ಕರ್ನಾಟಕ

ಕಿವಿಯ ಗುಗ್ಗೆ ತೆಗೆಯಲು ಬಡ್ಸ್ ಹಾಕಿದರೆ ಕಿವುಡರಾಗುವ ಸಾಧ್ಯತೆ ಹೆಚ್ಚು, ನಿಮಗಿದು ಗೊತ್ತೆ..?

Pinterest LinkedIn Tumblr

ear_wax_removal

ಮಂಗಳೂರು: ಮಾರುಕಟ್ಟೆಯಲ್ಲಿ ಇಯರ್ ಬಡ್ಸ್ ಅಂತ ಸಿಗುತ್ತೆ ತುದಿಗೆ ಹತ್ತಿ ಸುತ್ತಿರೋ ಪ್ಲಾಸ್ಟಿಕ್ ಕಡ್ಡಿ ಅಷ್ಟೇ ಅದು ಅದನ್ನ ಬಳಸಿ ಕಿವಿ ಗುಗ್ಗೆ ತೆಕ್ಕೊಳೋದು ಒಂಥರಾ ಸ್ಟೈಲ್ ಅನ್ನೋಹಾಗೆ ನಮ್ಮಲ್ಲಿ ಅನಿಸಿಕೆ ಮೂಡಿ ಬಿಟ್ಟಿದೆ ಅದ್ರೆ ಅದು ಅಂಥ ಒಳ್ಳೆದಲ್ಲ.

ಕಿವಿ ಒಳಗೆ ಹಾಕಿದಂಗೇ ಆ ಬಡ್ಸ್ ಇಂದ ಗುಗ್ಗೆ ಇನ್ನಷ್ಠು ಒಳಕ್ಕೆ ಹೋಗುತ್ತೆ. ಜೋತೆಗೆ ಅದರಿಂದ ಕಿವಿ ಒಳಗೆ ಗಾಯ ಆಗೋ ಸಾಧತ್ಯೆ ಕೂಡ ಇರುತ್ತೆ. ಹೀಗೆ ಬಡ್ಸ್ ಹಾಕ್ಕೋಂಡು ಕಿವಿ ಕಿವುಡಾಗಿರೋರು ಕೂಡ ಇದ್ದಾರೆ.

ear_wax_removal2

ಆರ್ಶ್ಚಯ ಎನೂಂದ್ರೆ ಕಿವಿಯಲ್ಲಿ ಗುಗ್ಗೆ ಇರೋದು ನಮ್ಮ ಒಳ್ಳೆದಕ್ಕೇನೆ :
1. ಗುಗ್ಗೆ ಕಿವಿಯೋಳಗೆ ಹುಳ ಹುಪ್ಪಟ್ಟೆ ಹೋಗದೇ ಇರುವಂತೆ ಅದು ತಡೆಯುತ್ತೆ
2. ಕಿವಿಯೊಳಗೆ ಮರಳು ಗಿರಳು ಹೋದರೆ ತೊಂದರೆ ಆಗಲ್ಲ
3. ಕಿವಿಗೆ ಫಂಗಲ್ ಇನ್ಫೆಕ್ಷನ್ ಆಗಲ್ಲ
4. ಕಿವಿಯೊಳಗೆ ಒದ್ದೆ ಒದ್ದೆ ಯಾಗಿರುತ್ತದೆ .ಒಣಗಿ ಕಿವಿಗೆ ತೊಂದರೆ ಆಗಲ್ಲ

ear_wax_removal1

ಹಾಗಾದರೆ ಗುಗ್ಗ್ಗೆ ಬಗ್ಗೆ ಏನ್ ಮಾಡಬೇಕು?
ನಿಮ್ಮ ಕಿವಿ ಚೆನ್ನಾಗಿರಬೇಕು ಅಂದರೆ ಗುಗ್ಗೆ ಬಗ್ಗೆ ತಲೇನೆ ಕೆಡುಸೊಕ್ಕೆ ಹೋಗಬೇಡಿ ಅದರ ಪಾಡಿಗೆ ಅದನ್ನ ಬಿಟ್ಟು ಬಿಡಿ. ಗುಗ್ಗೆ ಜಾಸ್ತಿ ಆದರೆ ತಾನೇ ಉಂಡುಂಡೆಯಾಗಿ ಬಿದ್ದುಹೋಗತ್ತೆ.

ಅದೇ ಬೀಳೋ ವರೆಗೆ ಗುಗ್ಗೆ ಬಗ್ಗೆ ನೀವು ಏನೂ ಮಾಡದೆ ಸುಮ್ಮನಿರೋದೆ ವಾಸಿ ಅದೇ ನಿಮ್ಮ ಕಿವಿ ಆರೋಗ್ಯಕ್ಕೆ ನೀವು ಮಾಡಬಹುದಾದ ನಂ 1 ಕೆಲಸ  ಕೇಳಿದಾಗ ಸುಮ್ಮನೆ ಬಿಟ್ಟುಬಿಡೋದು ಕಷ್ಟ ಅನ್ನಿಸುತ್ತೆ ಆಲ್ವಾ? ಆದರೆ ನಮ್ಮ ಹಿಂದಿನವರು ಹೀಗೆ ಇರ್ತಿದ್ದಿದ್ದು ಅಬ್ಬಬ್ಬಾ ಅಂದ್ರೆ ಕಿವಿಗೆ ಬೆಚ್ಚಗಿರೋ ಎಣ್ಣೆ ಹಾಲಿ ತಲೆ ಬಗ್ಗಿಸ್ತಾ ಇದ್ದರು. ಆಗ ಎಲ್ಲ ಕರಗಿ ಹೊರಕ್ಕೆ ಬರ್ತಾ ಇತ್ತು.
ಈಗಾಲೇ ಈ ಬಡ್ಸ್ ಗಿಡ್ಸ್ ಎಲ್ಲಾ ಶುರು ಆಗಿರೋದು ಇದರಿಮ್ದ ಅನಾಹುತಗಳೇ ಜಾಸ್ತಿ ದಯವಿಟ್ಟು ಈ ಅಭ್ಯಾಸ ಬಿಟ್ಟುಬಿಡಿ

Comments are closed.