ಅಂತರಾಷ್ಟ್ರೀಯ

ನ್ಯಾಷನಲ್‌ ಪಾರ್ಕ್‌ ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋದವರಿಗೆ ಕಚ್ಚಿದ ಮೊಸಳೆ

Pinterest LinkedIn Tumblr

mosale-finalಬ್ಯಾಂಕಾಕ್‌: ಮೊಸಳೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸುತ್ತಿದ್ದ ಮಹಿಳೆ ಮೇಲೆ ಅಪಾಯಕಾರಿ ಮೊಸಳೆ ದಾಳಿ ನಡೆಸಿ ಗಾಯಗೊಳಿಸಿದೆ.

41 ವರ್ಷದ ಫ್ರೆಂಚ್‌ ಮಹಿಳೆ ಮೊಸಳೆಯೊಂದಿಗೆ ಫೋಟೋ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಮೊಸಳೆಯ ಸಮೀಪ ಕುಳಿತಿದ್ದಾಳೆ. ಸೆಲ್ಫಿ ಕ್ಲಿಕ್ಕಿಸಿ ಮೇಲೇಳುವ ಸಮಯದಲ್ಲಿ ಮೊಸಳೆ ಎಡಗಾಲು ಹಿಡಿದು ಕಚ್ಚಿದೆ.

ಥಾಯ್ಲೆಂಡ್‌ ಖಾವ್‌ ಯಾಯ್ ನ್ಯಾಷನಲ್‌ ಪಾರ್ಕ್‌ನಲ್ಲಿ ಘಟನೆ ನಡೆದಿದ್ದು, ಮಹಿಳೆಯ ಕಾಲಿಗೆ ತೀವ್ರ ಗಾಯವಾಗಿದೆ.

ಮೊಸಳೆಗಳ ಕುರಿತಾಗಿ ಅಪಾಯದ ಸೂಚನೆಯನ್ನು ಒಳಗೊಂಡ ಫಲಕಗಳನ್ನು ಇಡಲಾಗಿದ್ದು, ಪ್ರವಾಸಿಗರು ನಿಯಮ ಪಾಲಿಸುವಂತೆ ಸೂಚಿಸಲಾಗುತ್ತಿದೆ ಎಂದು ರಾಷ್ಟ್ರೀಯ ಉದ್ಯಾನದ ವನ್ಯಜೀವಿ ಮತ್ತು ಸಸ್ಯ ಸಂರಕ್ಷಣಾ ವಿಭಾಗದ ಮುಖ್ಯಸ್ಥರಾದ ಥಾನ್ಯಾ ತಿಳಿಸಿದರು.

Comments are closed.