ಕರ್ನಾಟಕ

ಬಟ್ಟೆಯ ಮೇಲೆ ಆಗಿರುವ ಕಲೆಯನ್ನು ತೆಗೆಯುವ ತಜ್ಞರಾಗಬೇಕಾದರೆ ಈ ರೀತಿ ಮಾಡಿ….

Pinterest LinkedIn Tumblr

stains_removing_trick1

ಮಂಗಳೂರು: ಬಟ್ಟೆಗಳ ಮೇಲೆ ಅಂಟಿರೋ ಕಲೇನ ತೆಗೆಯೋದು ಒಂದು ಕಲೇನೆ, ಅದರಲ್ಲೂ ತುಂಬಾ ಬೆಲೆ ಬಾಳೋ ಬಟ್ಟೆ ಮೇಲೆ ಬಿದ್ದರಂತೂ ಮುಗಿದ್ದೆ ಹೋಯಿತು. ಬಟ್ಟೆಗೆ ಅಂಟುಕೊಂಡಿರೋ ಕಲೇನ ತೆಗೆಯಕ್ಕೆ ಅಂಗಡಿಗಳಲ್ಲಿ ನೂರಾರು ತರದ ಸೋಪು ಪೌಡರ್ ಸಿಗುತ್ತವೆ.ಅದರೆ ಜಾಹಿರಾತಿನಲ್ಲಿ ಹೇಳುವಷ್ಟು ಸುಲಭ ಅಲ್ಲ ಕಲೇನೆ ತೆಗೆಯೋದು, ಬಿಳಿ ಬಟ್ತೆಗಳಿಗಾದ್ರೆ ಎಷ್ಟೇ ಕಲೆ ತೆಗೆದರೂ ಒಂಚೂರು ಅದರ ಶೇಡ್ ಹಾಗೇ ಉಳಿದುಕೊಂಡು ಬಿಟ್ಟಿರುತ್ತೆ.

