ಮಂಗಳೂರು: ಜಗತ್ತಿನಲ್ಲಿ ಎಷ್ಟೋ ಜನ ತನಗೆ ತಿಳಿದು ತಿಳಿಯದೇ ಅನೇಕ ತಪ್ಪು ಕಲ್ಪನೆಯ ಹಾದಿಯಲ್ಲಿ ತನ್ನ ಜೀವನ ಸಾಗಿಸುತ್ತಾರೆ. ಉದಾ: ಊಟ ಜಾಸ್ತಿ ಮಾಡಿದ್ರೆ ಅಷ್ಟೆ ದೇಹದ ತೂಕ ಹೆಚ್ಚಾಗುತ್ತೆ ಅಂದ್ರೆ ಅದು ನಿಮ್ಮ ತಪ್ಪು ಕಲ್ಪನೆಯೇ ಸರಿ. ರಾತ್ರಿ ಮಲಗುವ ಮುನ್ನ ಮಾಡುವ ಕೆಲ ತಪ್ಪುಗಳಿಂದಲೂ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಎಷ್ಟೋ ಜನ ತಿಳಿದು ತಿಳಿಯದೇ ಈ ಕೆಳಗಿನ ತಪ್ಪುಗಳನ್ನು ಮಾಡಿ ದೇಹದ ತೂಕ ಹೆಚ್ಚು ಮಾಡಿಕೊಂಡು ಆಮೇಲೆ ಪರಿತಪಿಸುತ್ತಾರೆ. ಆದ್ರೆ ಈ ಲೇಖನವನ್ನು ಓದಿದ ಮೇಲೆ ಈ ಮುಂಚೆ ಮಾಡಿದ ತಪ್ಪನ್ನು ಮಲಗುವ ಮುಂಚೆ ಮಾಡದೇ ಇದ್ರೆ ನಿಮಗೇ ಒಳಿತು. ನಾವು ಹೇಳಿದ ಹಾಗೆ ಮಾಡಿದ್ರೆ ನಿದ್ರೆ ಆರಾಮಾಗಿ ಮಾಡಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.
ಮದ್ಯ ಸೇವನೆ: ಸಾಮಾನ್ಯವಾಗಿ ಅದೆಷ್ಟೋ ಜನ ರಾತ್ರಿ ಮಲಗುವ ಮುನ್ನ ಕಡ್ಡಾಯವಾಗಿ ಡ್ರಿಂಕ್ಸ್ ಮಾಡಿಯೇ ಮಲಗುತ್ತಾರೆ. ಅವ್ರ ಡೊಳ್ಳು ಹೊಟ್ಟೆ ನೋಡಿದ್ರೆ ಗೊತ್ತಾಗುತ್ತೆ ಅವರು ಡೇಲಿ ಡ್ರಿಂಕರ್ ಅಂತ. ಹಾಗಾಗಿ ರಾತ್ರಿ ಮಲಗುವ ಮುನ್ನ ಮದ್ಯ ಸೇವಿಸಿದ್ರೆ ಕಾರ್ಟಿಸೋಲ್ ಎನ್ನುವ ಸ್ಟ್ರೆಸ್ ಹಾಮೋರ್ನ್ ಬಿಡುಗಡೆಯಾಗುತ್ತದೆ.ಇದರಿಂದ ನಿದ್ದೆ ಬಾರದ ಸಮಸ್ಯೆ ಉಂಟಾಗುತ್ತದೆ ಜೊತೆಗೆ ತೂಕ ಕೂಡ ಜಾಸ್ತಿಯಾಗುತ್ತದೆ.
ಹೆಚ್ಚಿನ ಬೆಳಕು: ಮಲಗುವ ಹೊತ್ತಿನಲ್ಲಿ ರೂಮಿನಲ್ಲಿ ಅತಿಯಾದ ಬೆಳಕು ಇದ್ದರೆ ನಿದ್ರೆ ಬರುವುದಿಲ್ಲ. ಇದಕ್ಕೆ ಕಾರಣ ಅಂದ್ರೆ ಅತೀ ಹೆಚ್ಚಿನ ಬೆಳಕಿನಲ್ಲಿ ಮಲಗುವುದರಿಂದ ಮೆಲಾಟನಿನ್ ಹಾರ್ಮೋನ್ ಕಡಿಮೆಯಾಗುತ್ತದೆ. ಇದ್ರಿಂದಾಗಿಯೂ ತೂಕ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ ಮಲಗುವ ಕೋಣೆಯಲ್ಲಿ ಮಂದ ಬೆಳಕು ಇದ್ದರೆ ಸಾಕು. ನಿದ್ರಾ ದೇವತೆ ಬೇಗನೇ ನಿಮ್ಮೊಳಗೆ ಹೊಕ್ಕುತ್ತಾಳೆ.
ಆಹಾರ ಸೇವಿಸುವ ಸಮಯ: ಮಲಗುವ ಮುನ್ನ ಅಂದ್ರೆ ಸುಮಾರು 4 ಗಂಟೆಗಳ ಮುಂಚಿತವಾಗಿಯೇ ಊಟ ಮಾಡಿ ಮುಗಿಸಿಬಿಡಿ. ಊಟ ಮಾಡಿ ಕನಿಷ್ಟ ಪಕ್ಷ ನೂರು ಹೆಜ್ಜೆ ನೆಡೆದರೆ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಊಟ ಮಾಡಿದ ತಕ್ಷಣವೇ ಮಲಗಿಕೊಂಡರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಟ್ರೈಗ್ಲಿಸರೈಡ್ ಆಗಿ ಬದಲಾಗುತ್ತದೆ. ಇದ್ರಿಂದ ತೂಕ ಹೆಚ್ಚಾಗುತ್ತದೆ.
ಹೆಚ್ಚಿನ ಕ್ಯಾಲರಿ ಆಹಾರ: ರಾತ್ರಿ ಮಾಡುವ ಊಟ ತುಂಬಾ ಲಘುವಾಗಿರಬೇಕು. ಹೆಚ್ಚು ಕ್ಯಾಲರಿ ಇರುವ ಪದಾರ್ಥಗಳನ್ನು ಆದಷ್ಟು ದೂರವಿಡಿ. ಅಂದ್ರೆ ಸಿಹಿ ತಿಂಡಿ, ಅನ್ನ, ಆಲೂಗಡ್ಡೆ ಇಂತಹ ಹೆಚ್ಚು ಕ್ಯಾಲರಿ ಇರುವ ಪದಾರ್ಥಗಳನ್ನು ಸೇವಿಸಬೇಡಿ.
ರಾತ್ರಿ ಧರಿಸುವ ಬಟ್ಟೆ: ರಾತ್ರಿ ಮಲಗುವ ಮುನ್ನ ಆದಷ್ಟು ಸಡಿಲವಾದ ಬಟ್ಟೆಗಳನ್ನು ಹಾಕಿಕೊಂಡು ಮಲಗಿ. ಬಿಗಿ ಬಟ್ಟೆಗಳನ್ನು ಹಾಕಿ ಮಲಗಿದರೆ ನಿದ್ರೆ ಆರಾಮದಾಯಕವಾಗಿರುವುದಿಲ್ಲ.
Comments are closed.