ಕರಾವಳಿ

ಪವರ್ ಲಿಫ್ಟಿಂಗ್: ವಿಶ್ವನಾಥ ಗಾಣಿಗರಿಗೆ 2 ಚಿನ್ನ, ತಲಾ 1 ಬೆಳ್ಳಿ, ಕಂಚು

Pinterest LinkedIn Tumblr

ಕುಂದಾಪುರ: ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ನಡೆದ 42ನೇ ಸೀನಿಯರ್ ನ್ಯಾಶನಲ್ ಪವರ್ ಲಿಫ್ಟಿಂಗ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕುಂದಾಪುರ ತಾಲೂಕಿನ ಬಾಳಿಕೆರೆಯ ದೇಹದಾರ್ಢ್ಯ ಪಟು ವಿಶ್ವನಾಥ ಭಾಸ್ಕರ ಗಾಣಿಗ ಅವರು 83 ಕೆಜಿ ವಿಭಾಗದಲ್ಲಿ 2 ಚಿನ್ನದ ಪದಕ ಹಾಗೂ 1 ಬೆಳ್ಳಿ, 1 ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

vishwanath-ganiga_power-lifting_udupi

ಈಗಾಗಲೇ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್‌ನಲ್ಲಿ ಸ್ಫರ್ಧಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಈತ ಬಾಳಿಕೆರೆಯ ಭಾಸ್ಕರ ಗಾಣಿಗ ಮತ್ತು ಶ್ರೀಮತಿ ಪದ್ಮಾವತಿ ಗಾಣಿಗ ಅವರ ಪುತ್ರರಾಗಿದ್ದಾರೆ. ಬೆಂಗಳೂರಿನ ಸೂಪರ್ ಬಾಡೀಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Comments are closed.