ಪ್ರಮುಖ ವರದಿಗಳು

ಇಂದು ಸಂಜೆ 6 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ…!

Pinterest LinkedIn Tumblr

ನವದೆಹಲಿ: ಇಂದು (ಮಂಗಳವಾರ) ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ಇಂದು ಸಂಜೆ ಆರು ಗಂಟೆಗೆ ದೇಶವನ್ನುದ್ದೇಶಿಸಿ ಸಂದೇಶ ನೀಡಲಿದ್ದೇನೆ. ನೀವೂ ತಪ್ಪದೇ ಭಾಗವಹಿಸಿ ಎಂದು ಮನವಿ ಮಾಡಿದ್ದಾರೆ.

ದೇಶದಲ್ಲಿ ಕೊರೋನಾ ಗರಿಷ್ಠ ಮಟ್ಟದಲ್ಲಿದೆ. ದೇಶದಲ್ಲಿ ಸಾಲು ಸಾಲಾಗಿ ಹಬ್ಬ, ಉತ್ಸವಾಧಿಗಳು ಸಮೀಪಿಸುತ್ತಿದೆ. ಆರೋಗ್ಯ ಖಾತೆ ಸಚಿವ ಡಾ. ಹರ್ಷವರ್ಧನ್ ಕೊರೋನಾ ಲಸಿಕೆ ಫೆಬ್ರವರಿಯಲ್ಲಿ ತಯಾರಾಗಬಹುದೆಂದು ತಿಳಿಸಿದ್ದು ಮುಂದಿನ ನಾಲ್ಕು ತಿಂಗಳು ಕೊರೋನಾ ಮಾರ್ಗಸೂಚಿಗಳನದ್ನು ಪಾಲಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ವೈಯಕ್ತಿಕ ಸ್ವಚ್ಚತೆ ಬಗ್ಗೆ ಗಮನ ಕೊಡಲು ಜನತೆಯಲ್ಲಿ ವಿನಂತಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಇಂದಿನ ಮೋದಿ ಮಾತಿನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Comments are closed.