ಕನ್ನಡ ವಾರ್ತೆಗಳು

ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಲಿದ್ದಾನೆಂದು ಎಂಬುದರ ಬಗ್ಗೆ ಮಾಹಿತಿ ಪಡೆಯುವುದು ಹೇಗೆ?

Pinterest LinkedIn Tumblr

Suicide_solution_pic

ಒಬ್ಬ ವ್ಯಕ್ತಿ ಜೀವನದಲ್ಲಿ ಮಾನಸಿಕವಾಗಿ ನೊಂದುಕೊಂಡಿದ್ದರೆ ಅಥವಾ ಮಾನಸಿಕ ದೌರ್ಬಲ್ಯ ಉಂಟಾಗಿದ್ದರೆ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ನಮಗೆ ಗೊತ್ತಿರುವ ವಿಚಾರ.  ಆತ್ಮಹತ್ಯೆ ಮಾಡಿಕೊಳ್ಳುವುದು ಮೊದಲೇ ಗೊತ್ತಾದರೆ ನಮಗೆ ಅದನ್ನು ತಡೆಯಬಹುದಿತ್ತು ಎಂದು ಅನ್ನಿಸುವುದಿದೆ. ಆದರೆ ಆತನನ್ನು ಕಳೆದುಕೊಂಡಾಗಲೇ ನಮಗೆ ಆತನ ಮಾನಸಿಕ ವೇದನೆ ಇತ್ಯಾದಿಗಳ ಅರಿವಾಗವುದು.

ಆತ್ಮಹತ್ಯೆ :
1. ತನ್ನಲ್ಲಿರುವ ಅಮೂಲ್ಯವಾದ ವಸ್ತುವನ್ನು ತನ್ನ ಆತ್ಮೀಯರಾದವರಿಗೆ ನೀಡುವುದು…
ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವ ವ್ಯಕ್ತಿ ನೇರವಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಲಾರ. ಆದರೆ ತನ್ನಲ್ಲಿರುವ ಅಮೂಲ್ಯವಾದ ವಸ್ತುಗಳನ್ನು ಆತ ತನ್ನ ಆತ್ಮೀಯರಿಗೆ ಅಂದರೆ ಆ ವಸ್ತುವನ್ನು ಚೆನ್ನಾಗಿ ಕಾಪಾಡಬಲ್ಲ ವ್ಯಕ್ತಿಗೆ ನೀಡುವು ಸಾಧ್ಯತೆ ಇದೆ.

2. ಸಾವಿನ ವಿಚಾರದಲ್ಲಿ ಒಗಟಾಗಿ ಮಾತಾಡುತ್ತಾನೆ…
ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಮುಂದಾಗುವಂತಿದ್ದರೆ ಆತ ಒಗಟಾಗಿ ಮಾತನಾಡುವ ಸಾಧ್ಯತೆ ಇದೆ. ಸಾವು, ಜೀವನ, ಸಂಪತ್ತು, ಜ್ಞಾನ ಇತ್ಯಾದಿಗಳ ಬಗ್ಗೆ ಆತನದ್ದೇ ಆದ ಹೇಳಿಕೆಗಳನ್ನು ನೀಡುತ್ತಾ ಒಂಥರಾ ಒಗಟಾಗಿ ಮಾತನಾಡಲು ಸಾಧ್ಯತೆ ಇದೆ.

3. ಸಾವಿನ ಬಗ್ಗೆ ಏನಾದರೊಂದು ಸುಳಿವು ನೀಡುತ್ತಾನೆ
ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಮುಂದಾಗಿದ್ದರೆ ಆತ ಎಂದಿಗೂ ಕೂಡಾ ನಾನು ನಾಳೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನೇರವಾಗಿ ಹೇಳಲಾರ, ಆದರೆ ಈ ಬಗ್ಗೆ ಏನಾದರೊಂದು ಸುಳಿವು ನೀಡಿಯೇ ನೀಡುತ್ತಾನೆ. ಉದಾಹರಣೆಗೆ ಮುಂದಿನವಾರ ಯಾರದ್ದಾರೂ ಮದುವೆ ಇದೆ ಎಂದು ಇಟ್ಟುಕೊಳ್ಳೋಣ, ಆತ್ಮಹತ್ಯೆಗೆ ಮುಂದಾಗುವ ವ್ಯಕ್ತಿ ಆ ಮದುವೆ ವೇಳೆ ಇರುತ್ತೇನೋ ಇಲ್ವೋ ಎಂದು ಹೇಳಿಕೆ ನೀಡುವ ಸಾಧ್ಯತೆ ಇದೆ.