stains_removing_trick2 stains_removing_trick3

1. ಬಟ್ಟೆಗೆ ಅಂಟಿಕೊಂಡ ಕಾಫಿ ಮತ್ತೆ ಟೀ ಕಲೆಗಳನ್ನ ತೆಗೀಬೇಕು ಅಂದರೆ ಅದಷ್ಠು ಬೇಗ ಅದನ್ನು ಸ್ಪಂಜಿನಿಂದ ಒರೆಸಬೇಕು, ಅಮೇಲೆ ಕಲೆ ಇರೋ ಜಾಗಕ್ಕೆ ಸ್ಪಲ್ಪ ಉಪ್ಪು ಹಾಕಬೇಕು. ಕಲೆ ಒಣಗಿದ ಮೇಲೆ ಅರ್ಧಗಂಟೆ ತಣ್ಣಿರಲ್ಲಿ ನೆನಸಿ ಅಮೇಲೆ ಮಾಮೂಲಿ ತರಹ ಒಗೆದುಕೋಳ್ಳಬೇಕು
2. ಒಂದು ವೇಳೆ ಬೆವರಿನ ಕಲೆಗಳೇನಾದರೂ ಆಗಿದರೆ ಮೊದಲು ಪುಡಿಯುಪ್ಪಿನಿಂದ ಉಜ್ಜಿ , ಅಮೇಲೆ ಬಿಸಿಲಲ್ಲಿ ಒಣಗಿದ ಮೇಲೆ ಬಟ್ಟೆಯನ್ನು ಒಗೆಯಿರಿ.
3. ಇಂಕ್ ಕಲೆಗಳನ್ನು ತೆಗೀಬೇಕು ಅಂದರೆ ಹೇರ್ -ಸ್ಪ್ರೇ ಅಥವಾ ಆಲ್ಕೋಹಾಲ್ ಹಾಕಿ ತೆಗೀಬೋದು.
4. ಎಣ್ಣೆ ಕಲೆ ತೆಗೀಬೇಕು ಅಂದರೆ ಜೋಳದ ಹಿಟ್ಟು ಅಥವಾ ಟಾಲ್ಕ್ ಪೌಡರನ್ನು ಕಲೆ ಮೇಲೆ ಉಜ್ಜಿ ೨೦ ನಿಮಿಷ ಬಿಡಿ ಆಮೇಲೆ ಮೆತ್ತಗಿರೋಂತ ಬಟ್ಟೆ ಅಥವಾ ಬ್ರಶ್ ಹಾಕಿ ತೋಳಿಯಿರಿ.
5. ಲಿಪ್-ಸ್ಟಿಕ್ ಕಲೆ ಆಗಿದ್ರೆ ( ಕಂಗ್ರಾಟ್ಸ್) ಪಾತ್ರೆ ತೊಳೆಯೋ ಲಿಕ್ವಿಡ್ ಸೋಪು + ನೀರು ಬೆರೆಸಿಕೊಂಡು ಒರೆಸಿ, ಕಲೆ ಮಂಗಮಾಯವಾಗುತ್ತೆ.
6. ಬಟೆಗೆ ಬಬಲ್ ಗಮ್ ಅಥವಾ ಚ್ಯೂಯಿಂಗ್ ಗಮ್ ಅಂಟಿಕೊಂಡಿದರೆ ಮೊದಲು ಅದರ ಮೇಲೆ ಐಸ್ ಇಡಿ ಅಮೇಲೆ ಅದು ತಣ್ಣಾಗಾಗಿ ತಾನೇ ಬಂದುಬಿಡುತ್ತೆ.
7. ಟೀ ಮತ್ತೆ ಕಾಫಿ ಕಲೆಗಳನ್ನ ಗ್ಲಿಸರಿನ್ ಹಾಕಿ ಕೂಡ ತೆಗೀಬಹುದು.
8. ಸಾರು, ಹುಳಿ ಏನಾದರೂ ಬಿದ್ದರೆ ನೀರು ಮತ್ತೆ ಗ್ಲಿಸರಿನನ್ನು ಅರ್ಧ- ಅರ್ಧ ಬೆರೆಸಿಕೊಂಡು ಕಲೆ ಆಗಿರೋ ಜಾಗದಲ್ಲಿ ಬಟ್ಟೆಯ ಹಿಂದುಗಡೆ ಹಾಕಿ ತೊಳೆಯಬೇಕು
9.ಹುಲ್ಲು ಗಿಡಬಳ್ಳಿಗಳಿಂದ ಆದ ಕಲೆಗಳನ್ನ ತೆಗೀಬೇಕು ಅಂದ್ರೆ ಮೆತ್ತಗಿರೋ ಹತ್ತಿಬಟ್ಟೆ ಆಲ್ಕೋಹಾಲಲ್ಲಿ ಅದ್ದಿ ಕಲೆ ಇರೊ ಜಾಗಕ್ಕೆ ಹಾಕ್ಬೇಕು ಆಮೇಲೆ ಬಟ್ಟೆ ವಾಸ್ ಮಾಡಬೇಕು.
10.ಬಟ್ಟೆಗೆ ಅಂಟಿಕೊಂಡಿರುವ ಹಣ್ಣು ಮತ್ತೆ ವೈನ್ ಕಲೆಗಳನ್ನು ತೆಗಿಯಬೇಕು ಅಂದರೆ ನಿಂಬೆರಸಕ್ಕೆ ಉಪ್ಪು ಸೇರಿಸಿಕೊಂಡು ಉಜ್ಜಿ.
00. ತುಕ್ಕಿನ ಕಲ್ಲೆ ಆಗಿದರೆ ಮೊದಲು ಒಂದು ನಿಂಬೆಹಣ್ಣಿಗೆ ಉಪ್ಪು ಹಚ್ಚಿಕೊಂಡು ರಸ ಅಂಟುಕೊಳ್ಳೊಹಾಗೇ ಆ ಜಾಗದಲ್ಲಿ ಮೆಲ್ಲಗೆ ಒರೆಸಿ ಆಮೇಲೆ ಬಿಸಿಲಲ್ಲಿ ಒಣಗಕ್ಕೆ ಹಾಕಿ ಒಣಗಿದ ಮೇಲೆ ಬಟ್ಟೆ ಒಗೀರಿ ಕಲೆ ಮಾಯವಾಗಿರತ್ತೆ.

