ಕರ್ನಾಟಕ

ಗತಕಾಲದ ವೈಭವತೆಯನ್ನು ಇಡಿ ಜಗತ್ತಿಗೆ ಸಾರುವ ಸ್ಮಾರಕಗಳು

Pinterest LinkedIn Tumblr

historical_place_1

ಮಂಗಳೂರು: ಭಾರತದ ಸಂಸ್ಕೃತಿ ಸಂಪ್ರದಾಯಗಳು ಜಗತ್ತಿನಲ್ಲೆ ವಿಶೀಷ್ಟವಾಗಿರುವುದಲ್ಲದೆ ಪುರಾತನವಾದದ್ದೂ ಆಗಿದೆ. ಇದಕ್ಕೆ ಪೂರಕವೆಂಬಂತೆ ಹಲವು ಐತಿಹಾಸಿಕ ಹಾಗು ಪುರಾತನ ಸ್ಮಾರಕಗಳನ್ನು ಇಲ್ಲಿ ಕಾಣಬಹುದು.

ಪ್ರಾಚೀನ ಕಾಲದಲ್ಲಿ ನಿರ್ಮಿಸಲ್ಪಟ್ಟ ಈ ಭವ್ಯ ಸ್ಮಾರಕಗಳು ಇಂದಿಗೂ ಸದೃಢವಾಗಿ ಹೆಮ್ಮೆಯಿಂದ ಭೂಮಿಯ ಮೇಲೆ ಅತ್ಯಂತ ಸ್ಥಿರವಾಗಿ ನಿಂತಿದ್ದು ಗತಕಾಲದ ಭಾರತ ದೇಶದ ವೈಭವತೆಯನ್ನು ಇಡಿ ಜಗತ್ತಿಗೆ ಸಾರುತ್ತಿವೆ. ಅಂದಿನ ಕಾಲದಲ್ಲೆ ಭಾರತದಲ್ಲಿದ್ದ ವಾಸ್ತು ಶಿಲ್ಪಕಲೆಗೆ ನೇರ ಸಾಕ್ಷಿಯಾಗಿ ಈ ಸ್ಮಾರಕಗಳು ಇಂದಿಗೂ ಕಂಗೊಳಿಸುತ್ತಿವೆ. ಅಷ್ಟೆ ಅಲ್ಲ ಈ ಸ್ಮಾರಕಗಳು ಆ ಪ್ರದೇಶದ ಪ್ರಮುಖ ಹೆಗ್ಗುರುತಾಗಿಯೂ ಪ್ರವಾಸೋದ್ಯಮಕ್ಕೆ ಇಂಬು ನೀಡಿವೆ.

ಅಂದಿನ ರಾಜರುಗಳ ವೇಷ ಭೂಷಣ, ನಡೆ ನುಡಿ ಹೇಗಿತ್ತೆಂಬುದು ಕೇವಲ ಇತಿಹಾಸದಿಂದ ತರ್ಕಿಸಬಹುದಾದರೂ ನಿಖರವಾಗಿ ನಮಗಂತೂ ಗೊತ್ತಿಲ್ಲ. ಆದರೆ ಅವರು ನಿರ್ಮಿಸಿದ ಕೆಲವು ಅದ್ಭುತ ಸ್ಮಾರಕಗಳಿಗೆ ಭೇಟಿ ನೀಡಿದಾಗ, ಅದರ ಗಾಂಭೀರ್ಯ, ಸೌಂದರ್ಯವನ್ನು ಸವಿಯುತ್ತ ಆ ಕಾಲದ ಕಲ್ಪನೆಯ ಲೋಕಕ್ಕೆ ಜಾರುವುದಂತೂ ಖಂಡಿತ. ಇಂತಹ ಸ್ಮಾರಕಗಳು ಕೇವಲ ಭಾರತೀಯರಲ್ಲಿ ಮಾತ್ರವಲ್ಲದೆ ವಿದೇಶಿಯರಲ್ಲೂ ಕೂಡ ಬಹು ಹೆಸರುವಾಸಿಯಾಗಿವೆ. ಈ ಲೇಖನವು ನಾವು ಹೆಮ್ಮೆ ಪಡಬಹುದಾದ ಅಂತಹ ಕೆಲವು ಸ್ಮಾರಕಗಳ ಪರಿಚಯ ಮಾಡಿಸುತ್ತದೆ.

