ಕರ್ನಾಟಕ

ಬಣ್ಣ ಬಣ್ಣದ ಲೋಕದಲ್ಲಿ ಕೂದಲ ಬಣ್ಣದ ಬಗೆಗಿನ ಮುಂಜಾಗ್ರತೆ ಕ್ರಮ

Pinterest LinkedIn Tumblr

hair

ಮಂಗಳೂರು : ಯುವ ಜನರನ್ನು ನೋಡಿದರೆ ಪ್ರತಿಯೊಬ್ಬರ ಕೂದಲು ಒಂದೊಂದು ಬಣ್ಣದ್ದಾಗಿರುತ್ತದೆ. ಕೂದಲು ಕಡುಕಪ್ಪು ಇರಬೇಕೆಂದು ಹಿಂದಿನವರು ಬಯಸುತ್ತಿದ್ದಾರೆ. ಆದರೆ ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬರೂ ತಮ್ಮ ಇಷ್ಟದಂತೆ ಕೂದಲಿಗೆ ಬಣ್ಣ ಹಚ್ಚಿಸಿಕೊಳ್ಳುತ್ತಿದ್ದಾರೆ.

ಕೆಲವರು ಮನೆಯಲ್ಲಿಯೇ ಬಣ್ಣ ಹಚ್ಚಿಕೊಂಡರೆ ಇನ್ನು ಕೆಲವರು ಸಲೂನ್ ಗೆ ಹೋಗಿ ಅಲ್ಲಿ ಕೂದಲಿಗೆ ಬಣ್ಣ ಬಳಿಸಿಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಇದೊಂದು ಫ್ಯಾಷನ್ ಆಗಿಬಿಟ್ಟಿದೆ. ಯುವಜನರಲ್ಲಿ ಇದು ಟ್ರೆಂಡ್ ಆಗಿದೆ. ಹಾಲಿವುಡ್ ಹಾಗೂ ಬಾಲಿವುಡ್ನ ನಟರ ಫ್ಯಾಷನ್ ಇದಕ್ಕೆ ಕಾರಣವಾಗಿರಬಹುದು…! ಕೂದಲು ಬಿಳಿ ಆದವರೂ ಕಪ್ಪು ಬಣ್ಣಕ್ಕೆ ಮೊರೆ ಹೋಗುತ್ತಾರೆ.

ಆದರೆ ಬಣ್ಣ ಹಚ್ಚಿಕೊಳ್ಳುವಾಗ ಕೆಲವೊಂದು ವಿಷಯಗಳನ್ನು ಗಮನಿಸಬೇಕಾಗುತ್ತದೆ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕಾದ ಕೆಲವೊಂದು ಅಂಶಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಇದನ್ನು ಓದಿಕೊಂಡ ಬಳಿಕ ತಲೆಗೆ ಬಣ್ಣ ಹಚ್ಚಲು ಮುಂದಾಗಿ….

ಸಲ್ಫೇಟ್ ಇಲ್ಲದೆ ಇರುವ ಬಣ್ಣ ಹಚ್ಚಿದ ಕೂದಲಿಗೆ ಮಾಡಿರುವಂಹತ ಶಾಂಪೂವನ್ನು ಆಯ್ಕೆ ಮಾಡಿಕೊಳ್ಳಿ. ಅತಿಯಾಗಿ ಶಾಂಪೂ ಹಾಕಿಕೊಳ್ಳಬೇಡಿ. ಇದರಿಂದ ಬಣ್ಣ ಮಾಸಬಹುದು ಅಥವಾ ಕೂದಲಿನ ನೈಸರ್ಗಿಕ ಎಣ್ಣೆಯನ್ನು ಶಾಂಪೂ ಹೀರಿಕೊಳ್ಳಬಹುದು.

ಬಣ್ಣ ಹಾಕಿದ ಕೂದಲಿಗೆ ತಯಾರಿಸಿರುವಂತಹ ವಿಶೇಷವಾದ ಕಂಡೀಷನರ್ ಅನ್ನು ಬಳಸಿಕೊಳ್ಳಿ. ಇದರಲ್ಲಿ ಇತರ ಕಂಡೀಷನರ್ ಗಿಂತ ಹೆಚ್ಚಿನ ಪೋಷಕಾಂಶವಿರುತ್ತದೆ. ಬಣ್ಣ ಹಚ್ಚಿನ ಕೂದಲಿಗೆ ಇದು ತುಂಬಾ ಒಳ್ಳೆಯದು.

ರಾಸಾಯನಿಕ ಕಂಡೀಷನರ್ ಗಿಂತಹ ನೈಸರ್ಗಿಕವಾಗಿ ಸಿಗುವ ಕಂಡೀಷನರ್ ಬಳಸಿದರೆ ತುಂಬಾ ಒಳ್ಳೆಯದು. ಮಯೋನಿಸ್, ಮೊಸರು, ಅಲೋವೆರಾ ಮತ್ತು ತೆಂಗಿನ ಎಣ್ಣೆ ಅಥವಾ ಆಲೀವ್ ತೈಲವನ್ನು ಬಳಸಬಹುದು.

ವಾರದಲ್ಲಿ ಒಂದು ದಿನವಾದರೂ ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಇದರಿಂದ ಕೂದಲಿನಲ್ಲಿ ತೇವಾಂಶವು ಉಳಿದುಕೊಳ್ಳುವುದು. ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದರಿಂದ ರಕ್ತಸಂಚಲನ ಉತ್ತಮವಾಗಿ ಕೂದಲಿನ ಬೆಳವಣಿಗೆಗೆ ನೆರವಾಗುವುದು.

ಕೂದಲಿಗೆ ಬಣ್ಣ ಹಾಕಿದಾಗ ಬಿಸಿ ನೀರನ್ನು ಸ್ನಾನಕ್ಕೆ ಬಳಸಬೇಡಿ. ಬಿಸಿ ನೀರನ್ನು ಬಳಸಿದರೆ ಅದು ಕೂದಲಿಗೆ ಹಾಕಿದ ಬಣ್ಣವು ಮಾಸುವಂತೆ ಮಾಡುತ್ತದೆ. ಕೂದಲನ್ನು ತೊಳೆಯಲು ಉಗುರು ಬೆಚ್ಚಗಿನ ನೀರು ಅಥವಾ ತಣ್ಣಗಿನ ನೀರು ಬಳಸಿ.

Comments are closed.