ಕರಾವಳಿ

ಬೈಂದೂರು ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ಮುತುವರ್ಜಿಯಲ್ಲಿ ಕಾಯಕಲ್ಪ: ಸಂಸದ ಬಿ.ವೈ ರಾಘವೇಂದ್ರ (Video)

Pinterest LinkedIn Tumblr

ಕುಂದಾಪುರ: ನಾವೆಲ್ಲಾ ಸಾಮಾನ್ಯ ಕಾರ್ಯಕರ್ತರು, ದೊಡ್ಡದೊಡ್ಡ ಮುಖಂಡರಿದ್ದು ಅವರೆ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ಕೊಡ್ತಾರೆ- ಸಚಿವ ಕೆ.ಎಸ್. ಈಶ್ವರಪ್ಪ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರಿತು ರಾಜ್ಯಪಾಲರು ಹಾಗೂ ವರಿಷ್ಟರಿಗೆ ದೂರು ನೀಡಿದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಬಳಿ‌ ಪ್ರತಿಕ್ರಿಯೆ ನೀಡಿದರು.

ಕೊಲ್ಲೂರು ತಾಯಿಗೆ ಬಿಟ್ಟಿದ್ದು…..
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಆಯ್ಕೆ ಅತೀ ಶೀಘ್ರ ನಡೆಯಲಿದೆ. ರಾಜಿನಾಮೆ ಕೊಟ್ಟವರ ಮನವೊಲಿಕೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು ಅದು ತಾಯಿ ಮೂಕಾಂಬಿಕೆಗೆ ಬಿಟ್ಟದ್ದು ಎಂದು ಸಂಸದರು ಹಾಗೂ ಶಾಸಕರು ಹೇಳಿಕೆ ನೀಡಿದ್ದಾರೆ‌.

