Lifestyle

ಹವಾಮಾನದ ಏರುಪೇರು: ಅರೋಗ್ಯದ ಮೇಲೆ ದುಷ್ಪರಿಣಾಮ

Pinterest LinkedIn Tumblr

Weather_global_health

ಮಂಗಳೂರು,ನ,18 : ವಾತಾವರಣದಲ್ಲಿ ಅತಿಯಾದ ಶಾಖ ಉಂಟಾಗಿ ಸೆಖೆ ಕಾಡುತ್ತದೆ. ಮತ್ತೆ ಸಂಜೆ ವೇಳೆ ಒಮ್ಮೊಮ್ಮೆ ಮೋಡ ಕವಿದ ವಾತಾವರಣ ಇದ್ದರೆ ಅಲ್ಲಲ್ಲೆ ತುಂತುರು ಮಳೆ ಬೀಳುವುದೂ ಈರೀತಿ ಕೆಲವೊಮ್ಮೆ ಅತಿಯಾದ ಸೆಖೆ ಇರುತ್ತದೆ. ಅದರಲ್ಲೂ ಕಳೆದ ಎರಡು-ಮೂರು ದಿನಗಳ ಹಿಂದೆ ನಗರ ಸೇರಿದಂತೆ ವಿವಿಧೆಡೆ ಭಾರೀ ಮಳೆಯೂ ಸುರಿದಿದೆ.

ಮುಂಗಾರು ಮಳೆ ಮುಗಿದು ಹಿಂಗಾರು ಪ್ರಾರಂಭವಾಗಿದೆ. ಆದರೆ, ಮಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ವಾತಾವರಣದಲ್ಲಿ ಏರುಪೇರಾಗುತ್ತಿರುವುದ ರಿಂದ ರೋಗಗಳೂ ಕಾಡತೊಡಗಿವೆ. ಬೆಳಗ್ಗೆ ಏಳು ಗಂಟೆವರೆಗೆ ತಣ್ಣಗಿನ ಗಾಳಿ ಸಹಿತ ಥಂಡಿ ವಾತಾವರಣವಿರುತ್ತದೆ. ಎಂಟು ಗಂಟೆಯಾದ ನಂತರ ಚಿಟಿ ಚಿಟಿ ಬಿಸಿಲು ಪ್ರಾರಂಭವಾಗಿ ಮಧ್ಯಾಹ್ನದ ವೇಳೆಗೆ ಬೇಸಿಗೆ ಮಾದರಿಯಲ್ಲಿ ಬಿಸಿಲು ಕಾಡಲಾರಂಭಿಸುತ್ತದೆ.

ವಾತಾವರಣದಲ್ಲಿ ಅತಿಯಾದ ಶಾಖ ಉಂಟಾಗಿ ಸೆಖೆ ಕಾಡುತ್ತದೆ. ಮತ್ತೆ ಸಂಜೆ ವೇಳೆ ಒಮ್ಮೊಮ್ಮೆ ಮೋಡ ಕವಿದ ವಾತಾವರಣ ಇದ್ದರೆ ಅಲ್ಲಲ್ಲೆ ತುಂತುರು ಮಳೆ ಬೀಳುವುದೂ ಉಂಟು. ಕೆಲವೊಮ್ಮೆ ಅತಿಯಾದ ಸೆಖೆ ಇರುತ್ತದೆ. ಅದರಲ್ಲೂ ಕಳೆದ ಎರಡು-ಮೂರು ದಿನಗಳ ಹಿಂದೆ ನಗರ ಸೇರಿದಂತೆ ವಿವಿಧೆಡೆ ಭಾರೀ ಮಳೆಯೂ ಸುರಿದಿದೆ. ಹೀಗೆ ವಾತಾವರಣದಲ್ಲಿ ಏರುಪೇರು ಆಗುವುದು ಮತ್ತು ಮಳೆ ಸುರಿಯುವುದರಿಂದ ಅನೇಕ ರೋಗಗಳು ಪ್ರಾರಂಭವಾಗಿವೆ.