ಅಂದ ಹಾಗೆ, ಕಲೆ ಆದ ಕೂಡಲೆ ಏನ್ ಮಾಡಬೇಕು, ಏನ್ ಮಾಡಬಾರದು ಅಂತ ಗೊತ್ತಿರಲಿ.
1. ಒಂದು ಬಿಳಿ ಕಾಗದ ಅಥವಾ ಬಟ್ಟೆಯನ್ನ ನೀರಲ್ಲಿ ನೆನಸ್ಕೋಂಡು ಒರೆಸಿ.
2. ಪೇಸ್ಟು, ಗಟ್ಟಿಯಾಗಿರೋಂತ ಪದಾರ್ಥ ಅಂಟಿಕೊಂಡಿದರೆ ಚಾಕು ಉಪಯೋಗಿಸಿ
3.ಯಾವುದೇ ಕಾರಣಕ್ಕೂ ಸೋಪು ಹಾಕಿ ಉಜ್ಜೋದಕ್ಕೆ ಹೋಗ್ಬೇಡಿ ಆಗತಾನೆ ಅಗಿರೋ ಕಲೆ ಆದರಿಂದ ಅದು ಬಟ್ಟೆಗೆ ಇನ್ನಷ್ಟು ಅಂಟಿಕೊಳ್ಳುತ್ತೆ
4.ಕಲೇನ ತೆಗಿಬೇಕಾದರೆ ತುಂಬಾ ಉಜ್ಜೊದಕ್ಕೆ ಹೋಗ್ಬೇಡಿ, ಇದರಿಂದ ಬಟ್ಟೆ ಹರಿಯೋ ಚಾನ್ಸ್ ಇರುತ್ತೆ, ಬಣ್ಣ ಹೋಗಬಹುದು, ಬಟ್ಟೆ ಹಾಳಾಗಬಹುದು.
5. ತುಂಬಾ ಬಿಸಿ ನೀರು ಹಾಕಿ ತೊಳಿಯಬೇಡಿ ಕಲೆ ಇನ್ನಷ್ಟು ಅಂಟಿಕೊಳ್ಳತ್ತೆ, ಬೆಚ್ಚಗಿನ ಅಥವಾ ತಣ್ಣಿರನ್ನೇ ಉಪಯೋಗಿಸಿ
6. ಬಟ್ಟೆ ಮೇಲಿರೋ ಕಲೆ ಸಂಪೂರ್ಣವಾಗಿ ಹೋಗೊ ತನಕ ಐರನ್ ಮಾಡಕ್ಕೆ ಹೋಗಬೇಡಿ ಯಾಕಂದ್ರೆ ಅ ಕಲೆ ಇನ್ನಷ್ಟು ಅಂಟಿಕೊಳ್ಳುತ್ತೆ.
7. ಕಲೆ ತೆಗೆಯಕ್ಕೆ ಮೊದಲು ಮೈಲ್ಡ್ ಆಗಿರೋ ಸ್ಟೈನ್ ರಿಮೂವರ್ ಬಳಸಿ, ಅಮೇಲೆ ಸ್ಪಲ್ಪ ಸ್ಟ್ರಾಂಗ್ ಆಗಿರೋದನ್ನ ಬಳಸಿ
8.ಕೆಲವೊಂದು ಬಟ್ಟೆಗಳಿಗೆ ಕಲೆ ಅಂಟಿಕೊಂಡ್ರೆ ಹೋಗುತ್ತೋ ಇಲ್ವಾ ಅಂತ ಸ್ಪಾಟ್ ಟೆಸ್ಟ್ ಮಾಡಿಕೊಳ್ಳೊದು ಉತ್ತಮ ಯಾಕೆಂದರೆ ಅಮೇಲೆ ಒದ್ದಾಡೋ ಪರಿಸ್ಥಿತಿ ಬರಲ್ಲ

Comments are closed.