ಕ್ಷೇತ್ರದ ಸಮಗ್ರ ಅಭಿವೃದ್ಧಿ..
ಪ್ರವಾಸೋದ್ಯಮ ಬಲಪಡಿಸಲು ರಾಜ್ಯ ಸರಕಾರ ಹೆಚ್ಚಿನ ಅದ್ಯತೆ ನೀಡುತ್ತಿದ್ದು, ಶಾಸಕರ ಅಪೇಕ್ಷೆ ಹಿನ್ನೆಲೆ ಬೈಂದೂರು ಕ್ಷೇತ್ರದಲ್ಲಿ ಪ್ರವಾಸೋಧ್ಯಮಕ್ಕೆ ಒತ್ತು ನೀಡಿದರೆ ಯುವಶಕ್ತಿಗೆ ಉದ್ಯೋಗ ಸೃಷ್ಟಿ ಮಾಡುವುದಲ್ಲದೆ ಪ್ರವಾಸಿಗರಿಗೂ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಬೈಂದೂರಿನ ಮರವಂತೆ, ಸೋಮೇಶ್ವರ ಕಡಲ ಕಿನಾರೆಯನ್ನು ಪ್ರವಾಸೋದ್ಯಮದಡಿಯಲ್ಲಿ ಅಭಿವೃದ್ದಿ ಮಾಡುವ ಬಗ್ಗೆ ಅಧಿಕಾರಿಗಳ ಜೊತೆ ಸಭೆ ಕರೆದಿದ್ದು ಅತೀ ಶೀಘ್ರ ಈ ಬಗ್ಗೆ ಡಿಪಿಆರ್ ಸಿದ್ಧಪಡಿಸಿ ಟೆಂಡರ್ ಕರೆಯಲು ಕ್ರಮಗೈಗೊಳ್ಳಲಾಗುತ್ತದೆ. ಮಾಡುವ ಯಾವುದೇ ಕೆಲಸ ಕಣ್ಣಿಗೆ ಕಾಣುವಂತಿರಬೇಕು. ಹಿಂದೆಲ್ಲಾ ಹಣ ಬಿಡುಗಡೆಗೆ, ಡಿಪಿಆರ್ ಗೆ, ಟೆಂಡರ್ ನೀಡಲು ಒಂದೊಂದು ಸರಕಾರ ಕೆಲಸ ಮಾಡಿ ಆ ಯೋಜನೆ ಬೇರೆಯದೆ ಅವ್ಯವಸ್ಥೆ ಹೋಗುತ್ತಿತ್ತು. ಆದರೆ ಸಿಎಂ‌ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಹಣ ಬಿಡುಗಡೆಯಾದ ವರ್ಷದಲ್ಲೆ ಕೆಲಸ ಮುಗಿಸಲು ಸಲಹೆ ನಿಡಲಾಗಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಬೈಂದೂರಿನಲ್ಲಿ ಏರ್ ಫೋರ್ಟ್..
ಏರ್ ಪೋರ್ಟ್ ಎಂದರೆ ಶ್ರೀಮಂತರಿಗೆ ಮಾತ್ರವಲ್ಲ ಮಧ್ಯಮ ವರ್ಗದವರು ಕೂಡ ರಾಜ್ಯ ಹಾಗೂ ದೇಶವನ್ನು ಅರ್ಧ ಬೆಲೆಯಲ್ಲಿ ವಿಮಾನದಲ್ಲಿ ತಿರುಗಿ ಪ್ರವಾಸ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಉಡಾನ್ ಯೊಜನೆಯಲ್ಲಿ ವಿಮಾನ ನಿಲ್ದಾಣ ಮಾಡಲು ಬೈಂದೂರು ಒತ್ತಿನೆಣೆ ಬಳಿ ರನ್ ವೇ ಮಾಡಲು ಚಿಂತನೆ ಇದೆ ಎಂದರು. ರೈಲ್ವೇ, ವಿಮಾನ ಯಾನ, ಪ್ರವಾಸೋಧ್ಯಮ ಬಲಪಡಿಸುವಲ್ಲಿ ಸ್ಥಳೀಯ ಶಾಸಕರ ಕನಸು ಸಾಕಾರಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಬೈಂದೂರು ತಾಲೂಕು ಕೇಂದ್ರವಾದ ಬಳಿಕ ಇಲ್ಲಿನ ಮೂಲಸೌಕರ್ಯ ಒದಗಿಸಲು ಕೂಡ ಅಗತ್ಯ ಕ್ರ‌ಮ ಕೈಗೊಂಡಿದ್ದು ಹಂತಹಂತವಾಗಿ ಅಭಿವೃದ್ದಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೈಂದೂರು ಆಸ್ಪತ್ರೆಗೆ ಉತ್ತಮ ವೈದ್ಯರ ನೇಮಕದ ಬಗ್ಗೆ ಶಾಸಕರು ಸಂಬಂದ ಪಟ್ಟ ಸಚಿವರ ಗಮನ ಸೆಳೆದಿದ್ದಾರೆ ಎಂದು ಸಂಸದ ರಾಘವೇಂದ್ರ ಹೇಳಿದರು.

ನಾಗರಿಕ ಸಹಾಯವಾಣಿ ಕೇಂದ್ರದ ಬಗ್ಗೆ..
ಇಡೀ ದೇಶದಲ್ಲಿ ಸರಕಾರಿ ಆಸ್ಪತ್ರೆಯಲ್ಲಿದ್ದ ನಾಗರಿಕ ಸಹಾಯವಾಣಿ ಕೇಂದ್ರವನ್ನು ಬದಲಾವಣೆ ಮಾಡಿ ಆನ್ಲೈನ್ ಮೂಲಕ ಈ ವ್ಯವಸ್ಥೆ ನಿರ್ವಹಿಸಲು ಯೋಚಿಸಲಾಗಿದೆ. ಹಿಂದಿನ ಯೋಜನೆ ಹಾಗೂ ಈಗಿನ ವ್ಯವಸ್ಥೆಯ ಸಾಧಕ ಬಾದಕ ಪರಿಶೀಲಿಸಿ ಹಳೆ ವ್ಯವಸ್ಥೆ ಉತ್ತಮವಾದರೆ ಮತ್ತೆ ಮುಂದುವರಿಸುವ ಯೋಚನೆ ನಡೆಯುತ್ತಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.