ಮುಂಬೈ

18 ತಿಂಗಳ ಬಾಲೆಯ ಅದ್ಭುತಾ ಸಾಧನೆ.

Pinterest LinkedIn Tumblr

adhika_bale_achvment

ನಾಗ್ಪುರ್ : 26 ದೇಶಗಳ ಕರೆನ್ಸಿಗಳನ್ನು, ವಿಶ್ವದ ಏಳು ಅದ್ಭುತಗಳನ್ನು ಗುರುತಿಸಬಲ್ಲ, ಪ್ರಾಣಿಗಳ ಹೆಸರನ್ನು ಇಂಗ್ಲಿಷ್‌ನಿಂದ ಮರಾಠಿಗೆ ಭಾಷಾಂತರಿಸಬಲ್ಲ ಹದಿನೆಂಟು ತಿಂಗಳು ಅದ್ಭುತ ಬಾಲಕಿ ಸಾಧಿನೆಯ ಕಂಡಿರಾ…

ಸಾಮಾನ್ಯರಿಗೆ ಅಸಾಧ್ಯವಾದ್ದನ್ನು ಸಾಧಿಸಿರುವ ಈ ಅದ್ಭುತ ಬಾಲೆಯ ಹೆಸರು ಅದ್ವಿಕಾ ಬಾಲೆ. ಬಾಲೆಯ ಸಾಮರ್ಥ್ಯದ ಬಗ್ಗೆ ತಾಯಿ ಅಸವರಿ ಬಾಲೆ ಅವರಿಗೇ ಅಪಾರನಂಬಿಕೆ. ಏಕೆಂದರೆ ಪುಟ್ಟ ಮಗು ಮಾತನಾಡಲು ಆರಂಭಿಸಿದ್ದೇ ಕಳೆದ ತಿಂಗಳು. ಮಗುವಿಗೆ ಆರು ತಿಂಗಳಿದ್ದಾಗಲೇ, ಮಗುವಿಗೆ ಹಲವು ಮಾಹಿತಿಗಳನ್ನು ತಾಯಿ ಓದಿ ಹೇಳುತ್ತಿದ್ದರು. ಹರಿದಾಡಲು ಆರಂಭಿಸಿದಾಗ ಅಕ್ಷರ, ಹಣ್ಣು ಹಾಗೂ ಪ್ರಾಣಿಗಳ ಪಟ್ಟಿ ತೋರಿಸಿದ್ದರು. “ಎಂಟು ತಿಂಗಳಾದಾಗ ಮಗುವಿಗೆ ದೇಶಗಳ ಬಗ್ಗೆ, ಕರೆನ್ಸಿಗಳ ಬಗ್ಗೆ, ವಿಶ್ವದ ಅದ್ಭುತಗಳ ಬಗ್ಗೆ ಬೋಧಿಸುತ್ತಿದ್ದೆ.

ಹತ್ತು ತಿಂಗಳಲ್ಲಿ ಆಕೆ ದೇಹದ ಭಾಗಗಳನ್ನು ಗುರುತಿಸುತ್ತಿದ್ದಳು” ಎಂದು ಮಗುವಿನ ತಂದೆ ಸಾಗರ್ ಹಾಗೂ ಅಸವರಿ ಹೇಳುತ್ತಾರೆ. ತಂದೆ- ತಾಯಿ ಸಿದ್ಧಪಡಿಸಿದ ದೊಡ್ಡ ಪ್ರಶ್ನಾವಳಿಯಲ್ಲಿ ಸುಮಾರು 2 ಗಂಟೆ ಕಾಲ 100 ಪ್ರಶ್ನೆಗಳನ್ನು ಅರಳು ಹುರಿದಂತೆ ಉತ್ತರಿಸಿದ ಬಾಲೆ ಎರಡು ಬಾರಿ ಮಾತ್ರ ತಡವರಿಸಿದಳು.

Comments are closed.