ವಿವೇಕಾನಂದ ಕಲ್ಲು ಬಂಡೆ: ತಮಿಳುನಾಡಿನ ಕನ್ಯಾಕುಮಾರಿ ಸಮುದ್ರ ತೀರದಿಂದ 400 ಮೀ ದೂರದಲ್ಲಿ ಸ್ಥಿತವಿರುವ ಈ ವಿವೇಕಾನಂದ ಬಂಡೆ ಸ್ಮಾರಕವು ಒಂದು ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದ್ದು, ಶ್ರೀ ಏಕನಾಥ ರಾನಡೆ ಅವರ ಮಾರ್ಗದರ್ಶನದಂತೆ 1970 ರಲ್ಲಿ ನಿರ್ಮಿಸಲಾಗಿದೆ

historical_place_2

ಗೋಲ ಗುಮ್ಮಟ: ಉತ್ತರ ಕರ್ನಾಟಕ ಬಿಜಾಪುರ ಜಿಲ್ಲೆಯ ಬಿಜಾಪುರ ನಗರದಲ್ಲಿ ಈ ಭವ್ಯ ಸ್ಮಾರಕವನ್ನು ಕಾಣಬಹುದು. ಎಲ್ಲರಿಗೂ ಚಿರಪರಿಚಿತವಾಗಿರುವ ಹೆಚ್ಚು ಕಡಿಮೆ ತಾಜ್ ಮಜಲ್ ನಷ್ಟೆ ಬೃಹತ್ ಆಗಿರುವ ಈ ಸ್ಮಾರಕ ಗುಮ್ಮಟವು ತನ್ನದೆ ಆದ ವೈಶೀಷ್ಟ್ಯತೆಯಿಂದ ಕೂಡಿದೆ. 47.5 ಮೀ ಉದ್ದವುಳ್ಳ ಚೌಕಾಕಾರದ ಕಟ್ಟಡದ ಮೇಲೆ 44 ಮೀ ವ್ಯಾಸವುಳ ಗುಮ್ಮಟವನ್ನು ನಿರ್ಮಿಸಲಾಗಿದೆ. ಈ ಸ್ಮಾರಕದ ಒಟ್ಟಾರೆ ಎತ್ತರವು 51 ಮೀ. ನಷ್ಟಿದೆ. ಈ ಸ್ಮಾರಕದ ವಿಶೇಷತೆಯೆಂದರೆ ಇದರಲ್ಲಿ ವ್ಹಿಸ್ಪರಿಂಗ್ ಗ್ಯಾಲರಿಯೊಂದಿದ್ದು ಗೋಡೆಗಳ ಒಂದು ಬದಿಯಿಂದ ಮಾತನಾಡಿದಾಗ ಅದರ ಇನೊಂದು ಬದಿಯಲ್ಲಿ ಧ್ವನಿಯನ್ನು ಆಲಿಸಬಹುದಾಗಿದೆ. ಅಲ್ಲದೆ ಒಂದು ಬಾರಿ ಚಪ್ಪಾಳೆ ಹೋಡೆದರೆ ಏಳು ಬಾರಿ ಅದರ ಪ್ರತಿಧ್ವನಿಯನ್ನು ಆಲಿಸಬಹುದು.

historical_place_3

ಕುತುಬ್ ಮಿನಾರ್: 73 ಮೀ. ಎತ್ತರವುಳ್ಳ ಕುತುಬ್ ಮಿನಾರ್ ಭಾರತದ ಅತಿ ಎತ್ತರದ ಪುರಾತನ ಇಸ್ಲಾಮಿಕ್ ಸ್ಮಾರಕವಾಗಿದೆ. ದೇಶದ ರಾಜಧಾನಿ ದೆಹಲಿ ಯಲ್ಲಿರುವ ಈ ಸ್ಮಾರಕವು ದೆಹಲಿಯ ಒಂದು ಪ್ರಮುಖ ಹೆಗ್ಗುರುತಾಗಿದೆ. ಬುಡದಲ್ಲಿ 14.3 ಮೀ. ವ್ಯಾಸ ಹೊಂದಿದ್ದು ತುದಿಯಲ್ಲಿ 2.7 ಮೀ ಗಳಷ್ಟು ವ್ಯಾಸವನ್ನು ಹೊಂದಿರುವ ಈ ಸ್ಮಾರಕವು 1192 ರಲ್ಲಿ ಕುತುಬ್ ಉದ್ದಿನ್ ಐಬಕ್ ನಿಂದ ನಿರ್ಮಿಸಲ್ಪಟ್ಟಿದೆ.

