ಕರಾವಳಿ

ಧಾರ್ಮಿಕ ಕ್ಷೇತ್ರ ಅಪವಿತ್ರಗೊಳಿಸಿದ ಆರೋಪಿಗಳು ಕಾರಣಿಕ ಶಕ್ತಿ ಕೊರಗಜ್ಜನಿಗೆ ಶರಣಾಗತಿ : ಉನ್ನತ ಮಟ್ಟದ ತನಿಖೆಗೆ ವಿಹಿಂಪ ಆಗ್ರಹ

Pinterest LinkedIn Tumblr

ಮಂಗಳೂರು, ಏಪ್ರಿಲ್.01: ಜಿಲ್ಲೆಯಾಧ್ಯಂತ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಕುಕೃತ್ಯ ನಿರಂತರವಾಗಿ ನಡೆಯುತಿದ್ದನ್ನು ಖಂಡಿಸಿ, ವಿಶ್ವ ಹಿಂದು ಪರಿಷದ್ ನೇತೃತ್ವದಲ್ಲಿ ಜನಜಾಗೃತಿ ಪ್ರತಿಭಟನೆಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಪೊಲೀಸರಿಗೆ ಮನವಿ ಮತ್ತು ಕದ್ರಿ ದೇವಸ್ಥಾನದಿಂದ ಕುತ್ತಾರು ಕೊರಗಜ್ಜನ ಕ್ಷೇತ್ರದ ವರೆಗೆ ಪಾದಯಾತ್ರೆ, ಸಾಮೂಹಿಕ ಪ್ರಾರ್ಥನೆ ನಡೆಸಿತ್ತು.

ಮಾರ್ಚ್ 21 ರಂದು ನಡೆದ ಪಾದಯಾತ್ರೆ ಕಾರ್ಯಕ್ರಮದಲ್ಲಿ ” ಹಿಂದು ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುತ್ತಿರುವುದು ಜಿಲ್ಲೆಯಲ್ಲಿ ಅಸಂಖ್ಯಾತ ಹಿಂದೂಗಳ ಮನಸಿಗೆ ನೋವುಂಟಾಗಿದೆ. ಈ ನೀಚ ಕೃತ್ಯ ಮಾಡಿದವರು ಇನ್ನು ಪತ್ತೆಯಾಗಿಲ್ಲ. ಆ ದುಷ್ಟ ಶಕ್ತಿಗಳು ಆದಷ್ಟುಬೇಗ ಪತ್ತೆಯಾಗಬೇಕೆಂದು” ದೈವ ದೇವರಲ್ಲಿ ಸಮಸ್ತ ಹಿಂದೂಗಳ ಪರವಾಗಿ ಪ್ರಾರ್ಥಿಸಲಾಗಿತ್ತು.

ಇದೀಗ ಸಮಸ್ತ ಹಿಂದೂಗಳ ಪ್ರಾರ್ಥನೆಗೆ ದೈವ ದೇವರುಗಳು ಅನುಗ್ರಹ ನೀಡಿದ್ದು ಈ ಘಟನೆಗೆ ಸಂಭಂದ ಪಟ್ಟ ಹಾಗೆ ಕೃತ್ಯ ನಡೆಸಿದವರು ಯಾರೆಂದು ತಿಳಿದುಬಂದಿದ್ದು ಅವರ ಬಂಧನದಿಂದ ತುಳುನಾಡಿನ ದೈವ ದೇವರುಗಳ ಶಕ್ತಿಯು ಅನಾವರಣಗೊಂಡಿದೆ, ಇದರಿಂದ ಸಮಸ್ತ ಭಕ್ತರು ತುಳುನಾಡಿನ ದೈವಗಳ ಶಕ್ತಿಯನ್ನು ಕೊಂಡಾಡುವಂತಾಗಿದೆ ಎಂದು ವಿಶ್ವ ಹಿಂದು ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ತಿಳಿಸಿದ್ದಾರೆ.

ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದವರಿಂದ ಎಮ್ಮೆಕೆರೆ ಬಬ್ಬುಸ್ವಾಮಿ ಮತ್ತು ಕೊರಗಜ್ಜನ ಸನ್ನಿದಿಯಲ್ಲಿ ಶರಣಾಗತಿ:

ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿ ಅಪಚಾರ ಎಸಗಿದ ಆರೋಪಿಗಳಲ್ಲಿ ಇಬ್ಬರು ಜೋಕಟ್ಟೆ ನಿವಾಸಿಗಳಾದ ಅಬ್ದುಲ್ ತಹೀಂ, ಅಬ್ದುಲ್ ತೌಫೀಕ್ ನೆನ್ನೆ 31 ಮಾರ್ಚ್ 2021 ನೇ ಬುಧವಾರ ಎಮ್ಮೆಕೆರೆಯ ಬಬ್ಬುಸ್ವಾಮಿ -ಕೊರಗಜ್ಜನ ಕ್ಷೇತ್ರದಲ್ಲಿ ಕೊರಗಜ್ಜನ ಕೋಲದ ಸಂಧರ್ಭದಲ್ಲಿ ಶರಣಾಗಿದ್ದಾರೆ.

ಕೃತ್ಯವೆಸಗುತ್ತಿದ್ದ ಪ್ರಮುಖ ಆರೋಪಿ ನವಾಝ್ ಎಂಬಾತ ಕೃತ್ಯವೆಸಗಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದು, ಕೆಲ ದಿನಗಳ ಹಿಂದೆ ರಕ್ತಕಾರಿ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ. ಕೆಲ ದಿನಗಳ ಮುಂಚಿತವಾಗಿ ದೈವಸ್ಥಾನ ಮುಖ್ಯಸ್ಥರಿಗೆ ಕರೆ ಮಾಡಿ ಹರಕೆ ಸಲ್ಲಿಸಲಿದ್ದೇವೆಂದು ದಿನ ನಿಗದಿ ಮಾಡಿದ್ದ ಆರೋಪಿಗಳು ಕೊರಗಜ್ಜನ ಕೋಲದ ಸಂದರ್ಭದಲ್ಲಿ ತಾವು ಕೃತ್ಯ ಮಾಡಿರುವುದನ್ನು ಒಪ್ಪಿ ಕೊರಗಜ್ಜನ ಪಾದಕ್ಕೆ ಶರಣಾಗಿದ್ದಾರೆ ಎಂದು ಶರಣ್ ಪಂಪುವೆಲ್ ತಿಳಿಸಿದ್ದಾರೆ.

ಧಾರ್ಮಿಕ ಕ್ಷೇತ್ರ ಅಪವಿತ್ರಗೊಳಿಸಿದ ಆರೋಪಿಗಳ ಬಂಧನ – ಉನ್ನತ ತನಿಖೆಗೆ ಆಗ್ರಹ – ವಿಶ್ವ ಹಿಂದು ಪರಿಷತ್ ಬಜರಂಗದಳ:

ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿ ಅಪಚಾರ ಎಸಗಿದ ಜೋಕಟ್ಟೆಯ ಅಬ್ದುಲ್ ತೌಫೀಕ್ ಮತ್ತು ಅಬ್ದುಲ್ ರಹೀಮ್ ಎನ್ನುವವರನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಈ ಕೃತ್ಯದಲ್ಲಿ ಭಾಗಿಯಾದ ಜೋಕಟ್ಟೆಯ ನವಾಜ್ ಎಂಬಾತ ರಕ್ತಕಾರಿ ಮೃತಪಟ್ಟಿದ್ದಾನೆ. ಈ ಕೃತ್ಯದ ಹಿಂದೆ ಇನ್ನು ಸಾಕಷ್ಟು ಜನರ ಕೈವಾಡವಿದ್ದು ಇದೊಂದು ವ್ಯವಸ್ಥಿತ ತಂಡದ ಕೃತ್ಯವಾಗಿದೆ.

ನಿನ್ನೆ ಬಂಧಿಸಿದವರನ್ನು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸಿ ಉನ್ನತ ಮಟ್ಟದ ತನಿಖೆಯನ್ನು ಮಾಡಬೇಕು ಮತ್ತು ಈ ಕೃತ್ಯದ ಜಾಲವನ್ನು ಭೇದಿಸಬೇಕೆಂದು ವಿಶ್ವ ಹಿಂದು ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

Comments are closed.