ಕರ್ನಾಟಕ

ಹೆತ್ತವರು ಅಥವಾ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಪಡೆಯುವ ಮುನ್ನ ತಿಳಿದುಕೊಳ್ಳಬೇಕಾದ ಕೆಲ ಪ್ರಮುಖ ಸಂಗತಿಗಳು

Pinterest LinkedIn Tumblr

education_loan1

ಮಂಗಳೂರು: ಹೆತ್ತವರಿಗೆ ತಮ್ಮ ಮಕ್ಕಳು ವಿದೇಶಗಳಲ್ಲಿ ವ್ಯಾಸಂಗ ಮಾಡಬೇಕು ಅಥವಾ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದುಬೇಕು ಎಂಬ ಕನಸು ಕಂಡಿರುತ್ತಾರೆ. ಈ ಕನಸನ್ನು ನನಸು ಮಾಡುವುದಕ್ಕಾಗಿ ಶೈಕ್ಷಣಿಕ ಸಾಲ ಮಹತ್ವದ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ವಿದ್ಯಾರ್ಥಿ ಸಾಲ(ಶೈಕ್ಷಣಿಕ ಸಾಲ) ವಿದೇಶಗಳಲ್ಲಿ ಪದವಿಪೂರ್ವ ಮತ್ತು ಉನ್ನತ ಶಿಕ್ಷಣ ಪಡೆಯುವಂತೆ ವಿದ್ಯಾರ್ಥಿ ಮತ್ತು ಪಾಲಕರನ್ನು ಪ್ರೋತ್ಸಾಹಿಸುತ್ತದೆ. ಅನೇಕ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ಒದಗಿಸುತ್ತಿವೆ. ವಿದ್ಯಾರ್ಥಿಗಳ ಅರ್ಹತೆ ಮತ್ತು ಬ್ಯಾಂಕುಗಳ ಆಧಾರದ ಮೇಲೆ ಸಾಲದ ಪ್ರಮಾಣ ಬದಲಾಗುತ್ತದೆ. ವಿದ್ಯಾರ್ಥಿಗಳು ಗರಿಷ್ಠ ರೂ. 15 ಲಕ್ಷ, ವಿದೇಶ ವ್ಯಾಸಂಗಕ್ಕಾಗಿ ರೂ. 20 ಲಕ್ಷದವರೆಗೆ ಸಾಲ ಪಡೆಯಬಹುದು. ಕೆಲ ಬ್ಯಾಂಕುಗಳು ಒಂದು ಕೋಟಿ ವರೆಗೂ ಸಾಲ ನೀಡುತ್ತವೆ.ಅದರೆ ಹೆತ್ತವರು ಅಥವಾ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಪಡೆಯುವ ಮುನ್ನ ತಿಳಿದುಕೊಳ್ಳಬೇಕಾದ ಕೆಲ ಪ್ರಮುಖ ಸಂಗತಿಗಳು ಇಲ್ಲಿವೆ ನೋಡಿ…

ಯಾವುದೇ ಸಾಲ ಪಡೆಯುವಾಗ ಮೊದಲು ಗಮನಿಸಬೇಕಾದ ಸಂಗತಿಯೆಂದರೆ ಬಡ್ಡಿದರ. ಬ್ಯಾಂಕುಗಳು ನೀಡುವ ಬಡ್ಡಿದರಗಳು ಬದಲಾಗುತ್ತಿರುವುದರಿಂದ ದೀರ್ಘಾವಧಿಗೆ ಪಾವತಿ ಮಾಡಬೇಕಾದ ಸಂದರ್ಭದಲ್ಲಿ ಸಣ್ಣ ವ್ಯತ್ಯಾಸ ಸಹ ಪರಿಣಾಮ ಬೀರಬಲ್ಲದು. ಬದಲಾಗುವ ಬಡ್ಡಿದರ ಅಥವಾ ಸ್ಥಿರ ಬಡ್ಡಿದರ ಎಂಬುದನ್ನು ವಿದ್ಯಾರ್ಥಿಗಳು ಪರಿಶೀಲನೆ ಮಾಡದಿದ್ದರೆ ದೀರ್ಘಾವಧಿ ಪಾವತಿ ಸಂದರ್ಭದಲ್ಲಿ ಹೊರೆಯಾಗುತ್ತದೆ.
ಬಡ್ಡಿದರಗಳು ಅಗತ್ಯವಿರುವ ಸಾಲದ ಮೊತ್ತವನ್ನು ಅವಲಂಬಿಸಿದ್ದು, ವಿದ್ಯಾರ್ಥಿನಿಯರಿಗೆ ಬಡ್ಡಿ ಮೇಲೆ ಶೇ. 0.50ರಷ್ಟು ರಿಯಾಯಿತಿ ಇರುತ್ತದೆ ಎಂಬುದನ್ನು ಗಮನಿಸಬೇಕು. ಎಸ್ಬಿಐ ನಂತಹ ಬ್ಯಾಂಕುಗಳು ಸಾಲದ ಪೂರ್ಣ ಅವಧಿಗೆ ಶೇ. 1ರಷ್ಟು ರಿಯಾಯಿತಿ ಒದಗಿಸುತ್ತವೆ.