ಚಳಿಗಾಲದಂತೆ ಈಗಾಗಲೇ ಮೈ-ಕೈ ಬಿರಿಯಲಾರಂಭಿಸಿದ್ದು, ನವೆಯೂ ಪ್ರಾರಂಭವಾಗಿದೆ. ಸಾರ್ವಜನಿಕರು ಎಚ್ಚೆತ್ತುಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ತಾವಾಗಿಯೇ ರೋಗ-ರುಜಿನಗಳನ್ನು ಮೈ ಮೇಲೆ ಎಳೆದುಕೊಂಡಂತಾಗುತ್ತದೆ. ಈಗ ಮಳೆ ಸುರಿದಿರುವುದರಿಂದ ನಗರದಲ್ಲಿ ಮೊದಲೇ ರಾಶಿ ರಾಶಿ ಬಿದ್ದಿರುವ ತ್ಯಾಜ್ಯ ಕೊಳೆತಿದೆ. ನಿಂತಿರುವ ನೀರಿನಲ್ಲಿ ಸೊಳ್ಳೆ ಉತ್ಪತ್ತಿ ಹೆಚ್ಚಾಗಿದೆ. ಮಳೆ ಇಲ್ಲದಿದ್ದರೆ ಧೂಳು ಹೆಚ್ಚಾಗುತ್ತದೆ. ಜೋರು ಗಾಳಿಯೂ ಬೀಸುವುದರಿಂದ ಎಲ್ಲ ಧೂಳುಮಯವಾಗುತ್ತದೆ.ಮೊದಲೇ ಮಂಗಳೂರು,ವಾಹನ ದಟ್ಟಣೆಯಿಂದ ಪರಿಸರ ಕಲುಷಿತವಾಗುತ್ತಿದೆ. ಇತ್ತೀಚೆಗಿನ ಹವಾಮಾನ ಏರುಪೇರಿನಿಂದಾಗಿ ತೊಂದರೆಯೂ ಹೆಚ್ಚುತ್ತಿದೆ. ಈ ಎಲ್ಲ ನಿಟ್ಟಿನಲ್ಲಿ ವಿವಿಧ ರೋಗಗಳು ಕಾಡುವ ಮುನ್ನ ಜನರು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಈಗ ಸರಬರಾಜಾಗುವ ನೀರಿನಲ್ಲಿ ಮಳೆಯಿಂದ ವಿವಿಧ ಭಾಗಗಳಿಂದ ಬರುವ ಕೊಳಕು ನೀರು ಸೇರಿಕೊಂಡಿರುತ್ತದೆ. ಹಾಗಾಗಿ ಕುದಿಸಿ ಆರಿಸಿ ಶೋಧಿಸಿದ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು. ಮನೆಗಳ ಮುಂದೆ ಚರಂಡಿಗಳಿದ್ದರೆ ಅವು ಕಟ್ಟಿಕೊಳ್ಳದಂತೆ ನೋಡಿಕೊಳ್ಳಬೇಕು.ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಯಾವುದೇ ಕಾರಣಕ್ಕೂ ಮನೆಯಲ್ಲಿ ತ್ಯಾಜ್ಯವನ್ನು ಸ್ಟಾಕ್ ಮಾಡಬಾರದು.

ಪ್ರತಿದಿನ ಪೌರ ಕಾರ್ಮಿಕರಿಗೆ ಹೇಳಿ ಕಸ ಸಾಗಿಸುವಂತೆ ಸೂಚಿಸ ಬೇಕು. ವಾಹನ ಸವಾರರಾಗಲಿ, ಇತರರಾಗಲಿ ವಾಹನಗಳ ಹೊಗೆ ಮತ್ತು ಧೂಳು ನಮ್ಮ ಶರೀರ ಸೇರದಂತೆ ನೋಡಿಕೊಂಡರೆ ಉತ್ತಮ. ಸಾಧ್ಯವಾದಷ್ಟು ಮಾಸ್ಕ್ ಧರಿಸಿದರೆ ಒಳಿತು.

Write A Comment