ಎಳೆಯ ಸೀಬೆಕಾಯಿಯ ಕಷಾಯವನ್ನು ಮಜ್ಜಿಗೆ ಜೊತೆ ಸೇವಿಸಿದರೆ ಆಮಶಂಕೆ ಕಡಿಮೆಯಾಗುತ್ತದೆ.
ಮೊಡವೆಗಳಿದ್ದರೆ ಸೀಬೆ ಎಲೆಗಳನ್ನು ಜಜ್ಜಿ ಲೇಪನ ಮಾಡಿದರೆ ಮೊಡವೆಗಳು ದೂರವಾಗುತ್ತವೆ.
ಸೀಬೆ ಎಲೆಯ ಚಿಗುರುಗಳ ಕಷಾಯಕ್ಕೆ ಉಪ್ಪು ಸೇರಿಸಿ ಬಾಯಿಯನ್ನು ಮುಕ್ಕಳಿಸಿದರೆ,ಬಾಯಿ ಹುಣ್ಣು ಗುಣವಾಗುತ್ತದೆ ಮತ್ತು ವಸಡಿನ ರಕ್ತಸ್ರಾವ ನಿಲ್ಲುತ್ತದೆ.
ಕಣ್ಣುರಿ , ಕಣ್ಣುಗಳು ಕೆಂಪಾಗಿದ್ದರೆ ,ಸೀಬೆ ಹೂಗಳನ್ನು ದಾಳಿಂಬೆ ಚಿಗುರಿನ ಜೊತೆ ಕಷಾಯವನ್ನು ಮಾಡಿ ಕಣ್ಣುಗಳ ಮೇಲೆ ಲೇಪನ ಮಾಡಿ .
ಸೀಬೆಹಣ್ಣಿನ ಬೀಜ ತೆಗೆದು ,ಹಣ್ಣಿಗೆ ಹಾಲು,ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