4. ಕಾಗದದಲ್ಲಿ ಏನಾದರೊಂದು ಬರೆಯುತ್ತಾ ಇರುವುದು..
ಆತ್ಮಹತ್ಯೆಗೆ ಮುಂದಾಗುವ ಮುಂಚೆ ಆತ ಡೆತ್ ನೋಟ್ ಬರೆಯುತ್ತಾನೆ ಎಂದು ನಮಗೆ ಗೊತ್ತೇ ಇದೆ. ಆದರೆ ಆತ ಬರೆಯುವ ಡೆತ್‍ನೋಟ್ ಅದೊಂದೇ ಆಗಿರಲು ಸಾಧ್ಯವಿರಲಿಕ್ಕಿಲ್ಲ. ಆತ ಸಾಯುವ ಮುಂಚೆ ಅನೇಕ ಸಾರಿ ಡೆತ್‍ನೋಟ್ ಬರೆಯಲು ಆರಂಭಿಸುತ್ತಾನೆ. ಆದರೆ ಅದು ಆತನಿಗೆ ಖುಷಿ ಕೊಡಲಿಕ್ಕೆ ಸಾಧ್ಯವಿರಲಿಕ್ಕಿಲ್ಲ. ಅಥವಾ ಯಾರಿಂದಾದಲೂ ಅಡಚಣೆ ಎದುರಾಗಿರಬಹುದು. ತನ್ನ ವೇದನೆಯನ್ನು ಬೇರೆ ಬೇರೆ ರೀತಿಯಲ್ಲಿ ಬರೆಯಲೂ ಸಾಧ್ಯವಿದೆ. ಕೆಲವು ವೇಳೆ ಸಾಯಲು ಸೂಕ್ತ ಸಮಯ ಸಿಕ್ಕಿದರೂ ಅದಕ್ಕೆ ಕೆಲವರಿಂದ ಅಡಚಣೆ ಉಂಟಾದರೆ ಸಾಯುವ ದಿನವನ್ನು ಮುಂದಕ್ಕೆ ಪೋಸ್ಟ್‍ಪೋನ್ ಮಾಡುವ ಸಾಧ್ಯತೆ ಇದೆ.

5. ಆತ್ಮಹತ್ಯೆ ಮಾಡಲಿರುವ ವ್ಯಕ್ತಿ ಮುಖದ ಚಿತ್ರ ಬರೆಯುತ್ತಾನಂತೆ…
ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಮಾನಸಿಕ ಒತ್ತಡದಿಂದ ಬಳಲುತ್ತಿರವುದರಿಂದ ಆತ ಪುಸ್ತಕದಲ್ಲಿ ಮುಖದ ಚಿತ್ರಗಳನ್ನು ಬರೆಯುತ್ತಾ ಇರುತ್ತಾನೆಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಮೊದಲು ಕಣ್ಣನ್ನು ಬಿಡಿಸುವ ವ್ಯಕ್ತಿ ಬಳಿಕ ಮುಖದ ಚಿತ್ರವನ್ನು ಅದಕ್ಕೆ ಬಿಡಿಸುತ್ತಾನೆ. ಇದರ ಅರ್ಥವೇನೆಂದರೆ ಆತ ಮಸ್ಸಿನಲ್ಲಿ ಅನೇಕ ಚಿಂತೆ ಇಟ್ಟುಕೊಂಡು ವೇದನೆ ಪಡುತ್ತಿದ್ದಾನೆಂದು ಅರ್ಥ.

