ಕರ್ನಾಟಕ

ನದಿ, ಕೆರೆ, ಕಲ್ಯಾಣಿಗಳಲ್ಲಿ ನಾಣ್ಯಗಳನ್ನು ಎಸೆಯುವುದರ ಬಗೆಗಿನ ಮಹತ್ವ ಗೊತ್ತೇ…?

Pinterest LinkedIn Tumblr

ಮಂಗಳೂರು: ಪುರಾತನ ಕಾಲದಿಂದಲೂ ನಮ್ಮ ಪೂರ್ವಿಕರು ಆಚರಿಸುತ್ತಿರುವ ಅನೇಕ ಆಚಾರಗಳು, ಸಂಪ್ರದಾಯಗಳು ಇವೆ. ಅವುಗಳಲ್ಲಿ ಒಂದಾದ ನದಿ, ಕೆರೆ, ಕಲ್ಯಾಣಿಗಳಲ್ಲಿ ನಾಣ್ಯಗಳನ್ನು ಎಸೆಯುವುದು. ಹಣೆಯ ಮೇಲೆ ನಾಣ್ಯವನ್ನು ಇಟ್ಟುಕೊಂಡು ಇಷ್ಟ ದೈವವನ್ನು ಸ್ಮರಿಸಿಕೊಂಡು ನಂತರ ಆ ನಾಣ್ಯವನ್ನು ನದಿ ಅಥವಾ ಕೆರೆಗಳೊಳಗೆ ಹಾಕಿದರೆ, ಆಗ ಬಯಸಿದ್ದೆಲ್ಲಾ ಈಡೇರುತ್ತದೆ ಹಾಗೂ ಅದೃಷ್ಟ ನಮ್ಮದಾಗುತ್ತದೆ ಎಂಬುದು ಜನರ ನಂಬಿಕೆ. ಇದನ್ನು ಇಂದಿಗೂ ಆಚರಿಸುತ್ತಿರುವವರನ್ನು ನೀವು ನೋಡಿರಬಹುದು.

ಆದರೆ ನಿಜವಾಗಿಯೂ ಹಾಗೆ ನಾಣ್ಯಗಳನ್ನು ನದಿಯೊಳಗೆ ಎಸೆಯುವುದು ಸಾಂಪ್ರದಾಯ ಮಾತ್ರವಲ್ಲದೆ, ಸೈನ್ಸ್ ಗೆ ಸಂಬಂಧಿಸಿದ ಅನೇಕ ವಿಷಯಗಳು ಅಡಗಿವೆ.ಅವುಗಳೆಂದರೆ ತಾಮ್ರ ಎಂಬುದು ನಮ್ಮ ಶರೀರಕ್ಕೆ ಬಹಳ ಅವಶ್ಯಕವಾದ ಒಂದು ಪ್ರಮುಖ ಪೋಷಕ ಪದಾರ್ಥ. ಇದರಿಂದ ಶರೀರದ ಚಯಾಪಚಯ ಪ್ರಕ್ರಿಯೆಯು ಸಕ್ರಮವಾಗಿ ನಡೆಯುತ್ತದೆ. ಶರೀರಕ್ಕೆ ಬಲವನ್ನು ನೀಡುತ್ತದೆ. ಎಷ್ಟೋ ಜೀವಕ್ರಿಯೆಗಳು ಸರಿಯಾಗಿ ನಡೆಯುತ್ತವೆ. ಅದರಿಂದ ಆರೋಗ್ಯವು ಚೆನ್ನಾಗಿರುತ್ತದೆ.