historical_place_4

ಗೇಟ್ ವೇ ಆಫ್ ಇಂಡಿಯಾ: ಗೇಟ್ ವೇ ಆಫ್ ಇಂಡಿಯಾವು ಮುಂಬೈ ಮಹಾನಗರದ ಒಂದು ಭವ್ಯ ಹಾಗು ಪ್ರಮುಖ ಹೆಗ್ಗುರುತಾಗಿದೆ. ಬ್ರಿಟೀಷ್ ಮಹಾರಾಜ ಐದನೆಯ ಕಿಂಗ್ ಜಾರ್ಜ್ ಹಾಗು ರಾಣಿ ಮೇರಿಯು ಭಾರತಕ್ಕೆ ಭೇಟಿ ನೀಡಿದ ಗೌರವಾರ್ಥವಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಮುಂಬೈಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಇದೊಂದು ಗುರುತರವಾದ ಪ್ರವಾಸಿ ಆಕರ್ಷಣೆಯಾಗಿದೆ.

historical_place_5

ಗೊಮ್ಮಟೇಶ್ವರ ಪ್ರತಿಮೆ: ಕರ್ನಾಟಕದ ಬೆಂಗಳೂರಿನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಶ್ರವಣಬೆಳಗೊಳ ಎಂಬಲ್ಲಿ ಏಕಶಿಲೆಯಲ್ಲಿ ಕೆತ್ತಲಾದ ಈ ಭವ್ಯ ಪ್ರತಿಮೆಯನ್ನು ಕಾಣಬಹುದು. ಜೈನ ಧರ್ಮದವರಿಗೆ ಪವಿತ್ರ ಸಂತನಾಗಿರುವ ಗೊಮ್ಮಟೇಶ್ವರನ ಈ ವಿಗ್ರಹವು ಬೆಟ್ಟದ ತುದಿಯ ಮೇಲೆ ನೆಲೆಸಿದ್ದು ಸಾವಿರಾರು ವರ್ಷಗಳಿಂದ ಈ ಕೇಂದ್ರವು ಒಂದು ಪವಿತ್ರ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಈ ಪ್ರತಿಮೆಗೆ ಮಹಾಮಸ್ತಕಾಭಿ ಷೇಕವನ್ನು ಮಾಡಲಾಗುತ್ತದೆ.ಇದರ ಎತ್ತರ ಸುಮಾರು 56 ಅಡಿಗಳು.

historical_place_6

ಹುಮಾಯೂನ್ ಗೋರಿ: ಉರ್ದು ಭಾಷೆಯಲ್ಲಿ ಹುಮಾಯೂನ್ ಕಾ ಮಕ್ಬರಾ ಎಂದು ಕರೆಯಲ್ಪಡುವ ಹುಮಾಯೂನಿನ ಈ ಭವ್ಯ ಸಮಾಧಿ ಸ್ಮಾರಕವು ಅವನ ಮೊದಲ ಹೆಂಡತಿಯಾದ ಬೇಗಾ ಬೇಗಂ ಳಿಂದ 1569-70 ರಲ್ಲಿ ನಿರ್ಮಿಸಲ್ಪಟ್ಟಿದೆ. ಇದು ಭಾರತದ ಮೊದಲ ಉದ್ಯಾನವಿರುವ ಸಮಾಧಿಯಾಗಿದೆ. ದೆಹಲಿಯ ನಿಜಾಮುದ್ದಿನ್ ಪ್ರದೇಶದ ಪೂರ್ವಕ್ಕೆ ಈ ಸಮಾಧಿ ಸ್ಮಾರಕವನ್ನು ಕಾಣಬಹುದು. ಭೇಟಿ ನೀಡಿದಾಗ ಇದರ ಭವ್ಯ ವಾಸ್ತುಶಿಲ್ಪವು ಅನಾವರಣಗೊಳ್ಳುತ್ತದೆ.