ಸಾಮಾನ್ಯವಾಗಿ ಬ್ಯಾಂಕುಗಳು ಮತ್ತು ಸಂಸ್ಥೆಗಳು ವಿದ್ಯಾರ್ಥಿಯ ಕೋರ್ಸ್ ಮುಗಿದು ಉದ್ಯೋಗಗಕ್ಕೆ ಸೇರುವವರೆಗೂ ಸಾಲ ಪಾವತಿಸುವುದನ್ನು ನಿರೀಕ್ಷಿಸುವುದಿಲ್ಲ. ಈ ಅಂಶವನ್ನು ಸಾಲ ಪಡೆಯುವಾಗ ಮುಖ್ಯವಾಗಿ ಗಮನಿಸಬೇಕಾಗುತ್ತದೆ. ದೀರ್ಘಾವಧಿ ಸಂದರ್ಭದಲ್ಲಿ ನಿಮ್ಮ ಸಾಮರ್ಥ್ಯ ಹಾಗೂ ವೇಗಕ್ಕೆ ಅನುಗುಣವಾಗಿ ಪಾವತಿಸಲು ಅನುವು ಮಾಡಿಕೊಡುತ್ತದೆ.

ಕೆಲ ಬ್ಯಾಂಕುಗಳು ಸಾಲದ ಗಾತ್ರಕ್ಕನುಗುಣವಾಗಿ ಮರುಪಾವತಿ ನಿಯಮಗಳಿಗೆ ಅವಕಾಶ ಮಾಡಿಕೊಡುತ್ತದೆ. ನಿಮಗೆ ಸೂಕ್ತವಾಗಿರುವುದನ್ನು ಆಯ್ಕೆ ಮಾಡಬೇಕಾಗುತ್ತದೆ.

ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಸಂಸ್ಕರಣಾ ಶುಲ್ಕ, ಆಡಳಿತಾತ್ಮಕ ಶುಲ್ಕ, ದಸ್ತಾವೇಜು ವೆಚ್ಚ ಇತ್ಯಾದಿ ಅಂಶಗಳನ್ನು ತಪ್ಪದೆ ಗಮನಿಸಬೇಕು. ಆರಂಭಿಕ ಸಾಲ ಮುಚ್ಚುವಿಕೆಯ ಮುನ್ನ ತಗಲಬಹುದಾದ ಶುಲ್ಕವನ್ನು ವಿದ್ಯಾರ್ಥಿಗಳು ಪರೀಕ್ಷಿಸಬೇಕಾಗುತ್ತದೆ.

ರೂ. 4 ಲಕ್ಷ ಮೀರುವ ಸಾಲದ ಮೊತ್ತಕ್ಕೆ ಕೊಲ್ಯಾಟರಲ್ ಅಗತ್ಯವಿರುತ್ತದೆ. ಇದು ನಿಶ್ಚಿತ ಠೇವಣಿ, ಫ್ಲಾಟ್, ಮನೆ, ಬಂಗಲೆ, ಭೂಮಿ, ಅಂಗಡಿ ಇತ್ಯಾದಿ ಯಾವುದಾದರೂ ಆಗಬಹುದು. ಸಾಲ ಒದಗಿಸುವ ಬ್ಯಾಂಕುಗಳು ಅಪಾಯವನ್ನು ತಗ್ಗಿಸುವ ಸಲುವಾಗಿ ಭದ್ರತೆಯನ್ನು ಬಯಸುತ್ತವೆ. ಅಲ್ಲದೆ ಪ್ರತಿಭಾವಂತ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಭದ್ರತೆ ಇಲ್ಲದೆ ರೂ. 20 ಲಕ್ಷದವರೆಗೆ ಸಾಲವನ್ನು ಒದಗಿಸುತ್ತವೆ.

ಸಂಪೂರ್ಣ ಮೊತ್ತವನ್ನು ಬ್ಯಾಂಕುಗಳು ಪಾವತಿಸುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು. ಡೌನ್ ಪೇಮೆಂಟ್ ಆಗಿ ಅಭ್ಯರ್ಥಿಗಳು ಸಲ್ಪ ಪ್ರಮಾಣದ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಡೌನ್ ಪೇಮೆಂಟ್ ಎಂಬುದು ಬ್ಯಾಂಕು ಹಾಗೂ ಅರ್ಹತೆ ಆಧಾರದ ಮೇಲೆ ಭಿನ್ನವಾಗಿರುತ್ತದೆ. ಇದು ಬ್ಯಾಂಕುಗಳ ಸಾಲದ ಮೊತ್ತಕ್ಕೆ ಅನುಗುಣವಾಗಿ ಶೇ. 5 ರಿಂದ ಶೇ. 20 ವ್ಯಾಪ್ತಿಯಲ್ಲಿರುತ್ತದೆ.

ಬಡ್ಡಿ ಮರುಪಾವತಿಯ ಆಧಾರದ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಶಿಕ್ಷಣ ಸಾಲದ ಪ್ರಿನ್ಸಿಪಲ್ ಮೊತ್ತದ ಮೇಲೆ ಪಡೆಯಲಾಗುವುದಿಲ್ಲ. ತೆರಿಗೆ ಕಾಯಿದೆಯ 80C ಇತಿಮಿತಿಯಲ್ಲಿ ಇದರ ಲಾಭಗಳನ್ನು ಪಡೆಯಬಹುದಾಗಿದೆ.

ಸಾಮಾನ್ಯವಾಗಿ ಖಾಸಗಿ ವಲಯದ ಬ್ಯಾಂಕುಗಳಿಗೆ ಹೋಲಿಸಿದರೆ ಸಾರ್ವಜನಿಕ ವಲಯದ ಬ್ಯಾಂಕುಗಳು ಕಡಿಮೆ ಬಡ್ಡಿದರವನ್ನು ಘೋಷಿಸುತ್ತವೆ. ಅದಾಗ್ಯೂ, ಸಾಲವನ್ನು ಮಂಜೂರು ಮಾಡುವಾಗ ಓಡಾಟ ಮಾಡಬೇಕಾಗುತ್ತದೆ.

Comments are closed.