ಆದರೆ ಇಂದು ನಾವು ಬಳಸುತ್ತಿರುವ ಸ್ಟೀಲ್ ಕಾಯಿನ್ಸ್ ಗಳು. ಆದರೆ ಆಗ ಕೇವಲ ತಾಮ್ರದ ನಾಣ್ಯಗಳು ಮಾತ್ರ ಹೆಚ್ಚಾಗಿ ಚಲಾವಣೆಯಲ್ಲಿದ್ದವು. ಇದರ ಜೊತೆಗೆ ನಮಗಿರುವ ಹಾಗೆ ಅಂದು ವಾಟರ್ ಫಿಲ್ಟರ್’ಗಳು ಇರಲಿಲ್ಲ. ಹಿಂದಿನ ಕಾಲದ ಜನರು ನೀರನ್ನು ಹೆಚ್ಚಾಗಿ ನದಿಗಳು, ಕೆರೆ, ಕಲ್ಯಾಣಿಗಳಿಂದ ತಂದು ಕುಡಿಯುತ್ತಿದ್ದರು. ಆದರೆ ಅವು ಕುಡಿಯಲು ಯೋಗ್ಯವಾಗಿಲ್ಲದ ಕಾರಣ, ಅದರಲ್ಲಿ ತಾಮ್ರದ ನಾಣ್ಯಗಳನ್ನು ಎಸೆಯುತ್ತಿದ್ದರು. ಹೀಗೆ ಮಾಡುತ್ತಿರುವುದರಿಂದ ಆ ನಾಣ್ಯಗಳಿಂದ ನೀರು ಶುದ್ದಿ ಆಗುತ್ತಿತ್ತು. ಒಳಗಿರುವ ಕಲ್ಮಶಗಳೆಲ್ಲವು ಶುದ್ದವಾಗಿ, ಶುದ್ದನೀರು ಮೇಲೆ ಬರುತ್ತಿತ್ತು.

ಆ ನೀರಿನಲ್ಲಿ ನಮ್ಮ ಶರೀರಕ್ಕೆ ಅನುಕೂಲವಾಗುವಂತಹ ತಾಮ್ರದ ಲೋಹದ ಅಣುಗಳು ಸೇರಿಕೊಂಡಿರುತ್ತಿತ್ತು. ಅವು ನಮ್ಮ ಶರೀರಕ್ಕೆ ಎಷ್ಟೊ ಅವಶ್ಯಕವಾಗಿರುತ್ತಿತ್ತು. ಆದ್ದರಿಂದ ನಾಣ್ಯಗಳನ್ನು ನದಿಗಳಿಗೆ, ಕೆರೆಗಳಿಗೆ ಎಸೆಯುತ್ತಿದ್ದರು. ಇದರಿಂದ ಮೇಲೆ ಹೇಳಿದಂತೆ 2 ವಿಧದ ಲಾಭಗಳು ನಮಗೆ ಲಭ್ಯವಾಗುತ್ತದೆ.

ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ತಾಮ್ರದ ಪಾತ್ರೆಗಳಲ್ಲಿ ರಾತ್ರಿ ಪೂರ್ತಿ ನೀರನ್ನು ಸಂಗ್ರಹಿಸಿ ಬೆಳಿಗ್ಗೆ ಎದ್ದ ತಕ್ಷಣ ಕುಡಿಯುತ್ತಿದ್ದರು. ಇದರಿಂದ ಅವರ ಅರೋಗ್ಯ ಚೆನ್ನಾಗಿರುತ್ತದೆಂದು ಅವರು ನಂಬಿದ್ದರು. ಅದೇ ನಂಬಿಕೆಯಿಂದಲೆ ಕೆರೆಗಳಲ್ಲಿ, ನದಿಗಳಲ್ಲಿ ತಾಮ್ರದ ನಾಣ್ಯಗಳನ್ನು ಹಾಕುವುದಕ್ಕೆ ಆರಂಭಿಸಿದರು. ಆ ನಾಣ್ಯಗಳನ್ನು ಎಸೆಯುವುದರ ಹಿಂದೆ ರಹಸ್ಯ ಇದು. ಆದರೆ ನಾವು ಬಳಸುವ ವಾಟರ್ ಫಿಲ್ಟರ್’ಗಳಲ್ಲಿ ತಾಮ್ರದಂತಹ ಲೋಹದ ಗುಣಗಳು ಇವೆಯೋ, ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ಈ ರೀತಿಯಾಗಿ ಪ್ರತಿದಿನ ಹಾಗೆ ತಾಮ್ರದ ಪಾತ್ರೆಯಲ್ಲಿರಿಸಿದ ನೀರು ಎಂದಿಗೂ ಕೆಡುವುದಿಲ್ಲವಂತೆ, ಎಂದಿಗೂ ಹಾಗೆ ಶುದ್ದವಾಗಿಯೇ ಇರುತ್ತವೆ ಹಾಗೂ ಅರೋಗ್ಯದ ದೃಷ್ಟಿಯಿಂದಲ್ಲೂ ಒಳ್ಳೆಯದು ಎಂದು ಹೇಳುತ್ತಾರೆ. ಈಗಲಾದರೂ ತಿಳಿತಾ….

Comments are closed.