Messages

ಕ್ಯಾಲ್ಸಿಯಂ ಕೊರತೆ ನಿವಾರಿಸಲು ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದ ಆಸನಗಳು

Pinterest LinkedIn Tumblr

yogaaaa

ಮೂವತ್ತೈದು ವಯಸ್ಸಿನ ನಂತರ ಮೂಳೆಗಳ ಶಕ್ತಿ ಕುಂದಲು ತೊಡಗಿ ಕ್ಯಾಲ್ಸಿಯಂ ಮಾತ್ರೆಗಳ ಸೇವನೆ ಆರಂಭವಾಗುತ್ತದೆ. ಆದರೆ ಕೆಲವು ಆಸನಗಳನ್ನು ಮಾಡುವುದರಿಂದ ದೇಹದಲ್ಲಿ ಕ್ಯಾಲ್ಷಿಯಂ ಪ್ರಮಾಣ ಹೆಚ್ಚಾಗುತ್ತದೆ. ಪರಿಣಾಮಕಾರಿ ಫಲಿತಾಂಶಕ್ಕೆ ಕೆಲ ಆಸನಗಳನ್ನು ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಮಾಡಿ.

ಈ ಆಸನಗಳನ್ನು ಕಾಟನ್ ಬಟ್ಟೆ ಧರಿಸಿ ಪ್ರಶಾಂತ ಮನಸ್ಸಿನಿಂದ ಮಾಡಿ. ಇವು ದೇಹದಲ್ಲಿನ ಸ್ನಾಯು ಹಾಗು ಮೂಳೆಗಳ ಆರೋಗ್ಯಕ್ಕೆ ಉತ್ತಮ. ಸೂರ್ಯನಿಂದ ವಿಟಮಿನ್ ಡಿ ಯನ್ನು ಸಂಪೂರ್ಣವಾಗಿ ಪಡೆಯಬಹುದು. ಇದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ.

ಹಿತ್ತಾಳೆ ಅಥವಾ ತಾಮ್ರದ ಬಟ್ಟಲಿನಲ್ಲಿ ನೀರು ತುಂಬಿಕೊಂಡು ಸೂರ್ಯನ ಕಿರಣಗಳಿಗೆ ಎದುರಾಗಿ ನಿಂತು, ನೀರನ್ನು ಜಲಪಾತದ ಹಾಗೆ ಮೇಲಿಂದ ಸುರಿಯಿರಿ. ಸೂರ್ಯ ರಶ್ಮಿ ನೀರಿನ ಮೂಲಕ ದೇಹವನ್ನು ಸ್ಪರ್ಶಿಸುವಂತೆ ಎಚ್ಚರ ವಹಿಸಿ. ಹೀಗೆ ಮೂರು ಸುತ್ತು ಮಾಡಿದರೆ ಉತ್ತಮ.

ಅಶ್ವ ಸಂಚಲ ಆಸನ : ಮೊದಲು ಎರಡು ಕಾಲುಗಳನ್ನು ಜೋಡಿಸಿ ನಿಲ್ಲಿ. ಬಳಿಕ ನಿಧಾನವಾಗಿ ಉಸಿರು ಎಳೆಯುತ್ತ ಕೆಳಗೆ ಬಗ್ಗಿ ಎರಡು ಕೈಗಳನ್ನು ಕಾಲಿಗೆ ತಾಗಿಸಿ. ನಂತರ ಎರಡು ಕೈಗಳನ್ನು ಮೇಲಕ್ಕೆತ್ತಿ ನಮಸ್ಕಾರ ಮುದ್ರಾದಲ್ಲಿ ಇಟ್ಟು, ಎಡ ಗಾಲನ್ನು ಹಿಂದಕ್ಕೆ ಸರಿಸಿ ಹೀಗೆ 30 ಸೆಕೆಂಡುಗಳ ಕಾಲ ಇರಿ. ನಂತರ ಎಡಗಾಲನ್ನು ಮೊದಲಿನ ಸ್ಥಾನಕ್ಕೆ ತಂದು ಬಲಗಾಲನ್ನು ಹಿಂದಕ್ಕೆ ಇಡಿ. ಹೀಗೆ ಎರಡು ಬಾರಿ ಮಾಡಿ.

