ಅಂತರಾಷ್ಟ್ರೀಯ

ಸುಂದರವಾದ ಮನೆಯೊಂದಿಗೆ ದ್ವೀಪವೂ ಮಾರಾಟಕ್ಕಿದೆ….ಬೆಲೆ ಮಾತ್ರ ಬರೋಬ್ಬರಿ 259 ಕೋಟಿ ರೂ.!

Pinterest LinkedIn Tumblr

 highland

ಎಲ್ಲರೂ ಮನೆ ಅಥವಾ ಭೂಮಿ ಮಾರಾಟಕ್ಕಿಡುವುದು ಸಾಮಾನ್ಯ. ಆದರೆ ಮೊಂಟಾಟನಾದ ಫ್ಲಾಥೀಡ್ ಸರೋವರದ ಮಧ್ಯದಲ್ಲಿರುವ ದ್ವೀಪವೊಂದನ್ನು ಈಗ ಮಾರಾಟಕ್ಕಿಡಲಾಗಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದೆ.

ಈ ಸರೋವರವು ಪ್ರಪಂಚದ ಅತ್ಯಂತ ಶುದ್ಧ ಸರೋವರಗಳಲ್ಲೊಂದಾಗಿದೆ. ಇದರ ನಡುವೆ ಇರುವ ಈ ದ್ವೀಪ 22 ಎಕರೆ ಇದ್ದು, ಗೆಸ್ಟ್ ಹೌಸ್ ಹಾಗೂ ಒಂದು ಸುಂದರ ಮನೆ ಹೊಂದಿದೆ. ದ್ವೀಪವನ್ನು ಈಗ ಮಾರಾಟಕ್ಕೆ ಇಡಲಾಗಿದ್ದು, ಇದರ ಬೆಲೆ ಬರೋಬ್ಬರಿ 259 ಕೋಟಿ ರೂ.! ಈ ದ್ವೀಪದ ಸೌಂದರ್ಯಕ್ಕೆ ಮಾರುಹೋಗಿ ಅನೇಕರು ಇದನ್ನು ಕೊಂಡುಕೊಳ್ಳಲು ಮುಂದೆ ಬಂದಿದ್ದರಾದರೂ, ಇದರ ಬೆಲೆ ಕೇಳಿ ಇದನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

2011ರಲ್ಲಿ ಇಲ್ಲಿ ಐಷಾರಾಮಿ ಮನೆ ನಿರ್ಮಾಣ ಮಾಡಲಾಗಿತ್ತು. ಮನೆಯಲ್ಲಿ ವಿಶೇಷವಾದ ಅಡುಗೆ ಮನೆ, ಸ್ನಾನಗೃಹ ಹಾಗೂ ಪಾರ್ಟಿ ಹಾಲ್ ವ್ಯವಸ್ಥೆ ಇದೆ. ಇಲ್ಲಿ ನಿರ್ವಣಗೊಂಡಿರುವ ಮನೆಗೆ ಅಲಂಕಾರಿಕ ವಸ್ತುಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ನೆಲಕ್ಕೆ ಕರಾರಾ ಮಾರ್ಬಲ್ಗಳನ್ನು ಬಳಕೆ ಮಾಡಲಾಗಿದೆ. ಬೋಟ್ಗಳನ್ನು ನಿಲ್ಲಿಸಲು ವಿಶಾಲ ಜೆಟ್ಟಿಯನ್ನು ನಿರ್ವಿುಸಲಾಗಿದೆ. ಈ ದ್ವೀಪವನ್ನು ಹೆಚ್ಚಾಗಿ ವಿಶೇಷ ಪಾರ್ಟಿಗಳಿಗೆ ಬಳಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಬಾಡಿಗೆ ನೀಡಿ ಅನೇಕ ವಿಶೇಷ ಪಾರ್ಟಿಗಳನ್ನು ಇಲ್ಲಿ ನಡೆಸಲಾಗುತ್ತದೆ.

Comments are closed.