Messages

ಭೂತ್, ಭವಿಷ್ಯತ್, ವರ್ತಮಾನ ಗಳ ನಡುವೆ ಹೆತ್ತವರ ಮಕ್ಕಳ ಪೈಪೋಟಿ.

Pinterest LinkedIn Tumblr

Child_plays_study

ಒಂದೊಂದು ಸಾರಿ ಹಾಗೇ ಸುಮ್ಮನೆ ಅನಿಸುತ್ತದೆ ನಾನು ಈಗ ಹುಟ್ಟಬೇಕಿತ್ತು ಅಂತ… ಯಾಕೆಂದರೆ ಈಗಿನ ಮಕ್ಕಳ ಅತಿ ಸುಂದರ ಜೀವನ ನೋಡಿ. ಶಾಲೆಗೆ ಹೋಗುವಾಗಲೇ ಮೊಬೈಲ್, ಕಂಪ್ಯೂಟರ್,,ಬೈಕ್ ಎಲ್ಲವೂ ಏನುಂಟು ಏನಿಲ್ಲಾ!!! ನೋಡಿದರೆ ಖುಷಿ ಆಗುತ್ತದೆ. ನಾವು ಬೈಕ್ ಬಿಡುವುದಿರಲಿ ಸೈಕಲ್ ಕಲಿತದ್ದೆ ಅವತ್ತಿನ ದಿನಗಳಲ್ಲಿ ದೊಡ್ಡ ಸಾಹಸ. ಆದರೆ ಕಾಲ ಬದಲಾಗಿದೆ. ಜನರು ಬದಲಾಗಿದ್ದಾರೆ… ಸತ್ಯ ಹೇಳ್ತೇನೆ ಸ್ವಾಮಿ ಆಗ ಈ ಬೈಕು ಮೊಬೈಲು ಇರಲಿಲ್ಲ ನಿಜ ಆದರೂ ನಮ್ಮ ಬಾಲ್ಯ ಸುಂದರವಾಗಿತ್ತು. ಯಾಕೆಂದರೆ ನಮಗೆ ಆಡಲು ಸುತ್ತಲೂ ಗೆಳೆಯರ ದಂಡಿತ್ತು..ಕದ್ದು ತಿನ್ನಲು ಯಾರದೋ ತೋಟದ ಪೇರಳೆ ಹಣ್ಣಿತ್ತು.. ಅವರು ಓಡಿಸಿದರೆ ಓಡಲು ನಮ್ಮದೇ ಕಳ್ಳ ದಾರಿ ಇತ್ತು..

ಆದರೆ ನಮಗೆಲ್ಲರಿಗೂ ಒಂದೇ ಗುರಿ ಪಾಸ್ ಆದರೆ ಸಾಕಿತ್ತು…. ನಮ್ಮ ಹೆತ್ತವರಿಗೆ ರ್ಯಾಂಕ್ ನ(rank) ಅಗತ್ಯ ಇರಲಿಲ್ಲ. ಆದರೆ ಈಗ ಬದಲಾದ ಕಾಲದಲ್ಲಿ ಹೆತ್ತವರಿಗೆ ತಮ್ಮ ಮಕ್ಕಳ ಅಂಕ(marks) ಪ್ರತಿಷ್ಠೆಯ ವಿಷಯ ವಾಗಿದೆ. ನಮಗೆ ಶಾಲೆ ಮುಗಿದ ಕೂಡಲೇ ಆಟ., ಕೆಲಸ,, ಹಾಗೆ ಸ್ವಲ್ಪ ಓದು.. ಪಾಸಾದರೆ ಸಾಕು ಅನ್ನೋ ಹೆತ್ತವರ ಆಸೆ.. ಆದರೆ

ಈಗಿನ ಮಕ್ಕಳಿಗೆ ಬರೇ ಪಾಸಾದರೆ ಸಾಲದು.. ಮಾರ್ಕ್ಸ್ ಬೇಕು. ಗ್ರೇಡ್ ಬರಬೇಕು. ಶಾಲೆ ಮುಗಿದ ಮೇಲೆ ಟ್ಯೂಷನ್, ಕಂಪ್ಯೂಟರ್ ಕ್ಲಾಸ್ ಅದೂ ಇದೂ ಅಂತ ಮಗುವನ್ನು ಒತ್ತಡಕ್ಕೆ ಸಿಕ್ಕಿಸುತ್ತಿದ್ದೇವೆ.

ಪಕ್ಕದ ಮನೆಯ ಮಗುವಿಗಿಂತ ನಮ್ಮ ಮಗು ಮುಂದೆ ಇರಬೇಕು. ಆ ಮಗುವಿನ ಅವಸ್ಥೆ ಪಾಪ.. ದಯವಿಟ್ಟು ಮಕ್ಕಳನ್ನು ಮಕ್ಕಳಾಗಿ ಇರಲು ಬಿಡಿ. ಬಾಲ್ಯ ಜೀವನ ಕಳೆದುಕೊಂಡರೆ ಅದರ ಸವಿ ಮತ್ತೊಮ್ಮೆ ಅದು ಸಿಗಲಾರದು. ಹಾಗಂತ ಮಕ್ಕಳಿಗೆ ಶಿಸ್ತು ಕಲಿಸಬೇಡಿ ಅಂಥ ಹೇಳ್ತಾ ಇಲ್ಲ. ಶಿಸ್ತಿಗೂ ಒಂದು ಮಿತಿ ಇರುತ್ತದೆ. ಜೀವನದಲ್ಲಿ ಬರೀ ರ್ಯಾಂಕ್ ಮಾತ್ರ ಮುಖ್ಯ ಅಲ್ಲ. ಮಾನವೀಯತೆ, ಪರರ ಬಗ್ಗೆ ದಯೆ,ಅನುಕಂಪ ಒಟ್ಟಾರೆ ಒಂದೇ ಮಾತಿನಲ್ಲಿ ಹೇಳುವುದಾದರೆ ಮನುಷ್ಯರನ್ನಾಗಿ ಬಾಳಲು ಕಲಿಸಿಕೊಟ್ಟರೆ ಅದೇ ದೊಡ್ಡ ರ್ಯಾಂಕ್ ಏನಂತೀರಿ ಸ್ವಾಮೀ???

Write A Comment