ಉಚಿತ ಪ್ರಸಾರಿತ ಕೋನಾಸನಂ : ಚಿತ್ರದಲ್ಲಿ ತೋರಿಸಿರುವಂತೆ ಮೊದಲು ಕುರ್ಚಿಯೊಂದನ್ನು ಸೂಕ್ತವಾದ ಸ್ಥಳದಲ್ಲಿಡಿ. ನಿಧಾನವಾಗಿ ಅದರ ಮೇಲೆ ನಿಂತು ಬಲ ಮೊಣಕೈಯನ್ನು ಇಡಿ. ಎಡಗಾಲು ಹಾಗು ಎಡಗೈಯನ್ನು ನೇರವಾಗಿಡಿ. ನಂತರ ಎಡಗೈಯನ್ನು ಮೇಲಕ್ಕೆತ್ತಿ ಲಂಬಕೋನಾಕಾರದಲ್ಲಿಡಿ. ಬಲಗಾಲು ನೆಲದ ಮೇಲಿರಲಿ. ಈ ಆಸನದಲ್ಲಿ ಕನಿಷ್ಠ ೩೦ ಸೆಕೆಂಡು ಇರಿ. ನಂತರ ಇದೇ ರೀತಿ ಎಡಬದಿಯಲ್ಲಿ ಮಾಡಿ. ಹೀಗೆ ಮೂರು ಬಾರಿ ಮಾಡಿ.

ಮಕರಾಸನಂ : ನೆಲಕ್ಕೆ ಮುಖ ಮಾಡಿ ಮಲಗಿ ಎರಡು ಅಂಗೈಗಳಿಂದ ಮುಖ ಹಿಡಿದುಕೊಳ್ಳಿ. ಎರಡು ಕಾಲುಗಳು ಒಂದಕ್ಕೊಂದು ಸನಿಹದಲ್ಲಿರಲಿ. ಬಳಿಕ ಮುಂಗಾಲನ್ನು ಅಗಲಿಸಿ. ಇದೇ ಸ್ಥಿತಿಯಲ್ಲಿ 3 ನಿಮಿಷ ಇರಿ.

ಶಲಭಾಸನ : ಹೊಟ್ಟೆ ಕೆಳಗೆ ದಿಂಬನ್ನು ಇಟ್ಟುಕೊಂಡು ಈ ಆಸನವನ್ನು ಸುಲಭವಾಗಿ ಮಾಡಬಹುದು. ಎರಡು ಕಾಲುಗಳು ಒಂದಕ್ಕೊಂದು ಹತ್ತಿರವಿರಲಿ. ಎರಡು ಭುಜಗಳು ಸಮನಾಂತರವಾಗಿರಲಿ. ನಂತರ ಉಸಿರು ಎಳೆದುಕೊಳ್ಳುತ್ತ ಎರಡು ಕೈಕಾಲುಗಳನ್ನು ಗಾಳಿಯಲ್ಲಿ ಮೇಲಕ್ಕೆತ್ತಿ. ಹೀಗೆ ೩೦ ಸೆಕೆಂಡು ಇರಬೇಕು. ಹೀಗೆ ೬ ಬಾರಿ ಮಾಡಿ

ಕಛೇರಿಯಲ್ಲಿ ಕೆಲಸ ಮಾಡುವುದು ಹೇಗೆ……?

ಯಾವಾಗಲೂ ಅಷ್ಟೇ ದಿನ ಪೂರ್ತಿ ಕುಳಿತುಕೊಂಡೇ ಕೆಲಸ ಮಾಡಿದರೆ ನಿಮ್ಮ ಪೂರ್ಣ ಸಾಮರ್ಥ್ಯವನ್ನು ವಿನಿಯೋಗ ಮಾಡಲು ಸಾಧ್ಯವಿಲ್ಲ. ಈ ರೀತಿ ಕುಳಿತುಕೊಂಡೇ ಇದ್ದರೆ ನಿಮ್ಮ ಕೆಲಸ ಸಾಮರ್ಥ್ಯವನ್ನು ಕಡಿಮೆ ಮಾಡುವುದರ ಜೊತೆಗೆ ಏಕಾಗ್ರತೆಯನ್ನೂ ಇಳಿಸುತ್ತದೆ.

