಾದ ಮಾನಸಿಕ ಕಾಯಿಲೆಗಳ ಜೊತೆಗೆ ಲೋಬಿಪಿ, ಚರ್ಮ ನೀಲಿ ಬಣ್ಣಕ್ಕೆ ತಿರುಗುವುದು ಇತ್ಯಾದಿ ಸಮಸ್ಯೆಗಳು ಬರುತ್ತವೆ. ಕೆಲವು ಸಲ ಪ್ರಾಣಕ್ಕೆ ಆಪತ್ತು ಬರಬಹುದು. ಹಾಗಾಗಿ ವೈದ್ಯರು ಸಿರೆಂಜ್’ನಲ್ಲಿನ ಮೆಡಿಸಿನ್ ಅನ್ನು ಮೊದಲು ಸ್ವಲ್ಪ ಹೊರಗೆ ಬಿಟ್ಟು ಇಂಜೆಕ್ಷನ್ ಮಾಡುತ್ತಾರೆ.

ಕೃಪೆ: Ap 2tg

Comments are closed.