historical_place_7

ಇಂಡಿಯಾ ಗೇಟ್: ಮೊದಲ ಜಾಗತಿಕ ಯುದ್ಧದಲ್ಲಿ ಬ್ರಿಟೀಷ್ ಸೆನೆಯ ಪರವಾಗಿ ಹೋರಾಡಿ ಪ್ರಾಣ ತ್ಯಜಿಸಿದ ಸುಮಾರು 70,000 ಭಾರತೀಯ ಯೋಧರ ಗೌರವಾರ್ಥವಾಗಿ, ದೆಹಲಿಯ ರಾಜ್ ಪಥ್ ನಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಅಲ್ಲದೆ ಈ ಸ್ಮಾರಕದಲ್ಲಿ 1909 ರಲ್ಲಿ ಅಫಘಾನಿಸ್ತಾನದೊಂದಿಗೆ ನಡೆದ ಕದನದಲ್ಲಿ ಮಡಿದ 13,516 ಬ್ರಿಟೀಷ್ ಹಾಗು ಭಾರತೀಯ ಯೋಧರ ಹೆಸರುಗಳನ್ನು ದಾಖಲಿಸಲಾಗಿದೆ.

historical_place_8

ಸಾಂಚಿ ಸ್ತೂಪ: ಸಾಂಚಿ ಸ್ತೂಪವು ಭಾರತದ ಅತಿ ಪುರಾತನ ಕಲ್ಲಿನ ರಚನೆಯಾಗಿದೆ. ಅಶೋಕ ಚಕ್ರವರ್ತಿಯಿಂದ ಸುಮಾರು ಮೂರನೆಯ ಶತಮಾನದಲ್ಲಿ ಇದು ಸ್ಥಾಪಿಸಲ್ಪಟ್ಟಿದೆ. ಮಧ್ಯ ಪ್ರದೇಶದ ರಾಯಸೇನ್ ಜಿಲ್ಲೆಯ ಸಾಂಚಿ ಪಾಟಣದಲ್ಲಿ ಈ ಸ್ತೂಪವನ್ನು ಕಾಣಬಹುದು.

historical_place_9

ಹವಾ ಮಹಲ್: ಜೈಪುರ್ ಎಂದರೆ ಸಾಕು ಹವಾ ಮಹಲ್ಲಿನ ಚಿತ್ರಣವು ಕಣ್ಣಿನ ಪರದೆಯ ಮೇಲೆ ಮೂಡೇ ಬೀಡುತ್ತದೆ. ಅಷ್ಟೊಂದು ಪ್ರಸಿದ್ಧಿ ಪಡೆದಿದೆ ಜೈಪುರಿನ ಈ ಪುರಾತನ ಅರಮನೆ ಸ್ಮಾರಕ. 1799 ರಲ್ಲಿ ಮಹಾರಾಜ ಸವಾಯ್ ಪ್ರತಾಪ್ ಸಿಂಗ್ ರಿಂದ ಈ ಅರಮನೆಯು ನಿರ್ಮಿಸಲ್ಪಟ್ಟಿದೆ. ಗಾಳಿಯ ಅರಮನೆ ಎಂಬ ಅರ್ಥ ಕೊಡುವ ಈ ಅರಮನೆಯು ಜೈಪುರಿನ ಪ್ರಮುಖ ಹೆಗ್ಗುರುತಾಗಿದೆ. ನೋಡಲು ಅತ್ಯಂತ ನಯನ ಮನೋಹರವಾಗಿ ಇದು ಗೋಚರಿಸುತ್ತದೆ.

Mysore_Palace1

ಮೈಸೂರು ಅರಮನೆ: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಹೆಗ್ಗುರುತಾಗಿದೆ ಈ ವೈಭವದ ಅರಮನೆ. ಭಾರತದಲ್ಲಿ ಕಂಡುಬರುವ ಬೃಹತ್ ಅರಮನೆಗಳ ಪೈಕಿ ಒಂದಾಗಿರುವ ಈ ಅರಮನೆಯಲ್ಲಿ ಹಲವು ವಾಸ್ತುಶಿಲ್ಪ ಶೈಲಿಗಳು ಸಮ್ಮಿಳಿತಗೊಂಡಿವೆ.

historical_place_10

ಚಾರ್ ಮಿನಾರ್: ಭಾರತದ ಮತ್ತೊಂದು ಹೆಮ್ಮೆಯ ಐಟಿ ಸಿಟಿಯಾದ ಹೈದರಾಬಾದಿನಲ್ಲಿರುವ ಈ ಭವ್ಯ ಸ್ಮಾರಕ ಮಿನಾರವು 1591 ರಲ್ಲಿ ಕುಲಿ ಕುತುಬ್ ಶಾನಿಂದ ನಿರ್ಮಿಸಲ್ಪಟ್ಟಿದೆ. ಪ್ರಸ್ತುತ ಹೈದರಾಬಾದಿನ ಪ್ರಮುಖ ಹೆಗ್ಗುರುತಾಗಿರುವ ಚಾರ್ ಮಿನಾರ್ ಅನ್ನು ಅಂದು ಪ್ಲೇಗ್ ರೋಗವು ನಿಯಂತ್ರಣಕ್ಕೆ ಬಂದುದರ ವಿಜಯೋತ್ಸವವಾಗಿ ನಿರ್ಮಿಸಲಾಯಿತು.

