ಕರಾವಳಿ

ಮೌಡ್ಯ ನಿಷೇಧ ಕಾನೂನನ್ನು ರದ್ದುಗೊಳಿಸಲು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರತಿಭಟನೆ

Pinterest LinkedIn Tumblr

hindu_samiti_protest_1

ಮಂಗಳೂರು, ನವೆಂಬರ್ 24 : ರಾಜ್ಯ ಸರಕಾರವು ಪ್ರಸ್ತಾಪಿಸಿರುವ ಮೌಡ್ಯ ನಿಷೇಧ ಕಾನೂನನ್ನು ರದ್ದುಗೊಳಿಸ ಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗುರುವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ನಮ್ಮ ಈ ದೇಶವು ಶ್ರದ್ಧೆಯ ಆಧಾರದಲ್ಲಿರುವ ದೇಶವಾಗಿದ್ದು ದೇಶದಲ್ಲಿನ ಶೇ. 90ಕ್ಕಿಂತಲೂ ಹೆಚ್ಚು ಜನರು ಶ್ರದ್ಧಾಳುಗಳಾಗಿದ್ದಾರೆ. ಕುಂಭಮೇಳದಿಂದ ಹಿಡಿದು ದೇವಿ ಯಲ್ಲಮ್ಮಾಳ ಉತ್ಸವದವರೆಗೆ, ಶ್ರೀ ತಿರುಪತಿ ದೇವಸ್ಥಾನದಿಂದ ಹಿಡಿದು ಧರ್ಮಸ್ಥಳದವರೆಗೆ ಎಲ್ಲ ಬಡವರು-ಶ್ರೀಮಂತರು ಇದರಲ್ಲಿ ಶ್ರದ್ಧೆಯಿಂದ ಭಾಗವಹಿಸುತ್ತಾರೆ.

ಇಂದಿನ ಬರಗಾಲ, ಬೆಲೆ‌ಏರಿಕೆ, ಭ್ರಷ್ಟಾಚಾರ ಇತ್ಯಾದಿ ದೈನ್ಯಾವಸ್ಥೆಯ ಸ್ಥಿತಿಯಲ್ಲಿಯೂ ಈ ಬಡಜನರು ಕೇವಲ ಶ್ರದ್ಧೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಕರ್ನಾಟಕ ಸರಕಾರವು ಮಹಾರಾಷ್ಟ್ರದ ಹಾಗೆಯೇ ಅಂಧಶ್ರದ್ಧಾ ನಿರ್ಮೂಲನ ಕಾನೂನು ಮಾಡುವುದಾಗಿ ಘೋಷಣೆ ಮಾಡಿದೆ.

hindu_samiti_protest_2 hindu_samiti_protest_5 hindu_samiti_protest_6

ಅದು ಈ ಭಕ್ತರ ದೃಷ್ಟಿಯಿಂದ ಅನ್ಯಾಯಕಾರಿಯಾಗಿದೆ.ಮತ್ತು ಈ ಪ್ರಸ್ತಾಪಿತ ಕಾನೂನು ಕೇವಲ ಹಿಂದೂಗಳಿಗೆ ಮಾತ್ರ ಅನ್ವಯವಾಗಲಿದ್ದು ಹಿಂದೂ ಧರ್ಮದ ಆಚರಣೆಗಳನ್ನು ನಾಶಮಾಡುವುದಕ್ಕಾಗಿಯೇ ತರುತ್ತಿದ್ದಾರೆ ಎಂಬುವುದು ಸ್ಪಷ್ಟವಾಗುತ್ತಿದೆ. ಹಾಗಾಗಿ ಇಂತಹ ಹಿಂದೂದ್ವೇಷಿ ಕಾನೂನಿನ ಪ್ರಸ್ತಾಪವನ್ನು ರದ್ದುಗೊಳಿಸಿ, ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಎಂದು ಪ್ರತಿಭಟನ ಸಭೆಯಲ್ಲಿ ಸಮಿತಿ ಮುಖಂಡರು ಆಗ್ರಹಿಸಿದರು

ದಕ್ಷಿಣ ಭಾರತದಲ್ಲಿ ನಡೆದಿರುವ ಹಿಂದುತ್ವವಾದಿಗಳ ಹತ್ಯೆಗಳ ತನಿಖೆಯನ್ನು ಸಿಬಿ‌ಐಗೆ ಒಪ್ಪಿಸಬೇಕು. ಡಾ.ಝಾಕೀರ್ ನಾಯಿಕ್ ಇವನ `ಪೀಸ್ ಸ್ಕೂಲ’ನ ಮಾಧ್ಯಮದಿಂದ ಎರಡು ಧರ್ಮದ ನಡುವೆ ಬಿರುಕನ್ನು ನಿರ್ಮಾಣವನ್ನು ಮಾಡಿ ಧಾರ್ಮಿಕ ದ್ವೇಷವನ್ನು ನಿರ್ಮಾಣಮಾಡುವ ಹಾಗೂ ದೇಶದಲ್ಲಿ ಸಾಮಾಜಿಕ ವಾತಾವರಣವನ್ನು ಹಾಳು ಮಾಡುವ ಕಾರ್ಯವನ್ನು ಮಾಡುತ್ತಿದೆ.

