ಗಲ್ಫ್

ಸೌದಿ ಅರೆಬೀಯದಲ್ಲಿ ಗುಲ್ಬರ್ಗಾ ಮೂಲದ ವ್ಯಕ್ತಿಯ ಮರಣ: ದಫನ ಕಾರ್ಯಕ್ಕೆ ಸಹಕರಿಸಿದ ಇಂಡಿಯನ್ ಸೋಶಿಯಲ್ ಫಾರಂ

Pinterest LinkedIn Tumblr

isf1

ಸೌದಿ ಅರೆಬೀಯದಲ್ಲಿ ಸದಾ ಜನಪರ ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೋಂಡಿರುವ ಇಂಡಿಯನ್ ಸೋಶಿಯಲ್ ಫಾರಂ ಈ ಬಾರಿ ಗುಲ್ಬರ್ಗಾ ಮುಲದ ವ್ಯಕ್ತಿಯ ಅಂತ್ಯಕ್ರಿಯೆಗೆ ಸಹಾಯ ಮಾಡುವುದರ ಮೂಲಕ ಸಾರ್ವಜನಿಕರ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸುಮಾರು ಹನ್ನೊಂದು ವರ್ಷಗಳಿಂದ ಸೌದಿ ಅರೆಬೀಯದ ರಾಜಧಾನಿ ರಿಯಾದಿನಲ್ಲಿರುವ ಅಲ್ ಮಲಝ್‍ನ ಕಂಪೆನಿಯೊಂದರಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಗುಲ್ಬರ್ಗಾ ಮುಲದ ಸಯ್ಯದ್ ಹುಸೇನ ಅನ್ವರ್ ರವರು ದಿನಾಂಕ 16-10-2016 ರಂದು ದುರಾದೃಷ್ಠಾವಷಾತ್ ಹೃದಯಾಪಘಾತದಿಂದ ಅಕಾಲಿಕ ಮರಣ ಹೊಂದಿದ್ದರು.

ಆಸ್ಪತ್ರೆಯಲ್ಲಿರುವ ಅವರ ಮೃತದೇಹವನ್ನು ಬಿಡಿಸಿ ಅಂತ್ಯಕಾರ್ಯಮಾಡುವ ಸಲುವಾಗಿ ಸಯ್ಯದ್ ಹುಸೇನ ಅನ್ವರ್ ರವರ ಸಂಬಂಧಿ ಮತೀನ್ ಗುಲ್ಬರ್ಗಾ ಮತ್ತು ಅವರ ಗೆಳಯರಾದ ಸುಹೈಲ್ ಗುಲ್ಬರ್ಗಾರವರು ಇಂಡಿಯನ್ ಸೋಶಿಯಲ್ ಫಾರಂನ ಸದಸ್ಯರನ್ನು ಸಂಪರ್ಕಿಸುತ್ತಾರೆ.

ವಿಷಯವನ್ನು ತಿಳಿದ ಇಂಡಿಯನ್ ಸೋಶಿಯಲ್ ಫಾರಂನ ಇಸ್ಮಾಯಿಲ್ ಮಂಗಳಪೇಟೆ ಮತ್ತು ಇಬ್ರಾಹಿಂ ಅನಾಜೆ ಜೊತೆಗಿನ ತಂಡವು ತಕ್ಷಣವೇ ಇವರ ಸಹಾಯಕ್ಕೆ ಧಾವಿಸುತ್ತದೆ.

ಪಪ್ರಥಮವಾಗಿ ಇಂಡಿಯನ್ ಸೋಶಿಯಲ್ ಫಾರಂನ ತಂಡವು ಮತೀನ್ ಮತ್ತು ಸುಹೈಲ್‌ರವರುನ್ನು ಜೊತೆಗೊಡಿಸಿ ಸೌದಿ ಅರೆಬೀಯದ ಕಾನುನಿನಂತೆ ಪೋಲಿಸ್ ಠಾಣೆಗೆ ಭೇಟಿ ನೀಡಿ ಸಯ್ಯದ್ ಹುಸೇನ ಅನ್ವರ್ ರವರ ಮರಣವು ಸಹಜವೆಂದು ದೃಢಿಕರಣ ಪತ್ರ ಪಡೆಯಲಾಯಿತು.