6. ದಿಢೀರ್ ನಿರ್ಧಾರದಿಂದ ಆತ್ಮಹತ್ಯೆ
ಕೆಲವರು ಆತ್ಮಹತ್ಯೆಗೆ ಮೊದಲೇ ಸ್ಕೆಚ್ ಹಾಕಿಕೊಂಡಿದ್ದರೆ ಇನ್ನು ಕೆಲವರದ್ದು ದಿಢೀರ್ ನಿರ್ಧಾರವಾಗಿರುತ್ತದೆ. ಒಂದರ್ಥದಲ್ಲಿ ಅವರು ಆತ್ಮಹತ್ಯೆಗೆ ಮುಂದಾಗಿರುವುದಿಲ್ಲ. ಏನಾದರೊಂದು ಘಟನೆ ಘಟಿಸಿದರೆ ಅದನ್ನು ಎದುರಿಸುವುದು ಹೇಗೆ ಎಂದು ತಿಳಿಯದೆ ತಕ್ಷಣ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನಮಗೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಕಲ್ಪಿಸಲೂ ಸಾಧ್ಯವಿರುವುದಿಲ್ಲ. ಆರೀತಿ ಕೆಟ್ಟ ನಿರ್ಧಾರದಿಂದ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

7. ಆತ್ಮಹತ್ಯೆ ಮಾಡಿಕೊಂಡವರದ್ದು ತರ್ಕಬದ್ಧ ಯೋಜನೆ
ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದವರಿಗೆ ಯಾವ ವಿಧಾನದಲ್ಲಿ ಆತ್ಮಹತ್ಯೆ ಮಾಡಿಕೊಂರೆ ಚೆನ್ನ ಎಂದು ತರ್ಕಬದ್ಧವಾಗಿ ಯೋಚಿಸಲಾರಂಭಿಸುತ್ತಾರೆ. ಇದಕ್ಕಾಗಿ ಮೊದಲಿನಿಂದಲೆ ಆಲೋಚಿಸಲು ಆರಂಭಿಸುತ್ತಾರೆ. ಸ್ಥಳ, ಸಮಯ, ಅವಕಾಶ ಸಿಕ್ಕರೆ ಸಂದರ್ಭಕ್ಕನುಸಾರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

8. ಕುತೂಹಲದಿಂದ ಆತ್ಮಹತ್ಯೆ
ಇದನ್ನು ನೀವು ನಂಬ್ತೀರೋ ಬಿಡ್ತೀರೋ, ಹೆಚ್ಚಿನವರಿಗೆ ಸಾಯುವ ಬಗ್ಗೆ ವಿಪರೀತ ಕುತೂಹಲವಿರುತ್ತದೆ. ಇಂಥವರು ಜೀವನದಲ್ಲಿ ನೊಂದಿರುವುದಿಲ್ಲ, ಆದರೆ ಕುತೂಲದಿಂದ ಹುಚ್ಚರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇವರು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಗೊತ್ತೂ ಸಹ ಇರುವುದಿಲ್ಲ.

9. ತನ್ನ ಆತ್ಮಹತ್ಯೆಯಿಂದ ಇತರರ ಮೇಲೆ ಪರಿಣಾಮ ಬೀಳುತ್ತದೆ ಎಂಬ ನಿರ್ಧಾರದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಆತ್ಮಹತ್ಯೆ ಮಾಡುವವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಮಾಡುತ್ತಾರೆ ಎಂದು ನಾವು ನಂಬುವ ವಿಚಾರ. ಕೆಲವರು ಜೀವನದಲ್ಲಿ ಜಿಗುಪ್ಸೆ ಏನೋ ಹೊಂದಿರುವುದಿಲ್ಲ. ತನ್ನ ಆತ್ಮಹತ್ಯೆಯಿಂದ ಇತರರ ಮೇಲೆ ದೊಡ್ಡ ಪರಿಣಾಮ ಬೀಳುತ್ತದೆ, ತನ್ನ ಅವಶ್ಯಕತೆಯ ಬಗ್ಗೆ ಇತರರಿಗೆ ಚೆನ್ನಾಗಿ ಗೊತ್ತಾಗಲಿ ಎಂಬ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಷ್ಟೆ.

