ಕರಾವಳಿ

ರಕ್ತಪಾತ, ಗೋಹತ್ಯೆ ಬೆಂಬಲಿಸಿದ್ಯಾರೆಂದು ತನಿಖೆ ನಡೆಸಲಿ: ನಳಿನ್ ಕುಮಾರ್ ಕಟೀಲಿಗೆ ತಿರುಗೇಟು ಕೊಟ್ಟ ಡಿ.ಕೆ.ಶಿ

Pinterest LinkedIn Tumblr

ಕುಂದಾಪುರ: ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ ರಕ್ತಪಾತ ಯಾರು ನಡೆಸಿದ್ದಾರೆ, ಗೋಹತ್ಯೆ ಬೆಂಬಲಿಸುವವರನ್ನು ಯಾರು ಬೆಂಬಲಿಸಿದ್ದಾರೆ ಎನ್ನುವ ಕುರಿತು ಪ್ರಾಮಾಣಿಕ ತನಿಖೆ ನಡೆಸಲಿ ಅಲ್ಲದೆ ನಳೀನ್ ಕುಮಾರ್ ಕಟೀಲ್ ಇನ್ನಷ್ಟು ಕಾಲ ಅಧ್ಯಕ್ಷರಾಗಿ ಮುಂದುವರಿಯಲಿ ಎಂದು ಹಾರೈಸುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಅವರು ಭಾನುವಾರ ಹೆಮ್ಮಾಡಿ ಸಮೀಪದ ಕಟ್ ಬೆಲ್ತೂರಿನಲ್ಲಿರುವ ಮಾಜಿ ಶಾಸಕ ಗೋಪಾಲ ಪೂಜಾರಿ ಮನೆಯಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಆತ್ಮಹತ್ಯೆ ಯತ್ನ ಪ್ರಕರಣ ವಿಚಾರದಲ್ಲಿ ಯಾರ್ಯಾರೊ ಮೈಮುಟ್ಟಿ ನೋಡಿಕೊಳ್ಳುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಸಂತೋಷ್ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ದಾಖಲೆ ನಾಶವಾಗುವ ಮುನ್ನವೇ ಈ ಪ್ರಕರಣದ ಸಂಪೂರ್ಣ ತನಿಖೆ ನಡೆಯಲಿ ಈ ವಿಚಾರದಲ್ಲಿ ನಾನು ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲಈಶ್ವರಪ್ಪನವರು, ಬೆಳಗಾಮಿನವರು, ಎಮ್ಎಲ್ಸಿ ಯವರು ಹೆಗಲು ಮುಟ್ಟಿ ನೋಡಿಕೊಳ್ಳುವುದು ಯಾಕೆ? ಎಂದು ಅವರು ಪ್ರಶ್ನಿಸಿದರು.

ಮೂರ್ನಾಲ್ಕು ತಿಂಗಳ ಹಿಂದೆಯೇ ಸಿಡಿ ವಿಚಾರದ ಕುರಿತು ಬ್ಲ್ಯಾಕ್ ಮೇಲ್ ಆಗಬಹುದು ಎನ್ನುವ ಮಾಹಿತಿ ಇತ್ತು ಸರಕಾರ ತನಿಖೆ ನಡೆಸಿ ಜನತೆಯ ಮುಂದೆ ಸತ್ಯ ಬಹಿರಂಗಪಡಿಸಲಿ ಸಂತೋಷ್ ಅವರ ಪತ್ನಿಯೇ ನಮ್ಮಿಬ್ಬರ ದಾಂಪತ್ಯದಲ್ಲಿ ಬಿರುಕಿಲ್ಲ ಎಂದಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ರಾಜಕೀಯವೇ ಕಾರಣ ಎಂದಿದ್ದಾರೆ ಪತ್ನಿಯ ಹೇಳಿಕೆಯನ್ನಾಧರಿಸಿಯೂ ತನಿಖೆ ನಡೆಯಲಿ ಎಂದು ಅವರು ಹೇಳಿದರು.

ನಾನು ಯಾರೋ ಒಬ್ಬ ವ್ಯಕ್ತಿಯ ಬಗ್ಗೆ ನಾನು ಮಾತನಾಡುತ್ತಿಲ್ಲ ಸರಕಾರ ರಚನೆಯ ಸಂದರ್ಭದಲ್ಲಿ ಸಂತೋಷ್ ಪ್ರಮುಖ ಪಾತ್ರ ವಹಿಸಿದ್ದರು ಸಿಎಂ ರಾಜಕೀಯ ಕಾರ್ಯದರ್ಶಿಯವರೆ ಆತ್ಮಹತ್ಯೆಯಂತ ಪ್ರಯತ್ನಕ್ಕೆ ಮುಂದಾಗಿರುವುದರಿಂದ ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕು ಎಂದು ಅವರು ಹೇಳಿದರು.

ರಾಜ್ಯ ಸಂಪುಟ ರಚನೆಯ ಬಗ್ಗೆ ಅಶೋಕಣ್ಣ, ಈಶ್ವರಪ್ಪ ಮುಂತಾದವರು ಮಾತನಾಡುತ್ತಾರೆ ನಮಗ್ಯಾಕೆ ಆ ಪಕ್ಷದ ಉಸಾಬರಿ ಎಂದರು.

ಈ ಸಂದರ್ಭ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮೊದಲಾದವರಿದ್ದರು.

Comments are closed.