ಸಾಮಾನ್ಯವಾಗಿ ಎಲ್ಲರಿಗೂ ಕೈಗಳಲ್ಲಿ 10 ಮತ್ತು ಕಾಲಲ್ಲಿ 10 ಬೆರಳುಗಳನ್ನು ಹೊಂದಿರುತ್ತಾರೆ. ಆದರೆ ಬಿಹಾರದ ಒಂದು ಕುಟುಂಬ ಪ್ರತಿ ಸದಸ್ಯರೂ 24 ಬೆರಳುಗಳನ್ನು ಅಂದರೆ ಕೈಯಲ್ಲಿ 12 ಮತ್ತು ಕಾಲಿನಲ್ಲಿ 12 ಬೆರಳುಗಳನ್ನು ಹೊಂದಿದ್ದಾರೆ.
50 ವರ್ಷದ ಕೃಷ್ಣ ಚೌಧರಿ ಅವರ ಕುಟುಂಬದ ಪ್ರತಿ ಸದಸ್ಯರಿಗೂ 24 ಬೆರಳುಗಳಿವೆ. ಕುಟುಂಬದಲ್ಲಿ ಒಟ್ಟು 25 ಸದಸ್ಯರಿದ್ದೂ ಪ್ರತಿಯೊಬ್ಬರು ಸಹ 24 ಬೆರಳುಗಳನ್ನು ಹೊಂದಿದ್ದಾರೆ. ನಮ್ಮ ತಂದೆ ಮತ್ತು ಅವರ ಸಹೋದರಿಯರು ೨೪ ಬೆರಳುಗಳನ್ನು ಹೊಂದಿದ್ದರು. ಇದರಿಂದ ನಮಗೆ ಯಾವುದೇ ತೊಂದರೆ ಆಗಿಲ್ಲ ಎಂದು ಕೃಷ್ಣ ಹೇಳುತ್ತಾರೆ.
ನಮ್ಮ ಕುಟುಂಬದ ಮೇಲೆ ದೇವರ ಅನುಗ್ರಹವಿದೆ. ಹಾಗಾಗಿ ನಮ್ಮೆಲ್ಲರ ಕೈಯಲ್ಲಿ 6 ಬೆರಳುಗಳಂತೆ ಒಟ್ಟು 24 ಬೆರಳುಗಳಿವೆ. ಜನರು ಇದನ್ನು ಹೇಗೆ ನಂಬುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನಮಗೆ ಯಾವುದೇ ತೊಂದರೆಗಳಾಗಿಲ್ಲ ಎಂದು ಕೃಷ್ಣ ಚೌಧರಿ ಅತ್ತಿಗೆ ಸೀತಾಬಾಯಿ ಹೇಳುತ್ತಾರೆ.
ಈ ಬೆರಳುಗಳಿಂದ ಕುಟುಂಬದ ಗಂಡಸರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಹೆಣ್ಣು ಮಕ್ಕಳ ಮದುವೆಯಲ್ಲಿ ವಿಳಂಬವಾಗುತ್ತಿದೆ. ನಾವು ಎಲ್ಲರಂತೆ ಆರಾಮದಾಯಕ ಮತ್ತು ಹೊಸ ಚಪ್ಪಲಿಗಳನ್ನು ಧರಿಸಲು ಸಾಧ್ಯವಿಲ್ಲ. ಹೀಗಾಗಿ ನಾವು ಸಾಧಾರಣ ಮಾದರಿಯ ಚಪ್ಪಲಿಗಳನ್ನೇ ಧರಿಸುತ್ತೇವೆ ಎಂದು ಕೃಷ್ಣ ಚೌಧರಿ ತಿಳಿಸಿದ್ದಾರೆ.
ವೈಜ್ಞಾನಿಕವಾಗಿ ಇದನ್ನು ಪೋಲಿಡೆಕಾಲ್ಟಿ ಎಂದು ಹೇಳಲಾಗುತ್ತದೆ. ಇದೊಂದು ಅನುವಂಶಿಕವಾಗಿದ್ದು ಒಂದು ಪೀಳಿಗೆ ಇನ್ನೊಂದು ಪೀಳಿಗೆ ಮುಂದುವರೆಯುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.