historical_place_11

ಸೆಲ್ಯೂಲರ್ ಜೈಲ್: ಅಂಡಮಾನ್ ನಲ್ಲಿರುವ ಈ ಒಂದು ಪ್ರ(ಕು)ಖ್ಯಾತ ಸೆರೆಮನೆಯ ಹೆಸರನ್ನು ಕೇಳಿದಾಗ ಇಂದಿಗೂ ಒಂದು ರೀತಿಯ ದುಗುಡ ಉಂಟಾಗುವುದು ಸಹಜ. ಕಾಲಾ ಪಾನಿ ಎಂತಲೆ ಪ್ರಸಿದ್ಧಿ ಪಡೆದಿದ್ದ ಈ ಕಾರಾಗೃಹಕ್ಕೆ ಭೇಟಿ ನೀಡಿದಾಗ ಅಂದಿನ ಸಮಯದಲ್ಲಿ ಈ ಕಾರಾಗೃಹವಾಸಿಗಳು ಪಟ್ಟ ವೇದನೆ, ಕಷ್ಟಗಳ ಒಂದು ಚಿತ್ರಣವು ಮನದಲ್ಲಿ ಮೂಡದೆ ಇರಲಾರದು. ಪ್ರಸ್ತುತ ಇಂದು ಇದು ಪ್ರಸಿದ್ಧ ಪ್ರವಾಸಿ ಸ್ಮಾರಕವಾಗಿದೆ.

Taj mahal

ತಾಜ್ ಮಹಲ್: ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಪ್ರೇಮ ಸ್ಮಾರಕವೆಂದೆ ಜನಪ್ರಿಯವಾಗಿದೆ. ಶ್ವೇತ ವರ್ಣದ ಅಮೃತಶಿಲೆಯನ್ನು ಬಳಸಿ ನಿರ್ಮಿಸಲಾದ ಈ ಭವನವು ಉತ್ಕೃಷ್ಟ ಮಟ್ಟದ ವಾಸ್ತು ಶಿಲ್ಪ ಶೈಲಿಯನ್ನು ಹೊಂದಿದೆ. ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಲ್ಲಿ ಈ ಸ್ಮಾರಕವು ಅತ್ಯಂತ ಹೆಸರುವಾಸಿಯಾಗಿದೆ. ಶಹಜಹಾನನು ತನ್ನ ಮುದ್ದಿನ ಹೆಂಡತಿ ಮಮ್ತಾಜ್ ಳ ನೆನಪಿನಾರ್ಥವಗಿ ಈ ಸ್ಮಾರಕವನ್ನು ನಿರ್ಮಿಸಿದ್ದ.

historical_place_12

ವಿಕ್ಟೋರಿಯಾ ಮೆಮೋರಿಯಲ್: ಭಾರತದಲ್ಲಿ ಬ್ರಿಟೀಷ್ ಆಡಳಿತವು ಉತ್ತುಂಗದ ಸ್ಥಿತಿಯಲ್ಲಿದ್ದಾಗ ಅದರ ನೆನಪಿನಾರ್ಥವಾಗಿ ನಿರ್ಮಿಸಲಾದ ಭವನವೆ ವಿಕ್ಟೋರಿಯಾ ಮೆಮೋರಿಯಲ್. ಕೊಲ್ಕತ್ತಾ ನಗರದ ಪ್ರಮುಖ ಹೆಗ್ಗುರುತಾಗಿರುವ ಈ ಭವನವು ಲಾರ್ಡ್ ಕರ್ಜನ್ ನ ಕನಸಾಗಿದ್ದರೂ ಸಹ ಹೆಸರಾಂತ ವಾಸ್ತುಶಿಲ್ಪಿಯಾದ ಸರ್ ವಿಲಿಯಮ್ ಎಮರ್ಸನ್ ರವರು ಇದನ್ನು ವಿನ್ಯಾಸಗೊಳಿಸಿದ್ದಾರೆ.

Comments are closed.