ಇನ್ನು ಆಸ್ಪತ್ರೆಯಲ್ಲಿದ್ದ ಮೃತದೇಹವನ್ನು ಪಡೆಯುಲು ನಿರಂತರ ರಿಯಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಊರಿನಲ್ಲಿರುವ ಮೃತರ ರಕ್ತ ಸಂಭಂಧಿಗಳನ್ನು ಸಂಪರ್ಕಿಸಿ ,ಅಂತಿಮವಾಗಿ ಮತೀನ್‌ರವರ ಹೆಸರಿನ ಮೇಲೆ ಅಧಿಕಾರ ಪತ್ರವನ್ನು (ಪವರ್ ಆಫ್ ಆಟಾರ್ನಿ) ಭಾರತೀಯ ರಾಯಭಾರ ಕಚೇರಿಯ ಮುಲಕ ಪಡೆಯಲಾಯಿತು.

ಈ ರೀತಿ ಏಲ್ಲಾ ಧಾಖಲೆಪತ್ರಗಳನ್ನು ಪಡೆದ ನಂತರ ದಿನಾಂಕ 21-10-2016ರಂದು ಶುಕ್ರವಾರ ರಿಯಾದಿನ ಅಲ್ ರಾಜಿ ಮಸೀದಿಯಲ್ಲಿ ಜುಮ್ಮಾ ನಮಾಝಿನ ನಂತರ ಮಯ್ಯತ್ ನಮಾಝ್ ನಿರ್ವಹಿಸಲಾಯಿತು. ಅಲ್ ನಸೀಮ್ ದಫನಭೂಮಿಯಲ್ಲಿ ಇಂಡಿಯನ್ ಸೋಶಿಯಲ್ ಫಾರಂನ ಸದಸ್ಯರು ಮತ್ತು ಅವರ ಆಪ್ತರ ಸಮ್ಮುಖ ದಲ್ಲಿ ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನಿರ್ವಹಿಸಲಾಯಿತು.

ಅದೇ ರೀತಿ ಇಬ್ರಾಹಿಂ ಅನಾಜೆರವರು ಮತೀನ್ ಮತ್ತಿ ಸುಹೈಲ್‌ರವರೋಂದಿಗೆ ಮೃತರ ಕಂಪೇನಿಗೆ ನಿರಂತರ ಭೇಟಿ ನೀಡಿ ಬಾಕಿ ಇದ್ದ ಅವರ ಸಂಬಳವನ್ನು ಪಡೆದು ಅವರು ಸಂಭಂಧಿಗಳಿಗೆ ಹಸ್ತಾಂತರಿಸಿದರು. ಮತ್ತು ಹನ್ನೊಂದು ವರ್ಷದ ಸೇವೆಯ ಮೊತ್ತವನ್ನು ( Final Settlement) ಪಡೆಯಲು ಸಕಲ ವ್ಯವಸ್ತೆಯೂ ಮಾಡಲಾಯಿತು.

ಮೃತ ಸಯ್ಯದ್ ಹುಸೇನ ಅನ್ವರ್ ರವರು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫಾರಂನ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿಯು ಸಂತಾಪ ಸೂಚಿಸಿದೆ. ಇಂಡಿಯನ್ ಸೋಶಿಯಲ್ ಫಾರಂನ ಈ ಸತ್ಕಾರ್ಯಕ್ಕೆ ಮೃತರ ಸಂಬಂಧಿಗಳು ಕೃತಘ್ನತೆ ಸಲ್ಲಿಸಿದ್ದಾರೆ.

Comments are closed.