ಕರ್ನಾಟಕ

ಹೆತ್ತವರು ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಹಣದ ಮಹತ್ವ ಕಲಿಸಬೇಕು?

Pinterest LinkedIn Tumblr

money_valu_child

ಮಂಗಳೂರು: ಮಕ್ಕಳಿಗೆ ಹಣಕಾಸು ವಿಚಾರಗಳ ಬಗ್ಗೆ ತಿಳಿವಳಿಕೆ ಹೇಳುವುದು ಯಾವಾಗ? ಎಂಬುದು ಹೆತ್ತವರನ್ನು ಕಾಡುತ್ತದೆ. ಈವತ್ತಿನ ಮಕ್ಕಳು ಪ್ರತಿಯೊಂದನ್ನು ಎಳೆಯ ಹರೆಯದಲ್ಲೇ ಪ್ರಶ್ನಿಸುತ್ತಾರೆ. ಅದ್ದರಿಂದ ಅವರ ಕುತೂಹಲಗಳನ್ನು ಜ್ಞಾನದಾಹವನ್ನು ತಣಿಸಬೇಕಾದ್ದು ಹಿರಿಯರ ಕರ್ತವ್ಯ. ಹಣ ಸಂಪಾದನೆಗೆ ಸಾಕಷ್ಟು ಶ್ರಮ ಅಗತ್ಯ ಎಂಬುದು ಅವರಿಗೆ ಮನವರಿಕೆಯಾಗುವಂತೆ ಹೇಳಿಕೊಡಬೇಕು.ಕೇವಲ ಎಟಿಎಂಗೆ ಹೋಗಿ ನಿರಾಯಾಸವಾಗಿ ಕೊಳ್ಳಬಹುದು ಎಂಬ ತಪ್ಪು ಕಲ್ಪನೆ ಅವರಲ್ಲಿ ಮೂಡದಂತೆ ನೋಡಿಕೊಳ್ಳಬೇಕು.

ಮಕ್ಕಳಿಗೆ 5-8 ರ ವಯಸ್ಸಿನಲ್ಲಿ ತಂದೆ ಅಥವಾ ತಾಯಿ ಹಣ ಸಂಪಾದನೆಗೆ ದುಡಿಯುತ್ತಾರೆ ಎಂಬುದು ಗೊತ್ತಾಗಬೇಕು. ಮಕ್ಕಳಿಗೆ ನಾನಾ ನೋಟು ಮತ್ತು ನಾಣ್ಯಗಳನ್ನು ತೋರಿಸಿ, ಹಣದ ಮೂಲಕ ಉತ್ಪನ್ನ, ಸೇವೆಗಳನ್ನು ಖರೀದಿಸಬೇಕಾಗುತ್ತದೆ ಎಂದು ತಿಳಿ ಹೇಳಬಹುದು.8-10 ರ ವಯಸ್ಸಿನಲ್ಲಿ ಸ್ಪಲ್ಪ ಪ್ರಬುದ್ಧತೆ ಬಂದಿರುತ್ತದೆ. ಹಣವನ್ನು ಪೋಲು ಮಾಡಬಾರದು. ಉಳಿತಾಯ ಮಾಡಬೇಕು ಎಂಬುದನ್ನು ಆಗ ಕಲಿಸಬೇಕು, 10-13 ರ ಹರೆಯದಲ್ಲಿ ಉಳಿತಾಯ ಖಾತೆ . ನಾನಾ ಬಗೆಯ ಹೂಡಿಕೆ, ಹಣಕಾಸು ಸಾಧನಗಳ ಬಗ್ಗೆ ತಿಳಿಸಿಕೊಡಬೇಕು.

ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ತೆರೆಯುವುದು ಹೇಗೆ ? ನಿಶ್ಚಿತ ಠೇವಣಿಗಳು, ಉಳಿತಾಯ ಪತ್ರಗಳು, ಬಾಂಡ್, ಮ್ಯೂಚುವಲ್ ಫಂಡ್ ಇತ್ಯಾದಿಗಳ ಬಗ್ಗೆ ಪ್ರೌಢ ಶಾಲಾ ಮಕ್ಕಳಿಗೆ ಹೇಳಿ ಕೊಡಬಹುದು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ಗಳನ್ನು ಹೇಗೆ ಬಳಸುವುದು ಮತ್ತು ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡಬೇಕು. ಈ ಕಾರ್ಡ್‍ಗಳ ಪಾಸ್‍ವರ್ಡ್‌ಗಳನ್ನು ಗೌಪ್ಯವಾಗಿಟ್ಟುಕೊಳ್ಳಬೇಕಾಗಿರುವುದರ ಬಗ್ಗೆ ಅರಿವು ಮೂಡಿಸಬೇಕು. ಇನ್ನೂ ದೊಡ್ಡವರಾದ ಬಳಿಕ ಷೇರು, ಪ್ರಾಪರ್ಟಿ, ಚಿನ್ನದ ಇಟಿಎಫ್, ಕರೆನ್ಸಿ ಇತ್ಯಾದಿಗಳಲ್ಲಿ ಹೂಡಿಕೆ ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಬಹುದು.

Comments are closed.