ಕರ್ನಾಟಕ

ವಿಜಯ ದಶಮಿ ಆಚರಣೆಯ ಹಿನ್ನೆಲೆ ಮತ್ತು ಮೊದಲು ದುರ್ಗಾದೇವಿಯ ಪೂಜೆ ಮಾಡಿದವರ ಬಗ್ಗೆ

Pinterest LinkedIn Tumblr

vijay_dashami_ustva

ನವರಾತ್ರಿಯ ಒಂಭತ್ತು ದಿನಗಳ ಉಪವಾಸದ ನಂತರ ಬರುವ ವಿಜಯ ದಶಮಿ ಹಬ್ಬ ನಮ್ಮೆಲ್ಲರ ನಾಡಹಬ್ಬ. ಜೊತೆಗೆ ಸಾಂಪ್ರದಾಯಕ ಹಬ್ಬ. ಭಾರತದ ಪ್ರಮುಖ ಹಬ್ಬವಾದ ವಿಜಯ ದಶಮಿಯ ಆಚರಣೆ ಕರ್ನಾಟಕದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ.

ಮೈಸೂರು, ಮಂಗಳೂರು ನಗರಗಳು ಈ ಸಂದರ್ಭದಲ್ಲಿ ಮದುವಣಗಿತ್ತಿಯಂತೆ ಸಿಂಗಾರಕೊಂಡಿರುತ್ತದೆ. ವಿಜಯದ ಸಂಕೇತವಾದ ವಿಜಯ ದಶಮಿಯ ಆಚರಣೆ ಅದರ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿದುಕೊಳ್ಳೋದು ಈ ಸಂದರ್ಭದಲ್ಲಿ ಸೂಕ್ತವೆನಿಸುತ್ತದೆ.

ವಿಜಯ ದಶಮಿ ದಿನದಂದು ಹತ್ತು ತಲೆಗಳ ರಾಕ್ಷಸ ರಾವಣನನ್ನು ರಾಮ ಕೊಂದು ರಾಜ್ಯವನ್ನು ಆತನ ತಮ್ಮ ವಿಭೀಷಣನಿಗೆ ಕೊಟ್ಟ ದಿನ. ರಾವಣನ ಬಂಧನದಲ್ಲಿದ್ದ ಸೀತೆಗೆ ಮುಕ್ತಿ ದೊರೆತು. ತನ್ನ ಪತಿ ರಾಮನೊಂದಿಗೆ ಸೇರಿದ ಶುಭದಿನ ಈ ವಿಜಯ ದಶಮಿ ಎಂದು ಹೇಳಲಾಗುತ್ತದೆ. ಅನ್ಯಾಯದ ವಿರುದ್ಧವಾಗಿ ಜಯಿಸಿದ ನ್ಯಾಯದ ಸಂಭ್ರಮದ ದಿನವೇ ಈ ವಿಜಯ ದಶಮಿ ಆಚರಣೆ

ದುರ್ಗಾ ಪೂಜೆ ಮೊದಲ ಮಾಡಿದವರಾರು ಗೊತ್ತೇ ?
ನವರಾತ್ರಿ ಮತ್ತು ದಸರಾ ಎಂದರೆ ಅದು ದುರ್ಗಾ ದೇವಿಯ ಆರಾಧನೆ ಕೂಡ ಹೌದು. ಈ ಆರಾಧನೆ ಅನಾದಿ ಕಾಲದಿಂದಲೂ ಇದೆ. ಅದೆಷ್ಟೋ ತಲೆಮಾರುಗಳು ಈ ದುರ್ಗಾ ಪೂಜೆಯನ್ನು ಮಾಡುತ್ತಾ ಬಂದಿದ್ದಾರೆ.

ನಾವೂ ಸಹ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದೇವೆ. ಈ ನವರಾತ್ರಿ ಉತ್ಸವದ ದುರ್ಗಾ ದೇವಿಯ ಆರಾಧನೆ ಹೇಗೆ ಪ್ರಾರಂಭವಾಯ್ತು? ಮೊದಲು ಯಾರು ದುರ್ಗಾ ದೇವಿಯನ್ನು ಪೂಜಿಸಿದ್ರು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಮೊಟ್ಟ ಮೊದಲ ಬಾರಿಗೆ ದುರ್ಗಾ ದೇವಿಯನ್ನು ಶ್ರೀರಾಮ ಪೂಜಿಸಿದನಂತೆ. ದುರ್ಗೆಯನ್ನು ಒಲಸಿಕೊಳ್ಳಲು, ದುರ್ಗೆಯ ಆಶೀರ್ವಾದ ಪಡೆಯಲು ದುರ್ಗಾ ಪೂಜೆ ಮಾಡಿದ. ರಾಮಾಯಣದಲ್ಲಿ ರಾವಣನ ವಿರುದ್ಧವಾಗಿ ರಾಮ ಕಾಳಗಕ್ಕೆ ನಿಲ್ಲುವ ಮುನ್ನ ದುರ್ಗಾ ಪೂಜೆಯನ್ನು ಮಾಡಿದ ಎಂದು ಪುರಾಣ ಹೇಳುತ್ತದೆ.