ನಡಿಗೆ : ಯಾವುದೋ ವಿಷಯದ ಬಗ್ಗೆ ವ್ಯಕ್ತಿಗಳ ಜೊತೆ ಚರ್ಚಿಸಬೇಕು ಎಂದಿಟ್ಟುಕೊಳ್ಳಿ., ಆಗ ಕುಳಿತುಕೊಂಡು ಮಾತನಾಡುವ ಬದಲು ನಡೆದಾಡುತ್ತಾ ಆ ವಿಷಯದ ಬಗ್ಗೆ ಚರ್ಚಿಸಬಹುದು. ಈ ರೀತಿ ನಡೆಯುತ್ತಾ ಚರ್ಚಿಸುವುದರಿಂದ ಯಾವುದೇ ಸಂಕೀರ್ಣ ಸಮಸ್ಯೆಗೂ ಸುಲಭ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ‘ಆಪಲ್’ ಸಂಸ್ಥೆಯ ಸ್ಟೀವ್ ಜಾಬ್ ಹೇಳುತ್ತಾರೆ. ನಡಿಗೆಯಿಂದ ಕ್ರಿಯೇಟಿವಿಟಿ ಹೆಚ್ಚುತ್ತದೆ ಎಂದು ಹೇಳುವ ಅವರು, ಜೀವನ ಪೂರ್ತಿ ನಡಿಗೆಗೆ ಮಹತ್ವ ನೀಡುವುದಾಗಿ ಹೇಳುತ್ತಾರೆ.

ನಿಂತುಕೊಂಡು ಕೆಲಸ ಮಾಡಿ : ನೀವು ಸ್ವಂತ ಉದ್ಯಮ ಹೊಂದಿದ್ದರೆ ಕನಿಷ್ಠ ದಿನದಲ್ಲಿ ಒಂದು ಅಥವಾ ಎರಡು ಗಂಟೆಗಳಾದರೂ ನಿಂತುಕೊಂಡು ಕೆಲಸ ಮಾಡುವಂತೆ ಕಚೇರಿಲ್ಲಿ ವ್ಯವಸ್ಥೆ ಮಾಡಿ. ಈ ರೀತಿ ನಿಂತುಕೊಂಡು ಕೆಲಸ ಮಾಡಲು ಕೆಲವೊಮ್ಮೆ ಸಾಧ್ಯವಿದೆ. ಹೊಟೇಲ್ ಅಥವಾ ಕ್ಯಾಂಟೀನ್‌ಗೆ ಹೋದರೆ ಕುಳಿತುಕೊಳ್ಳುವ ಬದಲು ನಿಂತು ತಿನ್ನುವ ಅಥವಾ ಕಾಫಿ, ಚಹಾ ಕುಡಿಯುವ ಟೇಬಲ್‌ಗೆ ಆದ್ಯತೆ ನೀಡಿ.

ಕುಳಿತುಕೊಳ್ಳುವ ಭಂಗಿ : ಬಹುತೇಕ ಹೊತ್ತು ಕುಳಿತುಕೊಂಡೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದ್ದರೆ ಆಗ ನೇರ ಭಂಗಿಯಲ್ಲೇ ಕುಳಿತುಕೊಳ್ಳಲು ಪ್ರಯತ್ನಿಸಿ. ಬಗ್ಗಿ ಕುಳಿತುಕೊಂಡು ಕೆಲಸ ಮಾಡಿದರೆ ಹೊಟ್ಟೆಯಲ್ಲಿರುವ ವಪೆಯು ಶ್ವಾಸಕೋಶದ ಮೇಲೆ ಒತ್ತಡ ಹೇರುತ್ತದೆ. ಇದರ ಪರಿಣಾಮವಾಗಿ ಉಸಿರಾಟ ನಿಧಾನವಾಗುತ್ತದೆ. ಇದರಿಂದ ಮೆದುಳಿಗೆ ಸಾಕಷ್ಟು ಆಮ್ಲಜನಕ ಸಿಗದೆ ನಿಮ್ಮ ಕೆಲಸದ ಸಾಮರ್ಥ್ಯ ಕಡಿಮೆಯಾಗುತ್ತದೆ.

Write A Comment