10. ಆತ್ಮಹತ್ಯೆ ಬೇಡವಾಗಿತ್ತು ಎಂದು ಗೊತ್ತಾಗುವುದು ಸಾಯುವಾಗಲೇ…
ಆತ್ಮಹತ್ಯೆ ಮಾಡಿಕೊಳ್ಳುವವರು ತುಂಬಾ ಆಲೋಚನೆ ಮಾಡಿಕೊಳ್ಳುತ್ತಾರೆ… ಇದರ ಅಗತ್ಯ ನಿಜವಾಗಿಯೂ ಇದೆಯೇ, ಸಮಸ್ಯೆಯಿಂದ ಹೊರಬರಲು ಸಾಧ್ಯವೇ ಎಂದು ಸಾಕಷ್ಟು ಬಾರಿ ಯೋಚಿಸಿದಾಗಲೂ ಅವರಿಗೆ ನೋ ಎಂಬ ಉತ್ತರ ಬರುತ್ತದೆ. ಹಾಗೆ ಮಾಡಿಕೊಳ್ಳುವವರು ಆತ್ಮಹತ್ಯೆಗೆ ಮುಂದಾಗುತ್ತಾರೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡವಾಗಿತ್ತು ಎಂದು ಗೊತ್ತಾಗುವುದು ಜೀವ ಹೋದಾಗಲೇ… ಆದರೆ ಏನು ಮಾಡುವುದು ಹಾಗೆ ಯೋಚಿಸುವ ವೇಳೆ ಜೀವ ಹೋಗಿಯಾಗಿರುತ್ತದೆ.

ಆತ್ಮಹತ್ಯೆ ಮಾಡುವುದು ಅತಿ ಪಾಪ ಹೇಡಿಗಳ ಕೆಲಸವೆಂದು ನಾವು ಹೇಳುತ್ತೇವೆ. ಅದು ನಿಜ. ಆದರೆ ಒಬ್ಬಾತ ತುಂಬಾ ಮಾನಸಿಕವಾಗಿ ನೊಂದುಕೊಂಡಿದ್ದರೆ ಆತನ ಮನಸ್ಸಿನ ನೋವನ್ನು ಅರ್ಥ ಮಾಡಿಕೊಂಡು ಸಾಂತ್ವಾನದ ನುಡಿಗಳಿಂದ ಆತ್ಮಹತ್ಯೆ ಯೋಚನೆಯಿಂದ ಹಿಂದಕ್ಕೆ ತರಬಹುದು. ಅನೇಕ ಘಟನೆಗಳಲ್ಲಿ ಒಬ್ಬಾತ ಆತ್ಮಹತ್ಯೆ ಮಾಡುವ ವಿಚಾರದಲ್ಲಿ ಅಗೋಚರ ಅಥವಾ ಅತೀಂದ್ರಿಯ ಅನುಭವವಾಗಬಹುದು. ಈ ಬಗ್ಗೆ ಮನೆಯವರು ಅರ್ಥ ಮಾಡಿಕೊಳ್ಳಬಹುದು. ಆತ್ಮಹತ್ಯೆ ಯೋಚನೆ ಬಂದರೆ ಅದನ್ನು ಪೋಸ್ಟ್‍ಫೋನ್ ಮಾಡುತ್ತಾ, ಅದರ ನಿರ್ಧಾರದಿಂದ ಹಿಂದೆ ಸರಿಯಬಹುದು. ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರೆ ತನ್ನ ಆತ್ಮೀಯರಲ್ಲಿ ಏನಾದರೊಂದು ಸುಳಿವು ನೀಡಬಹುದು. ಆ ಸುಳಿವನ್ನು ಅರ್ಥ ಮಾಡಿಕೊಂಡು ಆತನಿಗೆ ಸಾಕಷ್ಟು ಸಾಂತ್ವಾನ, ಕೌನ್ಸೆಲಿಂಗ್, ಮಾನಿಸಿಕ ಚಿಕಿತ್ಸೆ ನೀಡಿದರೆ ಒಂದು ಜೀವವನ್ನು ಉಳಿಸಬಹುದು. ಆಧ್ಯಾತ್ಮಿಕ ಬಲ, ನಿರ್ಲಿಪ್ತತೆ, ಕಠಿಣ ಮನೋಬಲ ಇದ್ದವರು ಏನಾದರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.

Write A Comment