ದೇಶದ್ರೋಹಿ ಡಾ.ಝಾಕೀರ ನಾಯಿಕ ಅನ್ನು ಭಾರತಕ್ಕೆ ಕರೆ ತಂದು ಹಾಗೂ ದ್ವೇಷ ಭಾವನೆಯ ಶಿಕ್ಷಣವನ್ನು ಕೊಡುವ `ಪೀಸ್ ಸ್ಕೂಲ್’ನ ಎಲ್ಲ ಶಾಲೆಗಳ ಮೇಲೆ ನಿರ್ಬಂಧವನ್ನು ಹಾವುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

hindu_samiti_protest_7 hindu_samiti_protest_5

ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯದ ವಿವಿಧ ಹಿಂದುತ್ವವಾದಿ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಮರಣಾಂತಿಕ ಹಲ್ಲೆಗಳಾಗುವುದು, ಅವರ ಹತ್ಯೆಗೈಯ್ಯುವಂತಹ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ಕೇವಲ ಹಿಂದುತ್ವವಾದಿ ವಿಚಾರಸರಣಿ ಹಾಗೂ ಹಿಂದುತ್ವದ ಕಾರ್ಯ ಕೈಕೊಳ್ಳುತ್ತಿರುವುದರಿಂದಲೇ ಈ ಹತ್ಯೆಗಳಾಗಿರುವುದು ಸುಸ್ಪಷ್ಟವಾಗಿದೆ. ಆದರೂ ಈ ರಾಜ್ಯಗಳ ಪೊಲೀಸರು ಈ ಹತ್ಯೆಯ ಹಿಂದೆ ವೈಯಕ್ತಿಕ ದ್ವೇಷವಿರುವುದೆಂದು ತೋರಿಸಿ ಈ ಹತ್ಯೆಗಳ ತನಿಖೆಯನ್ನು ಮುಚ್ಚಿಹಾಕಲು ನೋಡುತ್ತಿದ್ದಾರೆ ಎಂದು ಆರೋಪಿಸಲಾಯಿತು.

ಬಂಗಾಳದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರ ಮಾಡುವ ಧರ್ಮಾಂಧರ ಮೇಲೆ ಸೂಕ್ತ ಕ್ರಮ ಜರುಗಿಸಿ:ಆಗ್ರಹ

hindu_samiti_protest_4 hindu_samiti_protest_3

ಕಳೆದ ಕೆಲವು ವರ್ಷಗಳಲ್ಲಿ ಬಂಗಾಳದಲ್ಲಿರುವ ಹಿಂದೂಗಳ ಸ್ಥಿತಿಯು ಅತ್ಯಂತ ಹೀನಾಯವಾಗಿದೆ. ಮಮತಾ ಬ್ಯಾನರ್ಜಿಯ ಆಡಳಿತ ಬಂದಾಗಿನಿಂದ ಧರ್ಮಾಂಧರಿಂದ ರಾಜ್ಯಾದ್ಯಂತ ಹಿಂದೂಗಳ ಮೇಲೆ ನಡೆಯುವ ಹಿಂಸಾತ್ಮಕ ಕೃತ್ಯಗಳಲ್ಲಿ ಬಹಳಷ್ಟು ಹೆಚ್ಚಳವಾಗಿದೆ.
ಜಾತೀಯ ಗಲಭೆಯನ್ನು ಜರುಗಿಸುವುದು, ಹಿಂದೂಗಳ ಮೇಲೆ ಮರಣಾಂತಿಕ ಹಲ್ಲೆ ಮಾಡಿ ಅವರನ್ನು ಕೊಲ್ಲುವ ಪ್ರಯತ್ನ ಮಾಡುವುದು, ಇತ್ಯಾದಿ ಪ್ರಕರಣಗಳು ಮೇಲಿಂದ ಮೇಲೆ ಜರುಗುತ್ತಿದೆ.

ಇತ್ತೀಚೆಗೆಷ್ಟೆ ಜರುಗಿದ ಮೊಹರಂ, ದುರ್ಗಾಪೂಜೆ ಮತ್ತು ದುರ್ಗಾಮೂರ್ತಿ ವಿಸರ್ಜನೆಯ ಪ್ರಸಂಗದಲ್ಲಿ ಅನೇಕ ತಾಲೂಕುಗಳಲ್ಲಿ ಜಾತೀಯ ಗಲಭೆ ನಡೆಸಿರುವುದು ಬಹಿರಂಗಗೊಂಡಿದೆ. ಯಾವ ರೀತಿ ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರೇಮಿ ಧರ್ಮಾಂಧ ಮುಸಲ್ಮಾನರು ಹಿಂದೂಗಳನ್ನು ಹೊರದಬ್ಬಿದರೋ ಮತ್ತು ಆಸ್ಸಾಂನಲ್ಲಿ ಬಾಂಗ್ಲಾದೇಶಿ ನುಸುಳುಖೋರ ಮುಸಲ್ಮಾನರು ಹಿಂದೂಗಳನ್ನು ಹೊರದಬ್ಬಿದರೋ ಅದೇ ರೀತಿ ಈಗ ಬಂಗಾಳದಲ್ಲಿ ಪ್ರಾರಂಭವಾಗಿದೆಯೆಂದು ಹೇಳಬಹುದಾಗಿದೆ.

ಧರ್ಮಾಂಧರನ್ನು ಓಲೈಸುವ ಮಮತಾ ಬ್ಯಾನರ್ಜಿಯವರ ಆಡಳಿತಾವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಲಿನಡಿಯಲ್ಲಿ ತುಳಿಯಲಾಗುತ್ತಿದೆ. ಆದಕಾರಣ, ಈ ಪ್ರಕರಣದಲ್ಲಿ ಕೇಂದ್ರ ಸರಕಾರವು ಶೀಘ್ರದಲ್ಲಿ ಹಸ್ತಕ್ಷೇಪ ಮಾಡಿ ಬಂಗಾಳದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರ ಮಾಡುತ್ತಿರುವ ಧರ್ಮಾಂಧರ ಮೇಲೆ ಕ್ರಮ ಜರುಗಿಸಬೇಕು. ಹಿಂದೂಗಳನ್ನು ರಕ್ಷಿಸಬೇಕು ಹಾಗೂ ಹಿಂದೂಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Comments are closed.