ಕರಾವಳಿ

ಪ್ರತಿಷ್ಠಿತ ಬೃಹತ್ ಬಟ್ಟೆ ಮಳಿಗೆಯನ್ನೇ ಮುಚ್ಚಿಸಲು ಕಾರಣವಾದ ವೀಡಿಯೋ !

Pinterest LinkedIn Tumblr

ಚೆನ್ನೈ : ವ್ಯಕ್ತಿಯೊಬ್ಬರು ಕುತೂಹಲಕ್ಕಾಗಿ ತೆಗೆದ ವೀಡಿಯೋ ಒಂದು ಪ್ರತಿಷ್ಠಿತ ಬಟ್ಟೆ ಮಳಿಗೆಯನ್ನೇ ಮುಚ್ಚಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈನ ಪ್ರತಿಷ್ಠಿತ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ ಖರೀದಿಸಲು ಸಾಕಷ್ಟು ಜನ ಸಂದಣಿ ಸೇರಿತ್ತು. ಈ ಮಳಿಗೆಯಲ್ಲಿ ಜನಸಂದಣಿ ಹೇಗಿದೆ ಎಂದು ತೋರಿಸಲು ವ್ಯಕ್ತಿಯೊಬ್ಬರು ಇದನ್ನು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು.

ಆದರೆ ಈ ವೀಡಿಯೋದಿಂದ ಬಟ್ಟೆ ಮಳಿಗೆಯೇ ಮುಚ್ಚುವಂತಹ ಸ್ಥಿತಿಗೆ ಬರಬಹುದು ಎಂದು ಯಾರೂ ಉಹಿಸಿರಲಿಲ್ಲ. ಆದರೆ ಹಾಗಿದ್ದು ಅದೆ. ಈ ವೀಡಿಯೋ ಜಲತಾಣಗಳಲ್ಲಿ ವೈರಲ್ ಆಗಿತ್ತು. ಕೊರೋನಾ ಸೋಂಕು ಭೀತಿ ಇರುವ ಈ ಸಂದರ್ಭದಲ್ಲಿ ಬಟ್ಟೆ ಮಳಿಯ ಮಾಲಕರು ಮುಂಜಾಗೃತ ಕ್ರಮ ವಹಿಸದೇ ಇರುವುದನ್ನು ನೋಡಿದ ನೆಟ್ಟಿಗರು ಬಟ್ಟೆ ಅಂಗಡಿಯ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ಮಾತ್ರವಲ್ಲದೇ ಈ ಬಟ್ಟೆ ಮಳಿಗೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದೇ ವೇಳೆ ಈ ವೀಡಿಯೋ ವೀಕ್ಷಿಸಿದಂತ ಅಧಿಕಾರಿಗಳೂ ಕೂಡಲೇ ಎಚ್ಚೆತ್ತುಕೊಂಡು, ಬಹುದೊಡ್ಡ ಬಟ್ಟೆ ಅಂಗಡಿಯನ್ನೇ ಬಂದ್ ಮಾಡಿ ಸೀಲ್ ಮಾಡಿದ್ದಾರೆ. ಈ ಬಟ್ಟೆ ಅಂಗಡಿಯಲ್ಲಿ ಸಾಮಾಜಿಕ ಅಂತರವೂ ಇಲ್ಲ. ಬಟ್ಟೆ ಖರೀದಿಸಲು ನೆರೆದಿರುವಂತ ಜನರು ಮಾಸ್ಕ್ ಕೂಡ ಧರಿಸಿಲ್ಲ. ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವನ್ನು ಈ ಬಟ್ಟೆ ಅಂಗಡಿ ಗಾಳಿಗೆ ತೂರಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಈ ಘಟನೆ ಚೈನೈನಲ್ಲಿ ನಡೆದಿದ್ದು, ಚೆನ್ನೈನ ಕಾರ್ಪೋರೇಷನ್ ಅಧಿಕಾರಿಗಳು ಸೀಲ್ ಮಾಡಿರುವ ಬೃಹತ್ ಬಟ್ಟೆ ಮಳಿಗೆಯ ಹೆಸರು ಕುಮಾರನ್ ಸಿಲ್ಕ್. ಇದು ಚೈನೈ ಸೇರಿದಂತೆ ವಿವಿದೆಡೆಗಳಲ್ಲಿ ಪ್ರತಿಷ್ಠಿತ ಬಟ್ಟೆ ಮಳಿಗೆಯಾಗಿದೆ.

ಘಟನೆ ನಡೆದಿದ್ದು ನಿನ್ನೆ ಅಂದರೆ ಅಕ್ಟೋಬರ್ 19ರಂದು. ಪ್ರಿಯಾಂಕ ಎಂಬುವರು ಚೆನ್ನೈನ ಈ ಪ್ರಸಿದ್ಧ ಬಟ್ಟೆ ಅಂಗಡಿಯಲ್ಲಿ ಜನಸಂದಣಿ ಸೇರಿರುವ ಬಗ್ಗೆ ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಈ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಜೊತೆಗೆ ಅಂಗಡಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿತ್ತು. ಇದೀಗ ಕುಮಾರನ್ ಸಿಲ್ಕ್ ಬಟ್ಟೆ ಅಂಗಡಿಯನ್ನು ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ನೀಡಿ ಅಧಿಕಾರಿಗಳು ಸೀಲ್ ಮಾಡಿದ್ದಾರೆ.

Comments are closed.