ಅತ್ತ ರಾಮ ಎದುರಾಳಿ ಲಂಕೆಯಲ್ಲಿದ್ದ ರಾವಣ ಕೂಡ ಅಷ್ಟೇ ಬಲಿಷ್ಠವಾಗಿದ್ದ, ರಾಮನನಿಗೆ ರಾವಣನ್ನು ಸೋಲಿಸೋದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿಯೇ ದೇವಿಯ ವರವನ್ನು ಪಡೆಯಲು ದುರ್ಗಾ ಪೂಜೆ ಮಾಡಿದ. ಆದ್ರೆ ರಾಮನಿಗೆ ಇನ್ನೂ ಆರು ತಿಂಗಳ ಕಾಲ ಕಾಯುಲು ಸಮಯವಿಲ್ಲದ ಕಾರಣ. ಅಂದರೆ ಅದು ಚೈತ್ರ ನವರಾತ್ರಿಯ ಕಾಲ ಆಗಿರಲಿಲ್ಲ. ನವರಾತ್ರ್ರಿ ಅಲ್ಲದ ಸಮಯದಲ್ಲಿ ದುರ್ಗಾ ಪೂಜೆಯನ್ನು ಮಾಡಿದ. ಇದರಿಂದಾಗಿಯೇ ದುರ್ಗಾ ಪೂಜೆಯನ್ನು `ಅಕಾಲ ಬೋಧನ’ (ಬೇರೆ ಋತುವಿನಲ್ಲಿ ಪೂಜೆ ಮಾಡಿರುವುದು ಎಂದು ಅರ್ಥ) ಕರೆಯಲಾಗುತ್ತದೆ.

ದೇವಿಯ ಪೂಜೆಗಾಗಿ 108 ಕಮಲದ ಹೂ ಹಾಗು 108 ದೀಪಗಳನ್ನು ಹಚ್ಚಿ ಪೂಜಿಸುವ ಪರಿ ಇದೆ. ಈ ಸಮಯದಲ್ಲಿ ಒಂದು ಕಮಲದ ಹೂವನ್ನು ರಾಕ್ಷಸನೊಬ್ಬ ತಿಳಿಯದೇ ಕದ್ದ ಕಾರಣ, ಪೂಜೆ ಸಂಪೂರ್ಣವಾಗಲಿಲ್ಲ. ಇದರಿಂದ ರಾಮನು ಕಮಲದ ಬದಲಿಗೆ ತನ್ನ ಕಣ್ಣಗಳನ್ನು ದೇವಿಗೆ ಅರ್ಪಿಸಲು ನಿರ್ಧರಿಸಿದ. ರಾಮನ ಈ ಭಕ್ತಿಗೆ ದೇವಿ ಮೆಚ್ಚಿ, ರಾಮನ ಮುಂದೆ ಪ್ರತ್ಯಕ್ಷಳಾಗಿ ವಿಜಶಾಲಿಯಾಗು ಎಂದು ಆಶೀರ್ವದಿಸಿದಳು.

ದುರ್ಗಾ ದೇವಿಯ ಆಶೀರ್ವಾದ ಪಡೆದ ರಾಮ, ರಾವಣನ ವಿರುದ್ಧ ಯುದ್ಧ ಮಾಡಿ ಗೆದ್ದ. ನವರಾತ್ರಿಯ ಹತ್ತನೇ ದಿನದಂದು ರಾವಣನ್ನು ರಾಮ ಸಂಹರಿಸಿದ. ಅದು ರಾಮನ ವಿಜಯದಶಮಿ ಆಯ್ತು. ಜೊತೆಗೆ ಇಡೀ ದೇಶಕ್ಕೆ ವಿಜಯದಶಮಿ ಆಯ್ತು. ಇದಕ್ಕಾಗಿಯೇ ಸಾಂಕೇತಿಕವಾಗಿ ದಸರಾದಂದು ರಾವಣನ ದೊಡ್ಡ ಪ್ರತಿಕೃತಿಯನ್ನು ದಹಿಸಿ ವಿಜಯದಶಮಿ ಆಚರಿಸಲಾಗುತ್ತದೆ. ಲಂಕೆಯ ಯುದ್ಧಪೂರ್ವದಲ್ಲಿ ರಾಮ ದುರ್ಗೆಯನ್ನು ಪೂಜಿಸಿದ. ಅದು ಈಗಲೂ ಮುಂದುವರೆದುಕೊಂಡು ಬಂದಿದೆ.

Comments are closed.